ಆಟಿಕೆ ಗನ್ ತೋರಿಸಿ ಕಾರನ್ನೇ ಅಪಹರಿಸಿದ್ದ ಐವರು ಅರೆಸ್ಟ್!
ನೋಯ್ಡಾ: ಆಟಿಕೆ ಗನ್ ತೋರಿಸಿ ಕಾರು ಚಾಲಕನನ್ನು ಬೆದರಿಸಿದ ಐವರು ಕಾರು ಅಪಹರಿಸಿದ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ವಿಕಾಸ್, ಕಾರ್ತಿಕ್, ಯುವರಾಜ್ ವಿನಾಯಕ್, ಅಭಿಷೇಕ್ ಶರ್ಮಾ ಹಾಗೂ ಶಿವಂ ವಾಲ್ಮಿಕಿ ಬಂಧಿತ ಆರೋಪಿಗಳಾಗಿದ್ದು, ಇವರಲ್ಲಿ ಓರ್ವ ಬಿಟೆಕ್ ಎರಡನೇ ವರ್ಷದ ವಿದ್ಯಾರ್ಥಿಯಾಗಿದ್ದಾನೆ. ಮತ್ತೊಬ್ಬ ಜಸ್ಟ್ ಡಯಲ್ ನ ಮಾಜಿ ಉದ್ಯೋಗಿಯಾಗಿದ್ದ ಎನ್ನಲಾಗಿದೆ.
ಪ್ರಕರಣ ದಾಖಲಾಗುತ್ತಿದ್ದಂತೆಯೇ ಮೊದಲು ಸಿ ಸಿ ಟಿವಿ ಕ್ಯಾಮರಾಗಳನ್ನು ಪರಿಶೀಲಿಸಿದೆವು. ಇಲ್ಲಿ ನಮಗೆ ಆರೋಪಿಗಳ ಗುರುತು ಪತ್ತೆಯಾಯ್ತು. ಯುವಕರ ಗುಂಪು ಅದೇ ದಿನ ಸಂಜೆ ಇನ್ನೊಂದು ಕಾರನ್ನು ಇದೇ ರೀತಿ ಅಪಹರಿಸಲು ಮುಂದಾಗಿ ವಿಫಲವಾಗಿತ್ತು. ಇದಾದ ಬಳಿಕ ಐ 20 ಕಾರು ಬರುತ್ತಿದ್ದಂತೆಯೇ ಆಟಿಕೆ ಗನ್ ತೋರಿಸಿ ಈ ಕೃತ್ಯ ಎಸಗಿದ್ದಾರೆ ನೋಯ್ಡಾ ಡಿಸಿಪಿ ರಾಜೇಶ್ ಎಸ್, ಘಟನೆಯನ್ನು ವಿವರಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/KPRE32QAEFL3ZvRW2wbYvj
ಇನ್ನಷ್ಟು ಸುದ್ದಿಗಳು…
ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ವಿರೋಧಿಸಿ ಬೆಳ್ತಂಗಡಿಯಲ್ಲಿ ಕ್ಯಾಂಪಸ್ ಫ್ರಂಟ್ ತಹಶೀಲ್ದಾರ್ ಕಚೇರಿಗೆ ಮಾರ್ಚ್
ರಸ್ತೆ ಬದಿಯ 10 ಟನ್ ಸ್ಫೋಟಕ ತುಂಬಿದ್ದ ಲಾರಿ ನಿಂತದ್ದು ಕಂಡು ಬೆಚ್ಚಿಬಿದ್ದ ಜನರು!
ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ | ಬಿಜೆಪಿ ಸಂಸದನಿಗೂ ಗಾಯ
ರಾಜ್ಯದಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ: 17 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ | ಆರೋಪಿ ಅರೆಸ್ಟ್
ಗೋ ಕಳ್ಳತನಕ್ಕೆ ಜಾತಿ ಇಲ್ಲ, ಧರ್ಮ ಇಲ್ಲ, ಬಿಜೆಪಿಯವರೇ ಬೀಫ್ ಎಕ್ಸ್ ಪೋರ್ಟ್ ಮಾಡ್ತಿದ್ದಾರೆ | ಮಿಥುನ್ ರೈ
ಮೃತಪಟ್ಟ ಪ್ರತಿಭಟನಾಕಾರನ ಮೃತದೇಹಕ್ಕೆ ಥಳಿಸಿ, ಒದ್ದು ವಿಕೃತಿ ಮೆರೆದ ಪತ್ರಕರ್ತ