ಇವರಿಗೆ ಹಿಜಾಬ್ ಧರಿಸಿದ್ರೂ ಸಮಸ್ಯೆ, ಬಿಕಿನಿ ಧರಿಸಿದ್ರೂ ಸಮಸ್ಯೆ: ನುಸ್ರತ್ ಜಹಾನ್ ಕಿಡಿ
ಇವರಿಗೆ ಹಿಜಾಬ್ ಧರಿಸಿದ್ರೂ ಸಮಸ್ಯೆ, ಬಿಕಿನಿ ಧರಿಸಿದ್ರೂ ಸಮಸ್ಯೆ ಎಂದು ಬೇಷರಾಂ ರಂಗ್ ಹಾಡಿನ ವಿವಾದದ ವಿರುದ್ಧ ಕಾಂಗ್ರೆಸ್ ಸಂಸದೆ ನುಸ್ರತ್ ಜಹಾನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದು ಯಾರ ಸಿದ್ಧಾಂತವೂ ಅಲ್ಲ, ಅಧಿಕಾರದಲ್ಲಿರುವ ಜನರ ಒಂದು ಗುಂಪಿನವರು ಮಾಡುತ್ತಿರುವ ಯೋಜಿತ ಪಿತೂರಿ. ಚಿತ್ರಗಳ ನಡುವೆ ಆಧ್ಯಾತ್ಮಿಕ, ಧಾರ್ಮಿಕವಾದ ವಿಚಾರಗಳನ್ನು ತರುತ್ತಿದ್ದಾರೆ ಎಂದು ನುಸ್ರತ್ ಜಹಾನ್ ಹೇಳಿದರಲ್ಲದೇ, ಈ ವಿರೋಧಕ್ಕೆ ಬಿಜೆಪಿ ಸರ್ಕಾರ ಬೆಂಬಲಿಸುತ್ತಿದೆ ಎಂದಿದ್ದಾರೆ.
ಏನು ಧರಿಸಬೇಕು, ಏನು ತಿನ್ನಬೇಕು, ಹೇಗೆ ಮಾತನಾಡಬೇಕು, ಶಾಲೆಯಲ್ಲಿ ಏನನ್ನು ಕಲಿಯಬೇಕು, ಟಿವಿಯಲ್ಲಿ ಏನನ್ನು ನೋಡಬೇಕು ಅನ್ನೋದನ್ನು ನಿಯಂತ್ರಿಸುವ ಮೂಲಕ ಮಹಿಳೆಯರ ಜೀವನವನ್ನು ನಿಯಂತ್ರಿಸಲು ಅವರು ಪ್ರಯತ್ನಿಸುತ್ತಿದ್ದಾರೆ ಎಂದು ನುಸ್ರತ್ ಹೇಳಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HeAiP3WAQfT6ajtrJVJ4kP
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka