ನಿರುದ್ಯೋಗದಿಂದ ರೋಸಿ ಹೋಗಿ ಆತ್ಮಹತ್ಯೆಗೆ ಶರಣಾದ ದಂಪತಿ | ಮಕ್ಕಳ ಸ್ಥಿತಿ ಗಂಭೀರ - Mahanayaka
5:57 AM Thursday 12 - December 2024

ನಿರುದ್ಯೋಗದಿಂದ ರೋಸಿ ಹೋಗಿ ಆತ್ಮಹತ್ಯೆಗೆ ಶರಣಾದ ದಂಪತಿ | ಮಕ್ಕಳ ಸ್ಥಿತಿ ಗಂಭೀರ

12/02/2021

ಚೆನ್ನೈ: ನಿರುದ್ಯೋಗಿ ವ್ಯಕ್ತಿ ಹಾಗೂ ಆತನ ಪತ್ನಿ ಇಬ್ಬರು ಮಕ್ಕಳಿಗೆ ವಿಷ ಉಣಿಸಿ ತಾನೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರು ಘಟನೆ ತಮಿಳುನಾಡಿನ ಚೆನ್ನೈನ ಸೇಲಂನಲ್ಲಿ ನಡೆದಿದೆ.

ಸೇಲಂನ ಪುಂಗವಾಡಿ ಗ್ರಾಮದ ಪಿ.ವೇಲ್ಮುರುಗನ್ ಮತ್ತು ಸತ್ಯ ಎಂಬವರು ಆತ್ಮಹತ್ಯೆಗೆ ಶರಣಾಗಿರುವವರಾಗಿದ್ದಾರೆ.  ಚಾಲಕನಾಗಿ ಕೆಲಸ ಮಾಡುತ್ತಿದ್ದ ವೇಲ್ಮುರುಗನ್ ಲಾಕ್ ಡೌನ್ ನ ಬಳಿಕ ಕೆಲಸ ಸಿಗದೇ ಅಲೆದಾಡಿದ್ದರು. ಆದಾಯ ಇಲ್ಲದ ಕಾರಣ, ವೇಲ್ಮುರುಗನ್ ನ ತಾಯಿ ಪದೇ ಪದೇ ಸೊಸೆಯ ಮೇಲೆ ಕೆಂಡಕಾರುತ್ತಿದ್ದರು.

ತಾಯಿಯ ಈ ದುರ್ವರ್ತನೆಯಿಂದ ಪ್ರತಿನಿತ್ಯ ಮನೆಯಲ್ಲಿ ಜಗಳ ನಡೆಯುತ್ತಿದ್ದು, ಇದರಿಂದ ವೇಲ್ಮುರುಗನ್ ತೀವ್ರವಾಗಿ ರೋಸಿ ಹೋಗಿದ್ದರು. ಒಂದೆಡೆ ಕೆಲಸ ಇಲ್ಲ, ಇನ್ನೊಂದೆಡೆ ಮನೆಯಲ್ಲಿಯೂ ನೆಮ್ಮದಿ ಇಲ್ಲ. ಇದರಿಂದಾಗಿ ತನ್ನ ಪತ್ನಿ ಸತ್ಯ ಜೊತೆಗೆ ಆತ ಮಾತನಾಡಿದ್ದು, ಇಬ್ಬರೂ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾರೆ.

ಪತ್ನಿ ಹಾಗೂ ಮಕ್ಕಳ ಕಿವಿಗೆ ವಿಷ ಸುರಿದ ವೇಲ್ಮುರುಗನ್ ಬಳಿಕ ತಾನು ಕೂಡ ವಿಷ ಸೇವಿಸಿದ್ದಾನೆ. ಈ ವೇಳೆ ಮಕ್ಕಳು ಸ್ಥಳದಿಂದ ಪರಾರಿಯಾಗಿದ್ದು,  ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದಾರೆ.

ಗ್ರಾಮಸ್ಥರು ರಕ್ಷಣೆಗೆ ಧಾವಿಸುವ ವೇಳೆಗೆ ವೇಲ್ಮುರುಗನ್ ಹಾಗೂ ಸತ್ಯ ಇಬ್ಬರು ಕೂಡ ಮೃತಪಟ್ಟಿದ್ದಾರೆ. ಸ್ಥಳೀಯರು ತಕ್ಷಣವೇ ಅಟ್ಟೂರ್ ಪೊಲೀಸರಿಗೆ ಮಾಹಿತಿ ನೀಡಿದ್ದು,  ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ದಂಪತಿಯ ಇಬ್ಬರು ಮಕ್ಕಳ ಪೈಕಿ ಬಾಲಕನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಬಾಲಕಿಯನ್ನು ಅಟ್ಟೂರ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿಸಲಾಗಿದೆ.

ಇತ್ತೀಚಿನ ಸುದ್ದಿ