“ತಂಬಾಕು ಸೇವನೆಯಿಂದ ಪ್ರತೀ ವರ್ಷ 6 ಮಿಲಿಯನ್ ಜನರು ಸಾವನ್ನಪ್ಪುತ್ತಿದ್ದಾರೆ” - Mahanayaka

“ತಂಬಾಕು ಸೇವನೆಯಿಂದ ಪ್ರತೀ ವರ್ಷ 6 ಮಿಲಿಯನ್ ಜನರು ಸಾವನ್ನಪ್ಪುತ್ತಿದ್ದಾರೆ”

tobacco
31/05/2024

ಬಾಗಲಕೋಟೆ: ತಂಬಾಕು ಸೇವನೆಯಿಂದ ಪ್ರತಿವರ್ಷ ವಿಶ್ವದಾದ್ಯಂತ ಆರು ಮಿಲಿಯನ್ ಜನರು ಮರಣ ಹೊಂದುತ್ತಿದ್ದಾರೆ ಎಂದು ಐಕ್ಯೂ ಏ.ಸಿ. ಸಂಯೋಜಕರಾದ ಡಾ.ಅಪ್ಪು ರಾಥೋಡ್ ಅವರು ತಿಳಿಸಿದರು .

ಅವರು ಇಂದು ಇಲ್ಲಿನ ಬಸವೇಶ್ವರ ಮಹಾವಿದ್ಯಾಲಯದ ಎನ್ ಎಸ್ ಎಸ್ ಘಟಕ ಒಂದು ಮತ್ತು ಎನ್ ಎಸ್ ಎಸ್ ಘಟಕ ಎರಡು ಹಾಗೂ ರೆಡ್ ಕ್ರಾಸ್ ಸಂಸ್ಥೆಗಳ ವತಿಯಿಂದ ಏರ್ಪಡಿಸಿದ್ದ ವಿಶ್ವ ತಂಬಾಕು ನಿಷೇಧ ಜಾಥಾವನ್ನು  ಉದ್ದೇಶಿಸಿ  ಮಾತನಾಡಿದರು.

1987ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ತಂಬಾಕು ಸೇವನೆಯಿಂದ ಉಂಟಾಗುವ ರೋಗ ರುಜಿನಗಳು ಸಾವು ನೋವುಗಳು ಕಾಯಿಲೆ ಕಸಾಲೆಗಳು ಜಡ್ಡು ಜಾಪತ್ರೆಗಳ ಬಗ್ಗೆ ಅರಿವು ಮೂಡಿಸುವ ಸಲುವಾಗಿ 31 ರಂದು ತಂಬಾಕು ನಿಷೇಧ ದಿನವನ್ನು ಆಚರಿಸಲು ತೀರ್ಮಾನ ಕೈಗೊಂಡ ಪ್ರಯುಕ್ತ ಪ್ರತಿ ವರ್ಷ ಮೇ 31 ರಂದು ತಂಬಾಕು ರಹಿತ ದಿನವನ್ನು ಆಚರಿಸಲಾಗುತ್ತದೆ ಎಂದು ತಿಳಿಸಿದರು.


Provided by

ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಆರ್.ನಾಗರಾಜ್ ಅವರು ಜಾಥಾಕ್ಕೆ  ಚಾಲನೆ ನೀಡಿದರು. ಈ ಜಾಥಾದಲ್ಲಿ ಮಹಾವಿದ್ಯಾಲಯದ ಎಲ್ಲಾ ಪ್ರಾಧ್ಯಾಪಕರು ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಎನ್ ಎಸ್ ಎಸ್ ಅಧಿಕಾರಿಗಳಾದ ಡಾ.ರಾಯಣ್ಣ  ಆರಿಸಿನಗೋಡಿ ಅವರು ಸ್ವಾಗತಿಸಿದರು.

ಎನ್ ಎಸ್ ಎಸ್ ಅಧಿಕಾರಿಗಳಾದ ಡಾ.ಎನ್.ವಿರೂಪಾಕ್ಷಿ ವಂದಿಸಿ ಕಾರ್ಯಕ್ರಮ ನಿರೂಪಿಸಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಫೇಸ್ ಬುಕ್ ಪೇಜ್ ಫಾಲೋ ಮಾಡಿ: https://www.facebook.com/profile.php?id=61556202767068

ಇತ್ತೀಚಿನ ಸುದ್ದಿ