ರೈಲಿನಲ್ಲಿ ನಿದ್ದೆ ಮಾಡುವವರಿಗೆ ಸಿಹಿ ಸುದ್ದಿ! - Mahanayaka
11:37 PM Tuesday 4 - February 2025

ರೈಲಿನಲ್ಲಿ ನಿದ್ದೆ ಮಾಡುವವರಿಗೆ ಸಿಹಿ ಸುದ್ದಿ!

train
06/06/2022

ನವದೆಹಲಿ:  ದೂರದ ಪ್ರಯಾಣಿಕರಿಗೆ ವೇಕ್  ಅಪ್ ಅಲರ್ಟ್ ಸೌಲಭ್ಯವನ್ನು ರೈಲ್ವೆ ಇಲಾಖೆ ಆರಂಭಿಸಿದ್ದು, ‘ಡೆಸ್ಟಿನೇಶನ್ ಅಲರ್ಟ್ ವೇಕಪ್ ಅಲಾರ್ಮ್’ ಸೌಲಭ್ಯ ಇದಾಗಿದೆ.

ಸದ್ಯ ಈ ಸೌಲಭ್ಯವನ್ನು ರಾತ್ರಿ 11 ರಿಂದ ಬೆಳಿಗ್ಗೆ 7 ರವರೆಗೆ ಪಡೆಯಬಹುದು. ಮುಂದಿನ ನಿಲ್ದಾಣ ಬರುವ 20 ನಿಮಿಷಗಳ ಮೊದಲು ಪ್ರಯಾಣಿಕರನ್ನು ಅಲಾರಾಮ್‌ ಮೂಲಕ ಎಚ್ಚರಿಸಲಿದೆ. ಇದರಿಂದ ನಿದ್ದೆಯಲ್ಲಿ ಇದ್ದವರೂ ಬೇಗನೇ ಎದ್ದು ತಮ್ಮ ನಿಲ್ದಾಣದಲ್ಲಿ ಇಳಿಯಲು ಅನುಕೂಲ ಮಾಡಿಕೊಳ್ಳಬಹುದು.

ಇದಕ್ಕಾಗಿ ಪ್ರಯಾಣಿಕರು  ಮೊಬೈಲ್ ಸಂಖ್ಯೆ 139 ಗೆ ಕರೆ ಮಾಡಬೇಕಾಗುತ್ತದೆ ಅಥವಾ ಸಂದೇಶವನ್ನು ಕಳುಹಿಸಬೇಕಾಗುತ್ತದೆ. ಮೊದಲು ನಿಮ್ಮ ಭಾಷೆಯನ್ನು ಆಯ್ಕೆ ಮಾಡಬೇಕು. ಅದರ ನಂತರ, ಪ್ರಯಾಣಿಕರಿಂದ 10-ಅಂಕಿಯ ಪಿಎನ್‌ ಆರ್‌  ಸಂಖ್ಯೆಯನ್ನು ಕೇಳಲಾಗುತ್ತದೆ. ಅದನ್ನು ನೀವು ಕಳುಹಿಸಬೇಕು. ಖಚಿತಪಡಿಸಲು 1 ಅನ್ನು ಡಯಲ್ ಮಾಡಬೇಕು. ಇದಾದ ಮೇಲೆ ದೃಢೀಕರಣದ ಎಸ್‌ಎಂಎಸ್‌ ಮೊಬೈಲ್‌ ಗೆ ಬರುತ್ತದೆ. ಪ್ರತಿ ಎಚ್ಚರಿಕೆಗೆ ತಲಾ 3 ರೂಪಾಯಿಗಳ ಎಸ್‌ ಎಂಎಸ್‌  ಶುಲ್ಕವನ್ನು ವಿಧಿಸಲಾಗುತ್ತದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಪತಿಯನ್ನು ಕಟ್ಟಿ ಹಾಕಿ ಪತ್ನಿಯ ಮೇಲೆ ಐವರಿಂದ ಸಾಮೂಹಿಕ ಅತ್ಯಾಚಾರ!: ಅಮಾನವೀಯ ಘಟನೆ

ಪಠ್ಯಪರಿಷ್ಕರಣೆ ಸಮಿತಿಯಿಂದ ಮತ್ತೊಂದು ಯಡವಟ್ಟು: ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ

ಸೊಸೆಗೆ ಮಕ್ಕಳಾಗುತ್ತಿಲ್ಲ ಎಂದು ತನ್ನಿಬ್ಬರು ಪುತ್ರರಿಂದ ಅತ್ಯಾಚಾರ ನಡೆಸಿದ ಪಾಪಿ ಅತ್ತೆ!

ಮುಖ್ಯಮಂತ್ರಿಯನ್ನು ಭೇಟಿಯಾಗಿ ಮದುವೆಗೆ ಆಹ್ವಾನಿಸಿದ ನಯನತಾರಾ- ಶಿವನ್

ಇತ್ತೀಚಿನ ಸುದ್ದಿ