ಮಗು ಸಹಿತ ಒಂದೇ ಕುಟುಂಬದ ಐವರ ದುರಂತ ಸಾವು: ತಡರಾತ್ರಿ ನಡೆಯಿತು ಭೀಕರ ಅಪಘಾತ! - Mahanayaka

ಮಗು ಸಹಿತ ಒಂದೇ ಕುಟುಂಬದ ಐವರ ದುರಂತ ಸಾವು: ತಡರಾತ್ರಿ ನಡೆಯಿತು ಭೀಕರ ಅಪಘಾತ!

up news
31/10/2023

ಲಕ್ನೋ: ಕಾರೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ 4 ವರ್ಷದ ಮಗು ಸಹಿತ ಒಂದೇ ಕುಟುಂಬದ ಐವರು ದಾರುಣವಾಗಿ ಸಾವನ್ನಪ್ಪಿರುವ ಘಟನ ಉತ್ತರ ಪ್ರದೇಶದ ಹರ್ದೋಯಿ ಬಿಲಹೌರ್—ಕತ್ರಾ ಹೆದ್ದಾರಿಯಲ್ಲಿ ಸೋಮವಾರ ತಡರಾತ್ರಿ ನಡೆದಿದೆ.

ಕುಟುಂಬವು ಬರಕಾಂತ್ ಗ್ರಾಮದಿಂದ ನಯಾಗಾಂವ್ ಗೆ ತೆರಳುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಕಾರು ಮರವೊಂದಕ್ಕೆ ಡಿಕ್ಕಿ ಹೊಡೆದಿದೆ.

ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಕಾರಿನಲ್ಲಿ ಸಿಲುಕಿದ್ದ ಮೃತದೇಹಗಳನ್ನು ಹೊರ ತೆಗೆದಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.


Provided by

ಇತ್ತೀಚಿನ ಸುದ್ದಿ