ಟಿಪ್ಪು ಹಾಸನಕ್ಕೆ ”ಕೈಮಾಬಾದ್” ಹೆಸರಿಟ್ಟಿದ್ದ: ಉರಿಗೌಡ, ನಂಜೇಗೌಡ ಬಳಿಕ ಮತ್ತೊಂದು ವಿವಾದ ಹುಟ್ಟುಹಾಕಿದ ಸಿ.ಟಿ. ರವಿ - Mahanayaka
8:05 PM Thursday 12 - December 2024

ಟಿಪ್ಪು ಹಾಸನಕ್ಕೆ ”ಕೈಮಾಬಾದ್” ಹೆಸರಿಟ್ಟಿದ್ದ: ಉರಿಗೌಡ, ನಂಜೇಗೌಡ ಬಳಿಕ ಮತ್ತೊಂದು ವಿವಾದ ಹುಟ್ಟುಹಾಕಿದ ಸಿ.ಟಿ. ರವಿ

c t ravi
18/03/2023

ಧಾರವಾಡ: ಟಿಪ್ಪು ಹಾಸನಕ್ಕೆ ‘ಕೈಮಾಬಾದ್’ ಅಂತ ಹೆಸರು ಇಟ್ಟಿದ್ದನು” ಎಂದು ಹೇಳುವ ಮೂಲಕ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಅವರು ಮತ್ತೊಂದು ಹೊಸ ವಿವಾದ ಹುಟ್ಟುಹಾಕಿದ್ದಾರೆ.

ಧಾರವಾಡ ಜಿಲ್ಲೆಯ ಕುಂದಗೋಳದಲ್ಲಿ ಮಾತನಾಡಿದ ಸಿಟಿ ರವಿ, ”ಉರಿಗೌಡ, ನಂಜೇಗೌಡರು ಟಿಪ್ಪುನನ್ನು ಕೊಂದಿರುವುದು ಐತಿಹಾಸಿಕ ಸತ್ಯ. ಟಿಪ್ಪು ಹಾಸನಕ್ಕೆ ಇಟ್ಟ ಹೆಸರು ”ಕೈಮಾಬಾದ್”, ಹಾಸನಕ್ಕೆ ಕೈಮಾಬಾತ್ ಎಂದು ಕರೆಯುವುದಕ್ಕೆ ಕುಮಾರಸ್ವಾಮಿಗೆ ಇಷ್ಟ ಇರಬಹುದು” ಎಂದು ಟಾಂಗ್​ ಕೊಟ್ಟಿದ್ದಾರೆ.

”ಉರಿಗೌಡ ನಂಜೇಗೌಡ ಐತಿಹಾಸಿಕ ವ್ಯಕ್ತಿಗಳು ಟಿಪ್ಪುವನ್ನು ಉರಿಗೌಡ ನಂಜೇಗೌಡ ಕೊಂದಿದ್ದು ಐತಿಹಾಸಿಕ ಸತ್ಯ. ಟಿಪ್ಪು ಹಾಸನವನ್ನ ಕೈಮಾಬಾದ್ ಎಂದು ಕರೆದಿದ್ದನು. ಕುಮಾರಸ್ವಾಮಿಗೂ ಹಾಸನವನ್ನು ಕೈಮಾಬಾದ್ ಎಂದು ಕರೆಯಲು ಇಷ್ಟವೇನು…?” ಎಂದು ಪ್ರಶ್ನೆ ಮಾಡಿದ್ದಾರೆ.

ಈಗ ಒಂದುವೇಳೆ ಟಿಪ್ಪು ಮತ್ತು ಆತನ ಸಿದ್ದಾಂತ ಬದುಕಿದ್ದರೆ ಹಾಸನ ಕೈಮಾಬಾತ್ ಆಗಿರುತ್ತಿತ್ತು. ಟಿಪ್ಪು ಬದುಕಿದ್ದರೇ ಯಾರ್ಯಾರ ಕತೆ ಏನಾಗುತ್ತಿತ್ತೋ ಏನೋ..? ಎಂದು ಸಿ.ಟಿ ರವಿ ಹೇಳಿದ್ದಾರೆ.

ಟಿಪ್ಪು ಸುಲ್ತಾನ್​ನನ್ನು ಮಂಡ್ಯದ ಒಕ್ಕಲಿಗ ಸಮುದಾಯದ ಉರಿಗೌಡ, ನಂಜೇಗೌಡ‌ ಎನ್ನುವವರು ಕೊಂದಿದ್ದಾರೆ ಎಂದು ಸಿಟಿ ರವಿ ಅವರು ಈ ಹಿಂದೆ ಒಂದು ಸುಳ್ಳು ಹರಿಬಿಟ್ಟಿದ್ದರು. ಆ ಸುಳ್ಳನ್ನು ಬಿಜೆಪಿಯ ಅನೇಕ ನಾಯಕರು ಸತ್ಯ ಎಂದು ವಾದಿಸುತ್ತಿದ್ದಾರೆ. ಇದು ರಾಜ್ಯದಲ್ಲಿ ಭಾರೀ ಚರ್ಚಗೆ ಗ್ರಾಸವಾಗಿದ್ದು, ರಾಜಕೀಯ ನಾಯಕರ ನಡುವೆ ಕೆಸರೆರಚಾಟಕ್ಕೆ ಕಾರಣವಾಗಿದೆ.

ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸುವ ಸಂದರ್ಭದಲ್ಲಿ ಸಿಟಿ ರವಿ ಅವರು, ಮತ್ತೊಂದು ಹೊಸ ವಿಷಯವನ್ನು ತೇಲಿಬಿಟ್ಟಿದ್ದಾರೆ. ಟಿಪ್ಪು ಹಾಸನಕ್ಕೆ ಇಟ್ಟ ಹೆಸರು ಕೈಮಾಬಾದ್ ಎಂದು ಸಿಟಿ ರವಿ ಹೇಳಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ