ಟಿಕ್ ಟಾಕ್ ಅಜ್ಜಿ ಎಂದೇ ಪ್ರಖ್ಯಾತರಾಗಿದ್ದ ಕಮಲಜ್ಜಿ ಇನ್ನಿಲ್ಲ - Mahanayaka
12:22 AM Tuesday 10 - December 2024

ಟಿಕ್ ಟಾಕ್ ಅಜ್ಜಿ ಎಂದೇ ಪ್ರಖ್ಯಾತರಾಗಿದ್ದ ಕಮಲಜ್ಜಿ ಇನ್ನಿಲ್ಲ

kamala ajji
09/02/2022

ಪುತ್ತೂರು: ಟಿಕ್ ಟಾಕ್ ಅಜ್ಜಿ ಎಂದೇ ಪ್ರಖ್ಯಾತರಾಗಿದ್ದ 86 ವರ್ಷ ವಯಸ್ಸಿನ ಕಮಲ ಅವರು ಇಂದು ಸಂಜೆ ನಿಧನರಾಗಿದ್ದು,  ಈ ಬಗ್ಗೆ ಧನರಾಜ್ ಆಚಾರ್ ಅವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಇಂದು ಸಂಜೆ 4:30ರ ಸುಮಾರಿಗೆ ಕಮಲ ಅವರು ನಿಧನರಾಗಿದ್ದು, ನಾಳೆ ಬೆಳಿಗ್ಗೆ ಧನರಾಜ್  ಅವರ ಅನಂತಾಡಿಯ ಮನೆಯಲ್ಲಿ ಕಮಲಜ್ಜಿಯ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ಧನರಾಜ್ ತಿಳಿಸಿದ್ದಾರೆ.

ಅಜ್ಜಿಯ ನಿಧನದ ಬಗ್ಗೆ ಕಂಬನಿ ಮಿಡಿದಿರುವ ಅವರು,  ಟಿಕ್ ಟಾಕ್ ಅಜ್ಹಿಯೆಂದೇ ಪ್ರೀತಿ ತೋರಿಸಿದ್ದೀರಿ… ಅಜ್ಜಿಯ ಆ ಮುಗ್ಧತೆ ಪ್ರತಿಯೊಂದು ವಿಡಿಯೋದಲ್ಲೂ ಎಷ್ಟೋ ಜನರಿಗೆ ಅವರ ಅಜ್ಜಿಯನ್ನ ನೆನಪು ಮಾಡಿಸಿದ್ದು ಇದೆ.. ಆದರೆ ಈಗ ನಮ್ಮ ಫ್ಯಾಮಿಲಿಯ ಒಗ್ಗಟ್ಟಿಗೆ ಕಾರಣರಾಗಿದ್ದ ಮಗು ಮನಸಿನ ಅಜ್ಜಿ ನಮ್ಮನ್ನೆಲ್ಲ ಬಿಟ್ಟು ಇಂದು ಸಂಜೆ 4:30 ಕ್ಕೆ ‌ನೆನಪುಗಳೊಂದಿಗೆ ಅಗಲಿದ್ದಾರೆ…  86ರ ವಯಸ್ಸಿನ ಕಮಲಜ್ಜಿಗೆ ಭಾವಪೂರ್ಣ ವಿದಾಯ ನಾಳೆ ಬೆಳಗ್ಗೆ ನಮ್ಮ ಮನೆ ಅನಂತಾಡಿಯಲ್ಲಿ ಅಜ್ಜಿಯ ಅಂತಿಮ ದರ್ಶನ ಎಂದು ತಿಳಿಸಿದ್ದಾರೆ.

ಅಜ್ಜಿ ಇನ್ನು ನೆನಪು ಮಾತ್ರ,  ಅಜ್ಜಿ ಜೊತೆ ವಿಡಿಯೋ ಮಾಡು ಅನ್ನೋ ನಿಮ್ಮೆಲ್ಲರ ಬೇಡಿಕೆಯನ್ನೂ ಕೇಳದೆ ಹೊರಟು ಹೋದ್ರು ಎಂದು ಧನ್ ರಾಜ್ ನೋವು ತೋಡಿಕೊಂಡಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ವಸತಿ ನಿಲಯದ ಊಟ ಸೇವಿಸಿ 14 ವಿದ್ಯಾರ್ಥಿನಿಯರು ಅಸ್ವಸ್ಥ

ವಿದೇಶಕ್ಕೆ ಹೋಗುವುದಾಗಿ ಹೇಳಿ, ಸಮುದ್ರಕ್ಕೆ ಹಾರಿ ವ್ಯಕ್ತಿ ಆತ್ಮಹತ್ಯೆ!

ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಪ್ರಕರಣ: ವಕೀಲ ರಾಜೇಶ್ ಭಟ್‌​ಗೆ ಷರತ್ತುಬದ್ಧ ಜಾಮೀನು

ಮಹಿಳೆಯರಿಗೆ ಕಿರುಕುಳ ನೀಡುವುದನ್ನು ನಿಲ್ಲಿಸಿ: ಪ್ರಿಯಾಂಕಾ ಗಾಂಧಿ

ಇತ್ತೀಚಿನ ಸುದ್ದಿ