ಹಮಾಸ್ ನ ಉನ್ನತ ನಾಯಕರು ಕತಾರ್ ನಲ್ಲಿ ಇಲ್ಲ: ಕತಾರ್ ವಿದೇಶಾಂಗ ಸಚಿವರ ಹೇಳಿಕೆ
ಗಾಝಾದಿಂದ ಹೊರಗಿರುವ ಹಮಾಸ್ ನ ಉನ್ನತ ನಾಯಕ ಮತ್ತು ಅದರ ಮಾತುಕತೆ ಸಮಿತಿಯ ಇತರ ಪ್ರಮುಖ ವ್ಯಕ್ತಿಗಳು ಈಗ ಕತಾರ್ ನಲ್ಲಿ ಇಲ್ಲ ಎಂದು ಕತಾರ್ ವಿದೇಶಾಂಗ ಸಚಿವ ಮಜೀದ್ ಅಲ್ ಅನ್ಸಾರಿ ತಿಳಿಸಿದ್ದಾರೆ.
ಹಾಗೆಯೇ ಅವರ ಈ ಮಾತನ್ನು ಫೆಲೆಸ್ತೀನಿ ನ ಉನ್ನತ ಅಧಿಕಾರಿಗಳು ದೃಢೀಕರಿಸಿದ್ದಾರೆ. ಗಾಝಾದಲ್ಲಿ ಕದನ ವಿರಾಮ ಏರ್ಪಡಿಸುವ ಕುರಿತಂತೆ ಮಧ್ಯಸ್ಥಿಕೆಯಿಂದ ಕತರ್ ತಾತ್ಕಾಲಿಕವಾಗಿ ಹಿಂದೆ ಸರಿದಿದ್ದು, ಹಮಾಸ್ ಕಚೇರಿಗೆ ಈ ಕುರಿತಂತೆ ಮಾಡುವುದಕ್ಕೆ ಏನೂ ಇಲ್ಲ ಎಂದವರು ಹೇಳಿದ್ದಾರೆ.
ಅತಿಥೇಯ ರಾಷ್ಟ್ರಕ್ಕೆ ತಮ್ಮಿಂದಾಗಿ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಹಮಾಸ್ ಉನ್ನತ ಅಧಿಕಾರಿಗಳು ಕತಾರ್ ತೊರೆಯಲು ನಿರ್ಧರಿಸಿದ್ದು ಅವರು ಈಗ ಎಲ್ಲಿದ್ದಾರೆ ಎಂಬುದನ್ನು ಗುಪ್ತವಾಗಿ ಇರಿಸಿಕೊಳ್ಳಲಾಗಿದೆ ಎಂದು ಫೆಲೆಸ್ತೀನಿ ಅಧಿಕಾರಿಗಳನ್ನು ಉಲ್ಲೇಖಿಸಿ ಬಿಬಿಸಿ ವರದಿ ಮಾಡಿದೆ.
2012ರಿಂದ ಹಮಾಸ್ ನ ರಾಜಕೀಯ ಬ್ಯುರೋಕ್ಕೆ ಖತರ್ ಆಶ್ರಯ ಒದಗಿಸಿದ್ದು ಮಾತ್ರ ಅಲ್ಲ ಇಸ್ರೇಲ್ ಜೊತೆ ಹಮಾಸ್ ನಡೆಸುವ ಮಾತುಕತೆಗೆ ಮಧ್ಯಸ್ಥಿಕೆಯನ್ನು ವಹಿಸಿಕೊಳ್ಳುತ್ತಾ ಬಂದಿತ್ತು. ಆದರೆ ಇಸ್ರೇಲ್ ಮತ್ತು ಹಮಾಸ್ ನಡುವಿನ ಕದನ ವಿರಾಮ ಚರ್ಚೆಯಿಂದ ತಾತ್ಕಾಲಿಕವಾಗಿ ತಾನು ಹಿಂಜರಿಯುವುದಾಗಿ ಈ ತಿಂಗಳ ಆರಂಭದಲ್ಲಿ ಕತಾರ್ ಘೋಷಿಸಿತ್ತು.
ಈ ಕ್ರೂರ ಯುದ್ಧದಿಂದ ಹಿಂದಕ್ಕೆ ಸರಿಯಲು ಎರಡೂ ಗುಂಪುಗಳು ತಮ್ಮ ಸಮ್ಮತಿಯನ್ನು ತೋರ್ಪಡಿಸಿದಾಗ ತಾನು ಪುನಃ ಈ ಮಧ್ಯಸ್ಥಿಕೆಗೆ ಮುಂದಾಗುವೆ ಎಂದು ಕೂಡ ಕತರ್ ಹೇಳಿತ್ತು. ಈ ಘೋಷಣೆಯ ಬಳಿಕ ಇದೀಗ ಖತರ್ ಈ ಘೋಷಣೆಯನ್ನು ಮಾಡಿದ್ದು ಹಮಾಸ್ ನ ನಾಯಕರು ತನ್ನ ನೆಲದಲ್ಲಿ ಇಲ್ಲ ಎಂದು ಹೇಳಿದೆ.
ದೋಹದಲ್ಲಿ ಹಮಾಸ್ ನ ಕಚೇರಿ ತೆರೆಯುವುದಕ್ಕೆ ಅವಕಾಶ ಕೊಟ್ಟಿದ್ದೆ ಮಾತುಕತೆಗಾಗಿ. ಮಾತುಕತೆ ನಡೆಯುತ್ತಿಲ್ಲ ಎಂದ ಮೇಲೆ ಈ ಕಚೇರಿಯ ಅಗತ್ಯವೇ ಇಲ್ಲ ಎಂದು ಖತರ್ ತನ್ನ ಸ್ಪಷ್ಟೀಕರಣದಲ್ಲಿ ತಿಳಿಸಿದೆ.
ಈ ನಡುವೆ ಹಮಾಸ್ ನಾಯಕರು ಕತರ್ ನಿಂದ ತುರ್ಕಿಗೆ ಪ್ರಯಾಣಿಸಿದ್ದಾರೆ ಎಂದು ಇಸ್ರೇಲ್ ಮಾಧ್ಯಮಗಳು ವರದಿ ಮಾಡಿವೆ. ಆದರೆ ಇದನ್ನು ಹಮಾಸ್ ತಿರಸ್ಕರಿಸಿದೆ. ತುರ್ಕಿ ವಿದೇಶಾಂಗ ಸಚಿವಾಲಯ ಕೂಡ ಇದನ್ನು ನಿರಾಕರಿಸಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj