ಆಗಸ್ಟ್ 7ರಂದು ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾವೇದಿಕೆಯಿಂದ ಟಿಪ್ಪು ಹೌಸ್ ಹಸ್ತಾಂತರ – ಸಾಧಕರಿಗೆ ಸನ್ಮಾನ

ಉಳ್ಳಾಲ: ಕರ್ನಾಟಕ ರಾಜ್ಯ ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ಆಶ್ರಯದಲ್ಲಿ ಟಿಪ್ಪು ಹೌಸ್ ಮನೆ ಹಸ್ತಾಂತರ – ಸಾಧಕರಿಗೆ ಸನ್ಮಾನ ಆಗಸ್ಟ್ 7ರಂದು ಬೆಳಗ್ಗೆ 10 ಗಂಟೆಗೆ ಉಳ್ಳಾಲ ವ್ಯಾಪ್ತಿಯ ಮುನ್ನೂರು ಸುಭಾಷ್ ನಗರದ ಸಮುದಾಯ ಭವನದಲ್ಲಿ ಜರುಗಲಿದೆ.
ಈ ಹಿಂದೆ ಎರಡು ಮನೆಗಳ ನವೀಕರಣ ಮತ್ತು ಒಂದು ಹೊಸ ಮನೆಯನ್ನು ನಿರ್ಮಿಸಿ ಮುಸ್ಲಿಂ ಸಮುದಾಯದ ಅತ್ಯಂತ ಬಡ ವರ್ಗದವರಿಗೆ ಉಚಿತವಾಗಿ ನೀಡಲಾಗಿತ್ತು. ಇದೀಗ ಎರಡನೇ ಮನೆ ಟಿಪ್ಪು ಹೌಸ್ ಕಾಮಗಾರಿ ಪೂರ್ಣಗೊಂಡಿದೆ ಎಂದು ಸಮಿತಿಯ ಅಧ್ಯಕ್ಷ ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಸಾಧಕರನ್ನು ಗೌರವಿಸಲಾಗುವುದು. ಉಪಕಾರಿ ಸಮಸ್ತ ಬೆಳ್ತಂಗಡಿಯ ಸಯ್ಯದ್ ಸಾದಾತ್ ತಂಙಳ್ ಗುರುವಾಯನಕೆರೆ, ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ಅಧ್ಯಕ್ಷ ಟಿಪ್ಪು ಕಾಸಿಂ ಅಲಿ, ಶಾಸಕ ಯು.ಟಿ. ಖಾದರ್ ಉಪಸ್ಥಿತರಿರುವರು ಎಂದರು.
ಸಮಿತಿ ಗೌರವಾಧ್ಯಕ್ಷ ಇಬ್ರಾಹಿಂ ಲಬೈಕ್, ಉಪಾಧ್ಯಕ್ಷರಾದ ಬಿ.ವಿಷ್ಣುಮೂರ್ತಿ, ವಿಲೈಡ್ ಡಿಸೋಜ, ಕಾನೂನು ಸಲಹೆಗಾರ ಆರ್.ಕೆ. ಮದನಿ ಉಪಸ್ಥಿತರಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka