ಭಾರೀ ಮಳೆಗೆ ಸಿಲಿಕಾನ್ ಸಿಟಿಯಲ್ಲಿ ವಾಹನಗಳ ಮೇಲೆ ಉರುಳಿದ ಮರಗಳು!
03/06/2024
ಬೆಂಗಳೂರು: ಭಾನುವಾರ ಸುರಿದ ಭಾರೀ ಮಳೆಗೆ ಸಿಲಿಕಾನ್ ಸಿಟಿಯ ಕೆಲವೆಡೆಗಳಲ್ಲಿ ಮರಗಳು ನೆಲಕ್ಕುರುಳಿದ್ದು, ಸಂಕಷ್ಟ ಸೃಷ್ಟಿಯಾಗಿದೆ. ಗಾಳಿ ಮಳೆಯ ಪರಿಣಾಮ ಸುಮಾರು 206 ಮರಗಳು ನೆಲಕ್ಕುರುಳಿದೆ ಎಂದು ಹೇಳಲಾಗಿದೆ.
ಹಾಸ್ ಮ್ಯಾಟ್ ಆಸ್ಪತ್ರೆಯ ಸಿಗ್ನಲ್ ಬಳಿಯಲ್ಲಿ ಚಲಿಸುತ್ತಿದ್ದ ಆಟೋ ಮೇಲೆ ಮರವೊಂದು ಉರುಳಿ ಬಿದ್ದಿದೆ. ಇದರ ಪರಿಣಾಮ ಆಟೋ ಜಖಂಗೊಂಡಿದೆ. ಪೀಣ್ಯದ ಅರವಿಂದ ಮೋಟರ್ಸ್ ಬಳಿ ಕಾರಿನ ಮೇಲೆ ಮರವೊಂದು ಬಿದ್ದಿದ್ದು, ಕಾರಿನಲ್ಲಿ ಸಿಲುಕಿದ್ದ ಚಾಲಕನನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಮಳೆಯಿಂದಾಗಿ ಸಾಲು ಸಾಲು ಅವಾಂತರಗಳು ಸೃಷ್ಟಿಯಾಗಿವೆ. ಕೆಲವೆಡೆಗಳಲ್ಲಿ ಮಳೆ ನೀರು ಮನೆಗಳಿಗೆ ನುಗ್ಗಿ ಸಂಕಷ್ಟ ಎದುರಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: