ರಿಲಯನ್ಸ್ ರೀಟೇಲ್ ನಿಂದ ಬೆಂಗಳೂರಿನಲ್ಲಿ ತಿರಾ ಪ್ರಾರಂಭ
ಬೆಂಗಳೂರು: ರಿಲಯನ್ಸ್ ರಿಟೇಲ್ ಆಮ್ನಿ-ಚಾನೆಲ್ ಬ್ಯೂಟಿ ರೀಟೇಲ್ ಪ್ಲಾಟ್ ಫಾರಂ ತಿರಾ ಫೀನಿಕ್ಸ್ ಮಾಲ್ ಆಫ್ ಏಷ್ಯಾದಲ್ಲಿ ಐಷಾರಾಮಿ ರೀಟೇಲ್ ಕೇಂದ್ರ ಪ್ರಾರಂಭಿಸುವ ಮೂಲಕ ಬೆಂಗಳೂರು ನಗರಕ್ಕೆ ಪ್ರವೇಶ ಪಡೆದಿದೆ. ಈ ವಿಸ್ತರಣೆಯು ತಿರಾದ ವ್ಯಾಪ್ತಿಯನ್ನು ಮುಂಬೈ, ಹೈದರಾಬಾದ್, ಚೆನ್ನೈ ಮತ್ತು ಈಗ ಬೆಂಗಳೂರು ನಗರಕ್ಕೆ ವ್ಯಾಪ್ತಿ ವಿಸ್ತರಿಸಿ ತನ್ನ ಹೆಜ್ಜೆ ಗುರುತನ್ನು ದೃಢಪಡಿಸಿದೆ.
ತಿರಾ ಸರಿಸಾಟಿ ಇರದ ಖರೀದಿ ಅನುಭವವನ್ನು ನೀಡುತ್ತಿದ್ದು ಹೊಸ ಯುಗದ ಗ್ರಾಹಕರ ವೈವಿಧ್ಯಮಯ ಅಭಿರುಚಿಗಳಿಗೆ ರೂಪಿಸಿದ ಜಾಗತಿಕ ಮತ್ತು ಸ್ಥಳೀಯವಾಗಿ ಬೆಳೆದ ಬ್ಯೂಟಿ ಬ್ರಾಂಡ್ ಗಳ ವಿಶೇಷ ಉತ್ಪನ್ನಗಳನ್ನು ಪ್ರಸ್ತುತಪಡಿಸುತ್ತಿದೆ. ಬ್ಯೂಟಿ ರೀಟೇಲ್ ಪರಿವರ್ತನೆಯಲ್ಲಿ ಮುಂಚೂಣಿಯಲ್ಲಿರುವ ತಿರಾ ಗ್ರಾಹಕರ ಪ್ರಯಾಣವನ್ನು ಉನ್ನತೀಕರಿಸಲು ಅತ್ಯಾಧುನಿಕ ತಂತ್ರಜ್ಞಾನವನ್ನು ತಡೆರಹಿತವಾಗಿ ಸಂಯೋಜಿಸುತ್ತದೆ.
ಹೊಸದಾಗಿ ಪ್ರಾರಂಭವಾದ ಬೆಂಗಳೂರು ಮಳಿಗೆಯು ಫ್ರಾಗ್ರೆನ್ಸ್ ಫೈಂಡರ್ ನಂತಹ ವಿನೂತನ ವಿಶೇಷತೆಗಳನ್ನು ಹೊಂದಿದ್ದು ಸುಗಂಧದ್ರವ್ಯಗಳನ್ನು ಶಿಫಾರಸು ಮಾಡಲು ವೈಯಕ್ತಿಕ ಆದ್ಯತೆಗಳನ್ನು ಬಳಸಿಕೊಳ್ಳುವ ಮೂಲಕ ಪ್ರತಿ ವ್ಯಕ್ತಿಗೂ ವೈಯಕ್ತಿಕಗೊಳಿಸಿದ ಮತ್ತು ಅತ್ಯಂತ ಸೂಕ್ತವಾದ ಉತ್ಪನ್ನ ನೀಡುತ್ತದೆ. ಸ್ಮಾರ್ಟ್ ಕನ್ನಡಿಗಳು ಮತ್ತು ಆಗ್ಮೆಂಟೆಡ್ ರಿಯಾಲಿಟಿ ಸಾಮರ್ಥ್ಯದಿಂದ ಖರೀದಿ ಮುನ್ನವೇ ಪೋಷಕರು ಉತ್ಪನ್ನಗಳನ್ನು ವರ್ಚುಯಲ್ ರೂಪದಲ್ಲಿ ಪ್ರಯೋಗಿಸಬಹುದು. ಮುಖ್ಯವಾದುದು ಬ್ಯೂಟಿ ಟ್ರೀಟ್ಸ್ ಮತ್ತು ನಮೂನೆಗಳನ್ನು ವಿತರಿಸುವ ವೆಂಡಿಂಗ್ ಮೆಷಿನ್ ಗಳು ಪ್ರತಿ ಗ್ರಾಹಕರಿಗೂ ಆಕರ್ಷಕ ಟೇಕ್ ಅವೇಗಳನ್ನು ನೀಡುತ್ತವೆ.
ಪರಿಣಿತ ಸೌಂದರ್ಯದ ಸಲಹೆಗಾರರು ರೂಪಿಸಿದ “ತಿರಾ ಸಿಗ್ನೇಚರ್ ಲುಕ್ಸ್” ಅಪಾರ ಆಸಕ್ತಿ ಪಡೆದಿದೆ ಮತ್ತು ಗ್ರಾಹಕರು ಅವರ ಅಚ್ಚುಮೆಚ್ಚಿನ ಉಚಿತ ಗ್ಲಾಮ್ ಲುಕ್ ಪಡೆಯಬಹುದು. ವಿಶೇಷ ಗಿಫ್ಟಿಂಗ್ ಸ್ಟೇಷನ್ ಗಳು, ಕೆತ್ತನೆ ಯಂತ್ರಗಳೊಂದಿಗೆ ಗ್ರಾಹಕರು ಅವರ ಖರೀದಿಗಳನ್ನು ವೈಯಕ್ತಿಕಗೊಳಿಸುವ ಮೂಲಕ ಅವರ ಉಡುಗೊರೆಯ ಹೆಚ್ಚು ವಿಶೇಷವಾಗುವಂತೆ ಮಾಡಬಹುದು.
ತಿರಾ ಸತತವಾಗಿ ಸೌಂದರ್ಯದ ರೀಟೇಲ್ ವ್ಯಾಪ್ತಿಯನ್ನು ಮರು ವ್ಯಾಖ್ಯಾನಿಸುತ್ತಿರುವಂತೆ ಇದು ಪ್ರತಿ ಗ್ರಾಹಕರಿಗೂ ಒಳಗೊಳ್ಳುವ ಮತ್ತು ಸಬಲೀಕರಿಸುವ ಸೌಂದರ್ಯದ ಪ್ರಯಾಣದ ಮಾರ್ಗದತ್ತ ಕೊಂಡೊಯ್ಯುತ್ತದೆ. ತಿರಾ ಆಪ್ ಈಗಾಗಲೃ ಗಮನಾರ್ಹ ಮೈಲಿಗಲ್ಲು ಸಾಧಿಸಿದ್ದು ಐದು ಮಿಲಿಯನ್ ಗೂ ಹೆಚ್ಚು ಡೌನ್ ಲೋಡ್ ಗಳನ್ನು ಮೀರಿದ್ದು ಅದು ಸೌಂದರ್ಯ ಅಭಿಮಾನಿಗಳಲ್ಲಿ ಹೆಚ್ಚುತ್ತಿರುವ ಜನಪ್ರಿಯತೆಯನ್ನು ತೋರಿಸುತ್ತದೆ. ಭಾರತದಾದ್ಯಂತ ಶೇ.98ರಷ್ಟು ಪಿನ್ ಕೋಡ್ ಗಳ ವ್ಯಾಪ್ತಿ ಹೊಂದಿರುವ ತಿರಾ ತ್ವರಿತ ಪೂರೈಕೆಗಳನ್ನು ಮಾಡುತ್ತಿದ್ದು 100ಕ್ಕೂ ಹೆಚ್ಚು ನಗರಗಳ ಗ್ರಾಹಕರನ್ನು ತಲುಪುತ್ತಿದೆ.
ಮಾಲ್ ಆಫ್ ಏಷ್ಯಾ ಮಳಿಗೆಯು ಬೆಂಗಳೂರು ಮತ್ತು ಆಚೆಗೂ ಸೌಂದರ್ಯದ ಉತ್ಸಾಹಿಗಳಿಗೆ ಪ್ರಮುಖ ಕೇಂದ್ರವಾಗಲು ಸಜ್ಜಾಗಿದ್ದು ಉನ್ನತೀಕರಿಸಿದ ಸೌಂದರ್ಯದ ಅನುಭವಗಳ ಹೊಸ ಯುಗಕ್ಕೆ ನಾಂದಿ ಹಾಡಿದೆ.
ಮಳಿಗೆಯ ವಿಳಾಸ:
ಲೋಯರ್ ಗ್ರೌಂಡ್ ಫ್ಲೋರ್, 239/240, ಬ್ಯಾಟರಾಯನಪುರ, ಯಲಹಂಕ ಹೋಬಳಿ, ಯಲಹಂಕ ತಾಲ್ಲೂಕು, ಬಳ್ಳಾರಿ ರಸ್ತೆ, ಬೆಂಗಳೂರು, ಕರ್ನಾಟಕ 560092.