ಬ್ರೇಕಿಂಗ್ ನ್ಯೂಸ್: ಟಿಕ್ ಟಾಕ್ ಮತ್ತೆ ಭಾರತದಲ್ಲಿ ಕಾರ್ಯಾರಂಭ? - Mahanayaka
10:24 AM Wednesday 11 - December 2024

ಬ್ರೇಕಿಂಗ್ ನ್ಯೂಸ್: ಟಿಕ್ ಟಾಕ್ ಮತ್ತೆ ಭಾರತದಲ್ಲಿ ಕಾರ್ಯಾರಂಭ?

16/11/2020

ನವದೆಹಲಿ:  ಭಾರತದಲ್ಲಿ ಮತ್ತೆ ಚೀನಾದ ಜನಪ್ರಿಯ ಮೊಬೈಲ್ ಅಪ್ಲಿಕೇಶನ್ ಟಿಕ್ ಟಾಕ್ ಬರಲಿದೆ ಎಂದು ಹೇಳಲಾಗುತ್ತಿದ್ದು, ಡೇಟಾ ಗೌಪ್ಯತೆ ಮತ್ತು ಭದ್ರತಾ ಅಗತ್ಯಗಳನ್ನು ಪೂರೈಸಲು ಕಂಪನಿಯು ಕ್ರಮಗಳನ್ನು ಕೈಗೊಂಡಿದೆ ಎಂದು ಟಿಕ್ ಟಾಕ್ ತನ್ನು ಉದ್ಯೋಗಿಗಳಿಗೆ ತಿಳಿಸಿದೆ ಎಂದು ಹೇಳಲಾಗಿದೆ.

ಟಿಕ್ ಟಾಕ್ ಪ್ರಾರಂಭದ ಬಗ್ಗೆ ಸಕಾರಾತ್ಮಕ ಫಲಿತಾಂಶವಿದ್ದು, ಆಶಾವಾದಿಯಾಗಿದೆ ಎಂದು ಟಿಕ್ ಟಾಕ್ ಇಂಡಿಯಾ ಮುಖ್ಯಸ್ಥ ನಿಖಿಲ್ ಗಾಂಧಿ ಕೂಡ ಹೇಳಿದ್ದಾರೆ. ಹೀಗಾಗಿ ಟಿಕ್ ಟಾಕ್ ಮತ್ತೆ ಭಾರತಕ್ಕೆ ಬರಲಿದೆ ಎನ್ನುವ ಮಾತುಗಳು ಕೇಳಿ ಬಂದಿವೆ.

ಡೇಟಾ ಗೌಪ್ಯತೆ ಮತ್ತು ಭದ್ರತೆಯ ಅಗತ್ಯಗಳನ್ನು ಒಳಗೊಂಡಂತೆ ಸ್ಥಳೀಯ ಕಾನೂನುಗಳನ್ನು ಪಾಲಿಸಲು ಬೈಟ್ ಡ್ಯಾನ್ಸ್ ಮಾಲೀಕತ್ವದ ಆಪ್ ಬದ್ಧವಾಗಿದೆ ಎಂದು ಪತ್ರದಲ್ಲಿ ಗಾಂಧಿ ಹೇಳಿದ್ದಾರೆ ಎಂದು ವರದಿಯಾಗಿದೆ.

ಇತ್ತೀಚಿನ ಸುದ್ದಿ