ಪಾರ್ಥೀವ ಶರೀರದಂತೆ ಮಲಗಿ ಟೋಲ್ ಗೇಟ್ ಅನ್ಯಾಯ ಪ್ರಶ್ನಿಸಿದ ಆಸಿಫ್ ಆಪತ್ಬಾಂಧವ
ಸುರತ್ಕಲ್: ಎನ್ ಐಟಿಕೆ ಅಕ್ರಮ ಟೋಲ್ ಗೇಟ್ ತೆರವುಗೊಳಿಸಲು ಒತ್ತಾಯಿಸಿ ಸಮಾಜ ಸೇವಕ ಆಸಿಫ್ ಆಪತ್ಬಾಂಧವ ನೇತೃತ್ವದಲ್ಲಿ ವಿನೂತನವಾಗಿ ಪ್ರತಿಭಟನೆ ನಡೆಯುತ್ತಿದ್ದು, ಇಂದಿಗೆ ಪ್ರತಿಭಟನೆ ಐದನೇ ದಿನಕ್ಕೆ ಕಾಲಿಟ್ಟಿದೆ.
ಇಂದು ಮುಂಜಾನೆ, ಸಾರ್ವಜನಿಕರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಧರಣಿ ಸ್ಥಳಕ್ಕೆ ಆಗಮಿಸಿ, ಆಸಿಫ್ ಅವರ ಹೋರಾಟಕ್ಕೆ ಬೆಂಬಲ ನೀಡಿದರು. ನಿನ್ನೆ ಕೆಸರು ಮಣ್ಣಿನಲ್ಲಿ ಮಲಗಿ ಪ್ರತಿಭಟಿಸಿದ್ದ ಆಸಿಫ್ ಆಪತ್ಬಾಂಧವ, ಇಂದು ಪಾರ್ಥೀವ ಶರೀರದಂತೆ ಮಲಗಿ, ಸರ್ಕಾರದ ನಡೆಯ ವಿರುದ್ಧ ವಿನೂತನವಾಗಿ ಪ್ರತಿಭಟನೆ ನಡೆಸಿದರು.
ಇಂದು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಆಮ್ ಆದ್ಮಿ ಪಕ್ಷದ ಮುಖಂಡರು ಅಸಿಫ್ ಅವರ ಹೋರಾಟಕ್ಕೆ ಬೆಂಬಲ ನೀಡಿದ್ದು, ಜೆಡಿಎಸ್ ಮುಖಂಡರು ಕೂಡ ಬೆಂಬಲ ನೀಡಿದರು. ಇನ್ನೂ ನಿನ್ನೆಯ ಪ್ರತಿಭಟನೆಗೆ ಸಾಮಾಜಿಕ ಕಾರ್ಯಕರ್ತ ದೀಪು ಶೆಟ್ಟಿಗಾರ್ ಬೆಂಬಲ ವ್ಯಕ್ತಪಡಿಸಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಲಿಬಿಯಾ ಪ್ರಧಾನಿಯ ಬೆಂಗಾವಲು ವಾಹನದ ಮೇಲೆ ಅಪರಿಚಿತ ಬಂದೂಕುಧಾರಿಗಳಿಂದ ಗುಂಡಿನ ದಾಳಿ
ಎಚ್‌ಐವಿ ಹೊಂದಿದ್ದ ತಂದೆಯಿಂದಲೇ ಮಗಳ ಮೇಲೆ ಅತ್ಯಾಚಾರ: ಆರೋಪಿ ಬಂಧನ
ಗೂಗಲ್ ಮ್ಯಾಪ್ ನೋಡಿ ಕಾರು ಚಾಲನೆ: ಕಾಲುವೆಗೆ ಬಿದ್ದು, 3 ಮಂದಿ ಸಾವು
ಜಿ.ಪಂ., ತಾ.ಪಂ. ಚುನಾವಣೆ: ಎಸ್ಸಿ, ಎಸ್ಟಿಗೆ ಮಾತ್ರ ಮೀಸಲಾತಿ: ಸಚಿವ ಈಶ್ವರಪ್ಪ