ಟ್ರಂಪ್ ತಪ್ಪೇ ಮಾಡಿಲ್ವಂತೆ: ಭಾರತೀಯರನ್ನು ಗಡೀಪಾರು ಮಾಡಿದ್ದನ್ನು ಸಮರ್ಥಿಸಿದ ಹರ್ಯಾಣದ ಸಚಿವ
![](https://www.mahanayaka.in/wp-content/uploads/2025/02/bd91d010497bf833353f179304fc322ddae44ea89c01807e33efe961cbf4ca0b.0.jpg)
ಅಮೆರಿಕಾದ ಅಧ್ಯಕ್ಷ ಟ್ರಂಪ್ ಯಾವ ತಪ್ಪನ್ನೂ ಮಾಡಿಲ್ಲ. ಅನಧಿಕೃತವಾಗಿ ದೇಶದಲ್ಲಿ ಉಳಿದುಕೊಂಡವರನ್ನು ಗಡಿಪಾರು ಗೊಳಿಸುವ ಎಲ್ಲಾ ಹಕ್ಕು ಆಯಾ ರಾಷ್ಟ್ರಗಳಿಗೆ ಇದೆ ಎಂದು ಹರಿಯಾಣದ ಸಚಿವ ಅನಿಲ್ ವಿಜ್ ಸಮರ್ಥಿಸಿದ್ದಾರೆ.
ಓರ್ವ ವ್ಯಕ್ತಿ ಅನಧಿಕೃತವಾಗಿ ಇನ್ನೊಂದು ರಾಷ್ಟ್ರಕ್ಕೆ ಹೋದರೆ ಅವರನ್ನು ಹೊರಹಾಕುವ ಎಲ್ಲಾ ಹಕ್ಕು ಆ ರಾಷ್ಟ್ರಕ್ಕೆ ಇದೆ. ಟ್ರಂಪ್ ಯಾವ ತಪ್ಪನ್ನೂ ಮಾಡಿಲ್ಲ ಎಂದು ಅವರು ಹೇಳಿದ್ದಾರೆ.
ಇದರಿಂದ ನಾವು ಒಂದು ವಿಷಯವನ್ನು ಮನವರಿಕೆ ಮಾಡಿಕೊಳ್ಳಬೇಕು. ಲಕ್ಷಾಂತರ ಮಂದಿ ನಮ್ಮಲ್ಲೂ ಕಾನೂನುಬಾಹಿರವಾಗಿ ವಾಸಿಸುತ್ತಿದ್ದಾರೆ. ಅವರು ಬೇರೆಲ್ಲೊ ಜನಿಸಿದವರಾಗಿದ್ದಾರೆ. ಆದರೆ ನಾವು ಅವರಿಗೆ ಆಹಾರ ನೀಡುತ್ತೇವೆ. ನಾವು ಅವರನ್ನು ಅವರ ರಾಷ್ಟ್ರಕ್ಕೆ ಮರಳಿಸಬೇಕು ಎಂದು ಕೂಡ ಅವರು ಹೇಳಿದ್ದಾರೆ.
ಅಮೆರಿಕ ಮರಳಿಸಿರುವ 104 ಭಾರತೀಯರಲ್ಲಿ 33 ಮಂದಿ ಹರಿಯಾಣದವರಾಗಿದ್ದು, ಅವರ ಕೈಕಾಲುಗಳಿಗೆ ಬೇಡಿಯನ್ನು ತೊಡಿಸಿ ಕಳುಹಿಸಲಾದ ಕುರಿತಂತೆ ಕೇಳಲಾದ ಪ್ರಶ್ನೆಗೆ ಅನಿಲ್ ವಿಜ್ ಈ ಉತ್ತರವನ್ನು ನೀಡಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj