ಅಧ್ಯಕ್ಷೀಯ ಚುನಾವಣೆಗೆ ಇನ್ನು 12 ದಿನಗಳು ಬಾಕಿ | ಸಂವಾದದಲ್ಲಿ ಮುಖಾಮುಖಿಯಾಗಲಿರುವ ಟ್ರಂಪ್- ಬೈಡನ್
ಅಮೆರಿಕ ಅಧ್ಯಕ್ಷರ ಆಯ್ಕೆಗೆ ಇನ್ನು ಕೇವಲ 12 ದಿನಗಳು ಮಾತ್ರ ಉಳಿದಿವೆ. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್, ಡೆಮಾಕ್ರಟಿಕ್ ಪಕ್ಷದ ಜೊ ಬೈಡನ್ ನಡುವೆ ಎರಡನೇ ಮತ್ತು ಕೊನೆಯ ಸಂವಾದ ಗುರುವಾರ ರಾತ್ರಿ ನಡೆಯಲಿದೆ.
90 ನಿಮಿಷಗಳ ಅವಧಿಯ ಮುಖಾಮುಖಿ ವೇಳೆ ಟ್ರಂಪ್ ಹಾಗೂ ಬೈಡನ್ ಅವರು ದೇಶದ ಜನರ ಮುಂದೆ ತಮ್ಮ ಸಾಧನೆಗಳು ಹಾಗೂ ತಮ್ಮ ಉದ್ದೇಶಗಳ ಬಗ್ಗೆ ಮಾತನಾಡಲಿದ್ದಾರೆ. ಅಧ್ಯಕ್ಷ ಗಾದಿ ಏರಲು ತೀವ್ರ ಪೈಪೋಟಿ ನಡೆಯಲಿದೆ. ಇದೇ ಸಂದರ್ಭದಲ್ಲಿ ಗುರುವಾರ ರಾತ್ರಿ ಈ ಇಬ್ಬರು ಅಭ್ಯರ್ಥಿಗಳು ಮಾತನಾಡುವ ವಿಷಯ ಅತ್ಯಂತ ಪ್ರಮುಖವಾಗಿರುತ್ತದೆ. ಇದು ಮುಖಾಮುಖಿ ಭಾಷಣವಾಗಿದೆ.
ಬೈಡನ್ ವಿರುದ್ಧ ಟ್ರಂಪ್ ಇಲ್ಲಿಯವರೆಗೂ ಆಕ್ರಮಣಕಾರಿಯಾಗಿಯೇ ಮಾತನಾಡುತ್ತ ಬಂದಿದ್ದಾರೆ. ಆದರೆ ಟ್ರಂಪ್ ಮಾತುಗಳು ತಿರುಗು ಬಾಣವಾಗಿದ್ದೇ ಹೆಚ್ಚು. ಇದರಿಂದ ಟ್ರಂಪ್ ವ್ಯಕ್ತಿತ್ವಕ್ಕೇ ತೊಂದರೆಯಾಗಿದ್ದು ಹೆಚ್ಚು. ಆದರೆ ಈ ಕೊನೆಯ ಸಂವಾದವು ಇಬ್ಬರು ಅಭ್ಯರ್ಥಿಗಳಿಗೂ ಬಹುಮುಖ್ಯವಾದ್ದದ್ದಾಗಿದೆ. ಹೀಗಾಗಿ ಇಬ್ಬರು ಅಭ್ಯರ್ಥಿಗಳಿಗೂ ಸವಾಲು ಇದ್ದದ್ದೆ. ಇವರ ಪೈಕಿ ಯಾರು ಜನರ ಮನಸ್ಸನ್ನು ಗೆಲ್ಲುತ್ತಾರೆ ಎನ್ನುವುದು ಕಾದುನೋಡಬೇಕಿದೆ.