ವೈದ್ಯನ ಟಿಕ್ ಟಾಕ್ ಹುಚ್ಚು | ತಾಳ್ಮೆ ಕಳೆದುಕೊಂಡ ರೋಗಿ; ಕೆಲಸ ಕಳೆದುಕೊಂಡ ವೈದ್ಯ
ಆಸ್ಟ್ರೇಲಿಯಾ: ಟಿಕ್ ಟಾಕ್ ವಿಡಿಯೋದ ಹುಚ್ಚಿನಿಂದಾಗಿ ವೈದ್ಯರೊಬ್ಬರು ಕೆಲಸ ಕಳೆದುಕೊಂಡ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದ್ದು, ಶಸ್ತ್ರ ಚಿಕಿತ್ಸೆಯ ನಡುವೆ ಟಿಕ್ ಟಾಕ್ ವಿಡಿಯೋ ಮಾಡಿ ರೋಗಿಗಳಿಗೆ ಕಿರಿಕಿರಿ ಉಂಟು ಮಾಡುತ್ತಿದ್ದ ದೂರಿನ ಹಿನ್ನೆಲೆಯಲ್ಲಿ ವೈದ್ಯ ಕೆಲಸ ಕಳೆದುಕೊಂಡಿದ್ದಾರೆ.
ಆಸ್ಟ್ರೇಲಿಯಾದ ಸರ್ಜನ್ ಡೇನಿಯ್ ಆರೊನೊವ್ ಅವರಿಗೆ ವಿಪರೀತ ಟಿಕ್ ಟಾಕ್ ಹುಚ್ಚು ಇತ್ತೆನ್ನಲಾಗಿದೆ. ಅವರ ಟಿಕ್ ಟಾಕ್ ಖಾತೆಯಲ್ಲಿ ಬರೋಬ್ಬರಿ 13 ದಶಲಕ್ಷ ಅನುಯಾಯಿಗಳಿದ್ದರು. ಇವರು ಚಿಕಿತ್ಸೆ ನೀಡುತ್ತಿರುವ ಮಧ್ಯೆಯೇ ಟಿಕ್ ಟಾಕ್ ವಿಡಿಯೋ ಮಾಡಿ, ಚಿಕಿತ್ಸೆಯ ಬಗ್ಗೆ ವಿವರಿಸುತ್ತಿದ್ದರು ಎನ್ನಲಾಗಿದೆ.
ಜಾಕಿ ಎಂಬ ಹೆಸರಿನ ಮಹಿಳೆಯೊಬ್ಬರು ಮುಖಕ್ಕೆ ಫೇಸ್ ಲಿಫ್ಟ್ ಮಾಡಿಸಲು ಡೇನಿಯಲ್ ಬಳಿ ತೆರಳಿದ್ದು, ಈ ವೇಳೆ ಡೇನಿಯಲ್ ಟಿಕ್ ಟಾಕ್ ಮಾಡುತ್ತಾ, ಚಿಕಿತ್ಸೆ ನೀಡಲು ಮುಂದಾಗಿದ್ದಾರೆ. ಇದರಿಂದಾಗಿ ಅವರಿಗೆ ತೀವ್ರವಾಗಿ ಕಿರಿಕಿರಿ ಉಂಟಾಗಿದೆ ಎನ್ನಲಾಗಿದೆ. ಅವರು ವಿಡಿಯೋ ಕಟ್ ಮಾಡುವಂತೆ ಮನವಿ ಮಾಡಿಕೊಂಡರೂ ಡೇನಿಯಲ್ ಮಾಡಿರಲಿಲ್ಲ ಎನ್ನಲಾಗಿದೆ. ಹೀಗಾಗಿ ಅವರು ಮಾಧ್ಯಮಗಳ ಮುಂದೆ ಈ ವಿಚಾರವನ್ನು ಹಂಚಿಕೊಂಡಿದ್ದಾರೆ.
ಇದೀಗ ಆಸ್ಟ್ರೇಲಿಯಾದ ಆರೋಗ್ಯ ಸಿಬ್ಬಂದಿ ನಿಯಂತ್ರಣ ಸಂಸ್ಥೆ(AHPRA) ಈ ಸಂಬಂಧ ಕಟ್ಟುನಿಟ್ಟಿನ ಕ್ರಮಕೈಗೊಂಡಿದ್ದು, ಡೇನಿಯಲ್ ಯಾವುದೇ ರೀತಿಯ ಸರ್ಜರಿ ಮಾಡದಂತೆ ನಿಷೇಧ ಹೇರಿದೆ.
ಟಿಕ್ ಟಾಕ್ ಹುಚ್ಚು ದೊಡ್ಡ ದೊಡ್ಡ ಡಾಕ್ಟರ್ ಗಳನ್ನೇ ಬಿಟ್ಟಿಲ್ಲ. ಇನ್ನು ಸಣ್ಣ ಪುಟ್ಟವರ ಕಥೆ ಏನು ಎನ್ನುವಂತಾಗಿದೆ. ಶಸ್ತ್ರ ಚಿಕಿತ್ಸೆ ನಡೆಸುತ್ತಿರುವ ಸಂದರ್ಭಗಳಲ್ಲಿ ಟಿಕ್ ಟಾಕ್ ವಿಡಿಯೋ ಮಾಡುವುದು ರೋಗಿಗಳ ಪ್ರಾಣದ ಜೊತೆಗೆ ಚೆಲ್ಲಾಟವಾಡಿದಂತೆ ಎಂಬ ಅಭಿಪ್ರಾಯಗಳು ಇದೀಗ ಕೇಳಿ ಬಂದಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಎಲ್ ಪಿಜಿ ಗ್ರಾಹಕರಿಗೆ ಬಿಗ್ ಶಾಕ್: ವಾಣಿಜ್ಯ ಸಿಲಿಂಡರ್ ಗಳ ಬೆಲೆ 103.50ಕ್ಕೆ ಏರಿಕೆ
ಪೂಜೆ ಮಾಡುತ್ತೇನೆ ಎಂದು ಮಾಂಗಲ್ಯ ಸರ ಎಗರಿಸಿದ ಜ್ಯೋತಿಷಿ!
ದನ ಸಾಗಾಟದ ವಾಹನ ತಡೆಯಲು ಯತ್ನಿಸಿದ ಯುವಕರ ಮೇಲೆ ಹತ್ತಿದ ಪಿಕಪ್: ಇಬ್ಬರಿಗೆ ಗಂಭೀರ ಗಾಯ
ಯೋಗ ತರಬೇತಿಯ ವೇಳೆ 5 ಯುವತಿಯರಿಗೆ ಲೈಂಗಿಕ ಕಿರುಕುಳ: ತರಬೇತುದಾರನ ವಿರುದ್ಧ ದೂರು
ಲಸಿಕೆ ಹಾಕಲು ಬಂದಾಗ ಅಜ್ಜಿಯ ಮೈಮೇಲೆ ಬಂದ ದೇವರು | ತಹಶೀಲ್ದಾರ್ ಮಾಡಿದ ಉಪಾಯ ಏನು ಗೊತ್ತಾ?