ತರಬೇತಿ ವೈದ್ಯೆಯ ಅತ್ಯಾಚಾರ ಕೊಲೆ ಕೇಸ್: ಸುಳ್ಳು ಪೋಸ್ಟ್ ವೈರಲ್; 35 ಕೇಸ್ ಗಳು ದಾಖಲು - Mahanayaka
7:12 AM Saturday 19 - October 2024

ತರಬೇತಿ ವೈದ್ಯೆಯ ಅತ್ಯಾಚಾರ ಕೊಲೆ ಕೇಸ್: ಸುಳ್ಳು ಪೋಸ್ಟ್ ವೈರಲ್; 35 ಕೇಸ್ ಗಳು ದಾಖಲು

16/08/2024

ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯೆಯ ಭೀಕರ ಅತ್ಯಾಚಾರ ಮತ್ತು ಕೊಲೆಯ ನಂತರ ಸಾಮಾಜಿಕ ಮಾಧ್ಯಮಗಳಲ್ಲಿ ನಕಲಿ ಸುದ್ದಿಗಳು ವೈರಲ್ ಆಗುತ್ತಿವೆ. ಅವುಗಳನ್ನು ಭೇದಿಸುತ್ತಿರುವ ಕೋಲ್ಕತ್ತಾ ಪೊಲೀಸರು ಈವರೆಗೆ 10 ಎಫ್‌ಐಆರ್‌ ದಾಖಲಿಸಿದ್ದು, 35 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ಕಳೆದ 24 ಗಂಟೆಗಳಲ್ಲಿ ಹಲವರಿಗೆ 200ಕ್ಕೂ ಹೆಚ್ಚು ನೋಟಿಸ್‌ಗಳನ್ನು ಪೊಲೀಸರು ನೀಡಿದ್ದಾರೆ.

ಪ್ರಕರಣ ದಾಖಲಾಗಿರುವ ಆರೋಪಿಗಳಲ್ಲಿ ಪತ್ರಕರ್ತರು, ರಾಜಕಾರಣಿಗಳು, ವೈದ್ಯರು ಮತ್ತು ಇತರ ಸಾಮಾಜಿಕ ಮಾಧ್ಯಮ ಬಳಕೆದಾರರು ಸೇರಿದ್ದಾರೆ. ಪ್ರಕರಣ ಮತ್ತು ಘಟನೆಗೆ ಸಂಬಂಧಿಸಿದಂತೆ ತಪ್ಪಾದ ಮಾಹಿತಿಗಳು, ವೀಡಿಯೊಗಳು, ಧ್ವನಿ ಟಿಪ್ಪಣಿಗಳು, ನಕಲಿ ಮರಣೋತ್ತರ ವರದಿ ಸೇರಿದಂತೆ ನಾನಾ ಸುಳ್ಳುಗಳನ್ನು ಹರಿಬಿಡುಲಾಗುತ್ತಿದೆ. ಪೊಲೀಸರು ಹೆಚ್ಚಿನ ನೋಟಿಸ್‌ಗಳನ್ನು ಕಳುಹಿಸುವ ಮೂಲಕ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ಕೋಲ್ಕತ್ತಾ ಪೊಲೀಸ್‌ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

“ಅಪರಾಧದ ಬಗ್ಗೆ ತನಿಖೆಗಳು ನಡೆಯುತ್ತಿರುವಾಗ ಸುಳ್ಳು ನಿರೂಪಣೆಗಳು ಮತ್ತು ಪರಿಶೀಲಿಸದ ಮಾಹಿತಿಗಳನ್ನು ಫೇಸ್‌ಬುಕ್, ‘ಎಕ್ಸ್’ ಮತ್ತು ವಾಟ್ಸಾಪ್‌ನಂತಹ ಪ್ಲಾಟ್‌ಫಾರ್ಮ್‌ಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಕೆಲವು ಪೋಸ್ಟ್‌ಗಳು ತನಿಖೆಯ ಸತ್ಯಗಳನ್ನು ದಾರಿ ತಪ್ಪಿಸುವಂತಿವೆ. ಆಧಾರರಹಿತ ತಪ್ಪು ಮಾಹಿತಿಯಿಂದ ಉಂಟಾಗುವ ಗಂಭೀರ ಅಪಾಯಗಳನ್ನು ಎದುರಿಸುತ್ತಿರುವಾಗ ನಾವು ನಿರ್ಣಾಯಕ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ” ಎಂದು ಅವರು ಹೇಳಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ