ಅಮಿತ್ ಶಾ ಆಗಮನ ಹಿನ್ನೆಲೆ: ಮಂಗಳೂರು—ಪುತ್ತೂರಿನಲ್ಲಿ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ
ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಮಂಗಳೂರು ನಗರಕ್ಕೆ ಆಗಮಿಸಲಿರುವ ಹಿನ್ನೆಲೆಯಲ್ಲಿ ಸಂಚಾರಿ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ.
ಅಮಿತ್ ಶಾ ಅವರು ಏರ್ಪೋರ್ಟ್ ರಸ್ತೆಯಲ್ಲಿನ ಕೆಂಜಾರು ಸಮೀಪದ ಶ್ರೀದೇವಿ ಇಂಜಿನಿಯರಿಂಗ್ ಕಾಲೇಜ್ ನಲ್ಲಿ ಆಯೋಜಿಸಿರುವ ಸಭೆಯಲ್ಲಿ ಭಾಗವಹಿಸುವ ಕಾರಣ ಸಂಜೆ ಸುಮಾರು 4 ಗಂಟೆಯಿಂದ 9ಗಂಟೆಯವರೆಗೂ ಕೆಂಜಾರು ಸಮೀಪದ ಏರ್ಪೋರ್ಟ್ ರಸ್ತೆಯಲ್ಲಿ ವಾಹನ ಹಾಗೂ ಜನಸಂದಣಿ ಜಾಸ್ತಿ ಇರುವ ಕಾರಣ ಸಂಚಾರ ವ್ಯತ್ಯಯ ಉಂಟಾಗುವುದನ್ನು ತಪ್ಪಿಸಲು ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ.
ವಿವರ ಇಂತಿವೆ:
ಕೆಂಜಾರು ಸಮೀಪದ ರಸ್ತೆಯನ್ನು ಉಪಯೋಗಿಸಿ ಏರ್ಪೋರ್ಟ್ ಗೆ ಹೋಗುವವರು ಪರ್ಯಾಯ ರಸ್ತೆ: ಮುಲ್ಕಿ – ಕಟೀಲ್ – ಬಜಪೆ ಮೂಲಕ ಏರ್ ಪೋರ್ಟ್, ಕುದುರೆಮುಖ ಜಂಕ್ಷನ್ – ಜೋ ಕಟ್ಟೆ – ಪೊರ್ಕೊಡಿ – ಏರ್ ಪೋರ್ಟ್, ಇಂಡಸ್ಟ್ರಿಯಲ್ ಏರಿಯಾ – ಜೋಕಟ್ಟೆ – ಪೊರ್ಕೋಡಿ – ಏರ್ಪೋರ್ಟ್, ನಂತೂರು – ಬಿಕರ್ನಕಟ್ಟೆ- ಕೈಕಂಬ –ಏರ್ಪೋರ್ಟ್ ಈ ಮಾರ್ಗಗಳನ್ನು ಉಪಯೋಗಿಸಬೇಕಾಗಿ ಕೋರಲಾಗಿದೆ ಎಂದು ಪ್ರಕಟನೆ ತಿಳಿಸಿದೆ.
ಇನ್ನು ಪುತ್ತೂರಿನಲ್ಲಿಯೂ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶನಿವಾರ ಪುತ್ತೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಪುತ್ತೂರು ನಗರದ ಮೂಲಕ ಸಾಗುವ ವಾಹನಗಳಿಗೆ ಪರ್ಯಾಯ ಮಾರ್ಗಸೂಚಿ ನಿಗದಿಪಡಿಸಲಾಗಿದೆ.
ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ 275ರಲ್ಲಿ ನಗರದ ಲಿನೆಟ್ ಜಂಕ್ಷನ್‍ನಿಂದ ಮುಕ್ರಂಪಾಡಿ ತನಕ ಮಧ್ಯಾಹ್ನ 2 ಗಂಟೆಯಿಂದ 5 ಗಂಟೆಯ ತನಕ ವಾಹನ ಸಂಚಾರಕ್ಕೆ ಅವಕಾಶವಿಲ್ಲ. ಈ ಸಮಯದಲ್ಲಿ ಮಂಗಳೂರು ಕಡೆಯಿಂದ ಸುಳ್ಯ, ಮಡಿಕೇರಿ ಕಡೆಗೆ ಸಾಗುವ ವಾಹನಗಳು ಲಿನೆಟ್ ಜಂಕ್ಷನ್-ಬೊಳುವಾರು ಜಂಕ್ಷನ್-ದರ್ಬೆ-ಪುರುಷರಕಟ್ಟೆ-ಪಂಜಳ- ಪರ್ಪುಂಜ ಮಾರ್ಗವನ್ನು ಬಳಸಿಕೊಂಡು ಸಾಗಬೇಕಾಗಿದೆ. ಮಡಿಕೇರಿ, ಸುಳ್ಯ ಕಡೆಯಿಂದ ಮಂಗಳೂರಿಗೆ ಆಗಮಿಸುವ ವಾಹನಗಳು ಪರ್ಪುಂಜ- ಪಂಜಳ-ಪುರುಷರಕಟ್ಟೆ-ದರ್ಬೆ- ಬೊಳುವಾರು ಜಂಕ್ಷನ್-ಲಿನೆಟ್ ಜಂಕ್ಷನ್ ಮಾರ್ಗವನ್ನು ಬಳಸಿ ಸಾಗಬೇಕಾಗಿದೆ.
ಅಮಿತ್ ಶಾ ಅವರ ಕಾರ್ಯಕ್ರಮಕ್ಕೆ ಆಗಮಿಸುವ ಬಸ್ಸುಗಳು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ಮುಂಭಾಗದ ಆವರಣದಲ್ಲಿ ಹಾಗೂ ಸುಳ್ಯ ಕಡೆಯಿಂದ ಆಗಮಿಸುವ ಬಸ್ಸುಗಳು ಮುಕ್ರಂಪಾಡಿ ಸಾಂತೋ ಚರ್ಚ್‍ಮುಂಬಾಗದ ಖಾಲಿ ಮೈದಾನದಲ್ಲಿ ನಿಲುಗಡೆ ಮಾಡಬೇಕು. ವಿಐಪಿ ವಾಹನಗಳನ್ನು ತೆಂಕಿಲ ಗೌಡ ಸಮುದಾಯ ಭವನದ ಬಳಿ, ಅದರ ಪಕ್ಕದ ಜಾಗದಲ್ಲಿ, ದರ್ಶನ್ ಹಾಲ್ ಬಳಿ ಮತ್ತು ಅದರ ಪಕ್ಕದ ಖಾಲಿ ಜಾಗದಲ್ಲಿ ನಿಲುಗಡೆ ಮಾಡಬೇಕು ಎಂದು ಪುತ್ತೂರು ಸಹಾಯಕ ಆಯುಕ್ತರು ಆದೇಶ ನೀಡಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw