ಪೊಲೀಸರಿಗೆ ತಲೆನೋವು: ಇಷ್ಟು ದಿನ ಬಂಡೆ ಏರುತ್ತಿದ್ದ ಪ್ರವಾಸಿಗರು ಈಗ ಗುಡ್ಡ ಹತ್ತುತ್ತಿದ್ದಾರೆ!
24/07/2024
ಚಿಕ್ಕಮಗಳೂರು: ಚಾರ್ಮಾಡಿ ಘಾಟಿಯಲ್ಲಿ ಇಷ್ಟು ದಿನ ಬಂಡೆ ಹತ್ತಿ ರೀಲ್ಸ್ ಮಾಡಿ ಹಿಂಸೆ ಕೊಡುತ್ತಿದ್ದ ರೀಲ್ಸ್, ಸೆಲ್ಫಿ ಪ್ರಿಯರು ಇದೀಗ ಬಂಡೆಯ ಮೇಲಿನ ಗುಡ್ಡ ಹತ್ತಿ ಹುಚ್ಚು ಸಾಹಸಕ್ಕೆ ಕೈ ಹಾಕಿದ್ದಾರೆ.
ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ಈ ಘಟನೆ ನಡೆದಿದೆ. ಪಿರಮಿಡ್ ಆಕಾರದ ಗುಡ್ಡ ಹತ್ತಿ ಜಾರುತ್ತಿರುವ ಬಂಡೆ ಮೇಲಿಂದ ಕೆಳಗಿಳಿಯುತ್ತಿರುವ ಪ್ರವಾಸಿಗರು ಸ್ವಲ್ಪ ಯಾಮಾರಿ ಜಾರಿ ಬಿದ್ರೆ 206 ಮೂಳೆ 412 ಆಗಿರುತ್ತೆ. ಇಂತಹ ಹುಚ್ಚಾಟಕ್ಕೆ ಕೊನೆಯೇ ಇಲ್ಲವೇ ಎಂಬಂತಾಗಿದೆ.
ಸದ್ಯ ಗುಡ್ಡ ಹತ್ತಿದವರಿಗೆ ಪೊಲೀಸರು ಸರಿಯಾಗಿಯೇ ಕ್ಲಾಸ್ ಕೊಟ್ಟಿದ್ದು, ನಾಲ್ವರಿಗೆ ತಲಾ 500 ದಂಡ ವಿಧಿಸಿ ಎಚ್ಚರಿಕೆ ನೀಡಿ ಸ್ಥಳದಿಂದ ಕಳುಹಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: