ಟೋಕಿಯೋ ಒಲಿಂಪಿಕ್ಸ್: ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದ ನೀರಜ್ ಚೋಪ್ರಾ
ಟೋಕಿಯೋ: ಟೋಕಿಯೊ ಒಲಿಪಿಂಕ್ಸ್ ಜಾವೆಲಿನ್ ಥ್ರೋದಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಭಾರತದ ಅಥ್ಲೀಟ್ ನೀರಜ್ ಚೋಪ್ರಾ ಇತಿಹಾಸ ನಿರ್ಮಿಸಿದ್ದಾರೆ. ಈ ಮೂಲಕ ಈ ಒಲಿಪಿಂಕ್ಸ್ ಅಥ್ಲೆಟಿಕ್ಸ್ ನಲ್ಲಿ ಚಿನ್ನ ಗೆದ್ದ ಮೊದಲ ಇಂಡಿಯನ್ ಅಥ್ಲೀಟ್ ಎಂಬ ಹಿರಿಮೆಗೆ ನೀರಜ್ ಚೋಪ್ರಾ ಪಾತ್ರರಾಗಿದ್ದಾರೆ.
2008ರ ಬೀಜಿಂಗ್ ಒಲಿಂಪಿಕ್ಸ್ ನಲ್ಲಿ ಅಭಿನವ್ ಬಿಂದ್ರಾ ಬಳಿಕ ಒಲಿಂಪಿಕ್ಸ್ ವೈಯಕ್ತಿಕ ವಿಭಾಗದ ಸ್ಪರ್ಧೆಯಲ್ಲಿ ಭಾರತದ ಪರವಾಗಿ ನೀರಜ್ ಚೋಪ್ರಾ ಅವರು ಚಿನ್ನ ಗೆಲ್ಲುವ ಮೂಲಕ ಇತಿಹಾಸ ದಾಖಲಿಸಿದ್ದಾರೆ.
ತಮ್ಮ ಎರಡನೇ ಪ್ರಯತ್ನದಲ್ಲಿ 87.58 ಮೀಟರ್ ದೂರ ಜಾವಲಿನ್ ಎಸೆಯುವ ಮೂಲಕ ನೀರಜ್ ಚೋಪ್ರಾ ಅಂತಿಮವಾಗಿ ಚಿನ್ನದ ಪದಕವನ್ನು ಗೆದ್ದರು. ನೀರಜ್ ಅವರ ಮೊದಲ ಮೂರು ಎಸೆತಗಳಲ್ಲಿ 87.03 ಮೀಟರ್, 87.58 ಮೀಟರ್ ಮತ್ತು 76.79 ಮೀಟರ್ ಸಾಮರ್ಥ್ಯ ತೋರಿದರು. ಐದನೇ ಯತ್ನದಲ್ಲಿ ಫೌಲ್ ಆದರೂ ನೀರಜ್ ಅವರ ಗರಿಷ್ಠ ಗುರಿಯನ್ನು ತಲುಪಲು ಸಾಧ್ಯವಾಗದ ಇತರ ಸ್ಪರ್ಧಿಗಳು ಸೋಲೊಪ್ಪಿಕೊಂಡರು.
ಇನ್ನಷ್ಟು ಸುದ್ದಿಗಳು…
ಕೊರೊನಾ ಸಂದರ್ಭದಲ್ಲಿ ಭಾರತ ಸರ್ಕಾರವು ಬಡವರಿಗೆ ಹೆಚ್ಚಿನ ಆದ್ಯತೆ ನೀಡಿದೆ | ಪ್ರಧಾನಿ ಮೋದಿ
3ನೇ ಅಲೆಗೆ ಸೆಡ್ಡು ಹೊಡೆಯಲು ಸಿಂಗಲ್ ಡೋಸ್ ಲಸಿಕೆಗೆ ಗ್ರೀನ್ ಸಿಗ್ನಲ್ ನೀಡಿದ ಕೇಂದ್ರ ಸರ್ಕಾರ
ಕೇಳಿದ ಖಾತೆ ಸಿಗಲಿಲ್ಲ ಎಂದಾದರೆ, ರಾಜೀನಾಮೆ ನೀಡಬೇಕಾಗುತ್ತದೆ | ಆನಂದ್ ಸಿಂಗ್
ತುಳುನಾಡಿನ ದೈವ ಕೊರಗಜ್ಜನ ಚಿತ್ರವನ್ನು ಅಶ್ಲೀಲವಾಗಿ ಎಡಿಟ್ ಮಾಡಿದ ಕಿಡಿಗೇಡಿಗಳು!
ತ್ರಿಪುರ ಸಿಎಂ ವಿಪ್ಲವ್ ಕುಮಾರ್ ದೇವ್ ಮೇಲೆ ಕಾರು ಹರಿಸಿ ಹತ್ಯೆಗೆ ಯತ್ನ: ಮೂವರ ಬಂಧನ