ಟ್ರಂಪ್ ಸೋಲಿನಿಂದ ಬಿಜೆಪಿ ಪಾಠ ಕಲಿಯಬೇಕು | ಶಿವಸೇನೆ
ಮುಂಬೈ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಲಿನಿಂದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಪಾಠ ಕಲಿತರೆ ಒಳ್ಳೆಯದು ಎಂದು ಶಿವಸೇನೆ ಹೇಳಿದ್ದು, ತನ್ನ ಮುಖವಾಣಿ ಪತ್ರಿಕೆ ಸಾಮ್ನಾದಲ್ಲಿ ಈ ಬಗ್ಗೆ ಶಿವಸೇನೆ ಸಂಪಾದಕೀಯ ಬರೆದಿದೆ.
ಅಧ್ಯಕ್ಷ ಟ್ರಂಪ್ ಎಂದಿಗೂ ರಾಷ್ಟ್ರದ ಅಧ್ಯಕ್ಷ ಪಟ್ಟಕ್ಕೆ ಅರ್ಹರಲ್ಲ. ಅಮೆರಿಕದ ನಾಗರಿಕರು ತಾವು ನಾಲ್ಕು ವರ್ಷದ ಹಿಂದೆ ಮಾಡಿದ್ದ ತಪ್ಪನ್ನು ಸರಿಪಡಿಸಿದ್ದಾರೆ. ಟ್ರಂಪ್ ಗೆ ಒಂದೂ ಭರವಸೆ ಪೂರೈಸಲಾಗಿಲ್ಲ. ಹಾಗೆಯೇ ಕೇಂದ್ರ ಸರ್ಕಾರ ಕೂಡ ಟ್ರಂಪ್ ಸೋಲಿನಿಂದ ಕಲಿತರೆ ಒಳ್ಳೆಯದಾಗಲಿದೆ ಎಂದು ಹೇಳಿದೆ.
ಅಮೆರಿಕದಲ್ಲಿ ಹೇಗೆ ಅಧಿಕಾರ ಬದಲಾವಣೆ ಆಗಿದೆಯೋ ಹಾಗೆಯೇ ಬಿಹಾರದಲ್ಲಿ ಕೂಡ ಅಧಿಕಾರ ಬದಲಾವಣೆಯಾಗಲಿದೆ. ನಿತೀಶ್ ಕುಮಾರ್ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವು ನೆಲಕಚ್ಚಲಿದೆ. ದೇಶ ಮತ್ತು ರಾಜ್ಯಗಳಲ್ಲಿ ನಮ್ಮನ್ನು ಬಿಟ್ಟರೆ ಪರ್ಯಾಯವಿಲ್ಲ ಎಂದು ಹೇಳುವ ಭ್ರಮೆಯಲ್ಲಿರುವ ನಾಯಕರನ್ನು ಮನೆಗೆ ಕಲಿಸುವ ಕೆಲಸ ಆಗಬೇಕಿದೆ.
ಭಾರತೀಯ ಮೂಲದ ಕಮಲಾ ಹ್ಯಾರಿಸ್ ಅಮೆರಿಕದ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ. ಟ್ರಂಪ್ ಮಹಿಳೆಯನ್ನು ಗೌರವಿಸಲಿಲ್ಲ ಮತ್ತು ನಮ್ಮ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಂತಹ ವ್ಯಕ್ತಿಯನ್ನು ಬೆಂಬಲಿಸುವವರು ಇದರಿಂದ ಕಲಿಯಬೇಕು ಎಂದು ಶಿವಸೇನೆ ಹೇಳಿದೆ.