ಟಿಪ್ಪು ಸುಲ್ತಾನ್ ಇಲ್ಲದ ಮೈಸೂರು ದಸರಾ: ಬಿಜೆಪಿ ಸರಕಾರದ ಕೋಮುವಾದಿ ನಡೆ ಇತಿಹಾಸಕ್ಕೆ ಬಗೆದ ದ್ರೋಹ | ಪಾಪ್ಯುಲರ್ ಫ್ರಂಟ್
ಮೈಸೂರು: ದಸರಾ ವಸ್ತು ಪ್ರದರ್ಶನದಿಂದ ಟಿಪ್ಪು ಸುಲ್ತಾನ್(Tipu Suultan) ಇತಿಹಾಸವನ್ನು ಹೊರಗಿಟ್ಟಿರುವ ಬಿಜೆಪಿ ಸರಕಾರದ ಕೋಮುವಾದಿ ನಡೆಯು ಇತಿಹಾಸಕ್ಕೆ ಬಗೆದ ದ್ರೋಹವಾಗಿದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಸಿರ್ ಪಾಶ ಹೇಳಿದ್ದಾರೆ.
ದಸರಾ ಸಂದರ್ಭದಲ್ಲಿ ಪ್ರತಿಬಾರಿಯೂ ಟಿಪ್ಪು ಸುಲ್ತಾನ್ ಇತಿಹಾಸವನ್ನು ಪ್ರದರ್ಶಿಸಲಾಗುತ್ತಿತ್ತು. ಶೌರ್ಯದ ಫೋಟೋಗಳನ್ನು ಅಳವಡಿಸಲಾಗುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಗಮನಿಸುವುದಾದರೆ, ಟಿಪ್ಪು ಇತಿಹಾಸವನ್ನು ಕ್ರಮೇಣ ತೆರೆಮರೆಗೆ ಸರಿಸಲಾಗಿದೆ. ಈ ಬಾರಿಯ ದಸರಾದಲ್ಲಂತೂ ಟಿಪ್ಪು ಇತಿಹಾಸವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಬಿಜೆಪಿ-ಸಂಘಪರಿವಾರವು ಟಿಪ್ಪು ವಿರುದ್ಧ ಎಷ್ಟೇ ಅಪಪ್ರಚಾರ ನಡೆಸಿದರೂ ವಾಸ್ತವ ಇತಿಹಾಸವು ಅದಕ್ಕೆ ಅವಕಾಶ ನೀಡಲಾರದು. ಕರುನಾಡು ಮತ್ತು ದೇಶದ ಅಭಿವೃದ್ಧಿಗಾಗಿ ಟಿಪ್ಪು ಕೊಡುಗೆ ಅಪಾರ. ಅವರ ದೂರದೃಷ್ಟಿಯ ಯೋಜನೆಗಳು ದೇಶದ ಇಂದಿನ ಆರ್ಥಿಕತೆಗೆ ಬಹಳಷ್ಟು ಸಹಕಾರಿಯಾಗಿವೆ ಎಂದು ಅವರು ತಿಳಿಸಿದ್ದಾರೆ.
ಟಿಪ್ಪು ಬ್ರಿಟಿಷರ ಸಿಂಹಸ್ವಪ್ನವಾಗಿದ್ದರ ಜೊತೆಗೆ ಇಲ್ಲಿನ ಮೇಲ್ವರ್ಗದ ಯಜಮಾನಿಕೆಯ ಶತ್ರುವಾಗಿದ್ದರು. ತಳ ಸಮುದಾಯಗಳು ಮೇಲ್ವರ್ಗದ ಪ್ರಾಬಲ್ಯದಲ್ಲಿ ಶೋಷಣೆ ಎದುರಿಸುತ್ತಿದ್ದಾಗ ಎಲ್ಲಾ ವರ್ಗದ ಜನರಿಗೆ ಘನತೆ ಹಾಗೂ ಸಮಾನತೆಯ ಜೀವನ ಕಲ್ಪಿಸಿದ್ದರು. ಈ ಕಾರಣಕ್ಕಾಗಿ ಇಂದು ಟಿಪ್ಪುವನ್ನು ಸಂಘಪರಿವಾರದ ಶಕ್ತಿಗಳು ವಿರೋಧಿಸುತ್ತಿರುವುದು. ಜೊತೆಗೆ ಹಿಂದು-ಮುಸ್ಲಿಮ್ ಕೋಮು ಧ್ರುವೀಕರಣಕ್ಕಾಗಿಯೂ ಟಿಪ್ಪುವನ್ನು ಹಿಂದೂ ವಿರೋಧಿಯಾಗಿ ಚಿತ್ರೀಕರಿಸುತ್ತಿರುವುದು. ತನ್ನ ಅಪ್ರತಿಮ ದೇಶಭಕ್ತಿಗಾಗಿ ಘನವೆತ್ತ ಸಂವಿಧಾನದ ಪುಸ್ತಕದಲ್ಲಿಯೇ ಟಿಪ್ಪು ಸುಲ್ತಾನ್ ಸ್ಥಾನ ಪಡೆದಿರುವಾಗ, ಟಿಪ್ಪು ಇತಿಹಾಸವನ್ನು ಜನಮಾನಸದಿಂದ ಅಳಿಸಿ ಹಾಕುವ ಯೋಜನೆಯು ಹಿಂದುತ್ವ ಫ್ಯಾಶಿಸ್ಟ್ ರಾಜಕೀಯದ ಪಿತೂರಿಯಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟಿಪ್ಪು ಸುಲ್ತಾನ್ ಇಲ್ಲದ ಮೈಸೂರು, ಮಾತ್ರವಲ್ಲದೇ ದೇಶದ ಇತಿಹಾಸವೇ ಅಪೂರ್ಣ. ಈ ನಿಟ್ಟಿನಲ್ಲಿ ಸರಕಾರವು ಟಿಪ್ಪುಗೆ ಅರ್ಹ ಗೌರವವನ್ನು ಸಲ್ಲಿಸಬೇಕು. ಟಿಪ್ಪು ಹೆಸರನ್ನು ಅಳಿಸಿ ಹಾಕುವ ಎಲ್ಲಾ ವಿಧಧ ಪ್ರಯತ್ನಗಳನ್ನು ಕೈಬಿಡಬೇಕು. ತನ್ನ ಮಹಾನ್ ಕೊಡುಗೆ ಮತ್ತು ಸಾಧನೆಗಳಿಂದಾಗಿ ಜಗತ್ತಿನಾದ್ಯಂತ ಮಿಂಚುತ್ತಿರುವ ಟಿಪ್ಪು ಐತಿಹಾಸಿಕ ವ್ಯಕ್ತಿತ್ವವಾಗಿದ್ದಾರೆ. ಆ ಕಾರಣದಿಂದ ಸರಕಾರವು ತನ್ನ ಪೂರ್ವಾಗ್ರಹಪೀಡಿತ ಮನೋಸ್ಥಿತಿ ಮತ್ತು ದ್ವೇಷ ರಾಜಕೀಯವನ್ನು ಬದಿಗಿಟ್ಟು ಜನರಿಗೆ ನೈಜ ಇತಿಹಾಸವನ್ನು ಪರಿಚಯಿಸಬೇಕೆಂದು ನಾಸಿರ್ ಪಾಶ ಒತ್ತಾಯಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DvHWsFS1hwLKfIX9njyNyb
ಇನ್ನಷ್ಟು ಸುದ್ದಿಗಳು…
ಬಜರಂಗದಳದಿಂದ ತ್ರಿಶೂಲ ದೀಕ್ಷೆ: ಪರಿಶೀಲನೆ ನಡೆಸಲು ಪೊಲೀಸ್ ಆಯುಕ್ತರಿಂದ ಸೂಚನೆ
ಲಕ್ಷ್ಮೀ ಹೆಬ್ಬಾಳ್ಕರ್ ಹೆಸರಿನಲ್ಲಿ ಡಿ.ಕೆ.ಶಿವಕುಮಾರ್ ಬೇನಾಮಿ ಆಸ್ತಿ: ಮಾಜಿ ಸಚಿವ ಸೊಗಡು ಶಿವಣ್ಣ ಗಂಭೀರ ಆರೋಪ
ಹೆರಿಗೆಯಾಗಿದ್ದು ಹೆಣ್ಣು, ಆದರೆ ಆಸ್ಪತ್ರೆಯವರು ನೀಡಿದ್ದು ಗಂಡು ಮಗುವನ್ನು!
ದೇವಸ್ಥಾನದ ಆವರಣದಲ್ಲಿಯೇ ಮುಖ್ಯ ಅರ್ಚಕನನ್ನು ಗುಂಡು ಹಾರಿಸಿ ಕೊಂದ ಯುವಕರು !
ಸಹೋದ್ಯೋಗಿಗೆ ಲೈಂಗಿಕ ಕಿರುಕುಳ ಆರೋಪ: ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಅರೆಸ್ಟ್
ಅಮಾನವೀಯ ಘಟನೆ: ಹೊಲದಲ್ಲಿ ಗನ್ ಪಾಯಿಂಟ್ ನಲ್ಲಿ ಮಹಿಳೆಯ ಮೇಲೆ ಅತ್ಯಾಚಾರ
ಬಾಂಗ್ಲಾದೇಶದಲ್ಲಿ ದುರ್ಗಾ ಪೂಜೆ ವೇಳೆ ದೇವಸ್ಥಾನದ ಮೇಲೆ ಅಪರಿಚಿತರಿಂದ ದಾಳಿ
ನೈತಿಕ ಪೋಲಿಸ್ ಗಿರಿ: ಸಿಎಂ ಹೇಳಿಕೆ ದುಷ್ಕ್ರತ್ಯಗಳಿಗೆ ಮತ್ತಷ್ಟು ಪ್ರೋತ್ಸಾಹ ನೀಡುವಂತಿದೆ | ಸಿಪಿಐಎಂ ಆಕ್ರೋಶ