ರೈಲು ದುರಂತ: ಮೃತ ದೇಹಗಳ ರಾಶಿಯಲ್ಲಿ ತಮ್ಮವರನ್ನು ಹುಡುಕುತ್ತಿರುವ ಕುಟುಂಬಸ್ಥರು! - Mahanayaka

ರೈಲು ದುರಂತ: ಮೃತ ದೇಹಗಳ ರಾಶಿಯಲ್ಲಿ ತಮ್ಮವರನ್ನು ಹುಡುಕುತ್ತಿರುವ ಕುಟುಂಬಸ್ಥರು!

odisha train
05/06/2023

ಒಡಿಶಾ ಭೀಕರ ರೈಲು ಅಪಘಾತ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ದೇಶ ವಿದೇಶಗಳಲ್ಲಿ ಒಡಿಶಾ ರೈಲು ಅಪಘಾತದ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಅಪಘಾತದಲ್ಲಿ 275 ಜನರು ಸಾವನ್ನಪ್ಪಿದ್ದಾರೆ. 56 ಮಂದಿಯ ಸ್ಥಿತಿ ಚಿಂತಾ ಜನಕವಾಗಿದೆ. ಸಾವಿರಕ್ಕೂ ಅಧಿಕ ಜನರು ಗಂಭೀರವಾದ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.


Provided by

ರೈಲು ಅಪಘಾತದಲ್ಲಿ ತಮ್ಮವರನ್ನು ಕಳೆದುಕೊಂಡವರು  ಹೆಣಗಳ ರಾಶಿಯಲ್ಲಿ ತಮ್ಮವರ ಹುಡುಕಾಟ ನಡೆಸುತ್ತಿದ್ದಾರೆ. ಒಂದೆಡೆ ಮೃತದೇಹಗಳನ್ನಿಡಲು ಸರಿಯಾದ ವ್ಯವಸ್ಥೆಗಳನ್ನೂ ಮಾಡದೇ ಒಂದು ಕೋಣೆಯಲ್ಲಿ ರಾಶಿ ಹಾಕಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಇಷ್ಟೊಂದು ದೊಡ್ಡ ದುರಂತ ಸಂಭವಿಸಿದಾಗ ಮೃತದೇಹಗಳನ್ನು ಸುರಕ್ಷಿತವಾಗಿಡಲು ವ್ಯವಸ್ಥೆ ಮಾಡಿಲ್ಲ ಎಂಬ ಆಕ್ರೋಶಗಳು ಕೂಡ ಕೇಳಿ ಬಂದಿವೆ.

ಈವರೆಗೆ ಕೇವಲ 88 ಮೃತದೇಹಗಳನ್ನು ಮಾತ್ರವೇ ಗುರುತಿಸಲಾಗಿದೆ. ತಮ್ಮವರು ಬದುಕಿದ್ದಾರಾ? ಎಂಬ ಹುಟುಕಾಡದಲ್ಲಿರುವ ಕುಟುಂಬಸ್ಥರು ಮೃತದೇಹಗಳ ರಾಶಿಯಲ್ಲಿ ತಮ್ಮವರನ್ನು ಹುಡುಕಾಡುತ್ತಿದ್ದಾರೆ.


Provided by

ಕೋಲ್ಡ್ ಸ್ಟೋರೇಜ್ ಶವಗಾರದಲ್ಲಿ ಕೇವಲ 40 ಮೃತದೇಹಗಳನ್ನಿಡುವಷ್ಟು ಮಾತ್ರವೇ ವ್ಯವಸ್ಥೆ ಇದೆ ಎಂದು ಭುವನೇಶ್ವರ ಜಿಲ್ಲಾ ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಶವಗಳನ್ನು ರಾಸಾಯನಿಕಗಳ ಮೂಲಕ ಸಂರಕ್ಷಿಸಲಾಗುತ್ತಿದೆ. ಇನ್ನೊಂದೆಡೆ ಬೇಸಿಗೆ ಸಮಯವಾಗಿರುವುದರಿಂದ ಮೃತದೇಹಗಳನ್ನು ರಕ್ಷಿಸಿಡುವುದು ಕಷ್ಟಕರ ಕೆಲಸವಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

ದೇಶದಲ್ಲಿ ಇಷ್ಟೊಂದು ದೊಡ್ಡ ರೈಲು ದುರಂತ ಸಂಭವಿಸಿದರೂ ಮೃತದೇಹಗಳನ್ನಿಡಲು ತಕ್ಷಣದಲ್ಲಿ ಯಾವುದೇ ವ್ಯವಸ್ಥೆಗಳನ್ನು ಮಾಡದೇ ಇರುವುದು, ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ