ಟ್ರಂಪ್ ಗೆಳೆಯ ಎಲಾನ್ ಮಸ್ಕ್ ಗೆ 14ನೇ ಮಗು: ಎಕ್ಸ್ ನಲ್ಲಿ ಮಾಹಿತಿ ಬಹಿರಂಗ

03/03/2025
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಲಹೆಗಾರ ಮತ್ತು ಶತಕೋಟ್ಯಾಧೀಶನಾಗಿರುವ ಎಲಾನ್ ಮಸ್ಕ್ ಅವರಿಗೆ 14ನೇ ಮಗುವಾಗಿದೆ.
ಈ ಬಗ್ಗೆ ಅವರು ಎಕ್ಸ್ ನಲ್ಲಿ ಸಂತಸ ಹಂಚಿಕೊಂಡಿದ್ದಾರೆ. ಅವರ ಸಂಗಾತಿ ಮತ್ತು ನ್ಯೂರಾಲಿಂಕ್ ನ ಡೈರೆಕ್ಟರ್ ಆಗಿರುವ ಶಿವುನ್ ಸಿಲೀಸ್ ಅವರು ಮಗುವಿಗೆ ಜನ್ಮ ನೀಡಿದ್ದಾರೆ.
ಇವರಿಗೆ ಇದು ನಾಲ್ಕನೇ ಮಗು. ಮಸ್ಕ್ ಅವರ ಈ ಹಿಂದಿನ ಪತ್ನಿ ಜಸ್ಟಿನ್ ಗೆ ಆರು ಮಕ್ಕಳಿದ್ದಾರೆ. 2002 ರಲ್ಲಿ ಜನಿಸಿದ ಮೊದಲ ಮಗು ಮೃತಪಟ್ಟಿತ್ತು. ಕೆನಡಾದ ಗಾಯಕಿ ಗ್ರಿನ್ಸ್ ಎಂಬವರಿಗೆ ಮೂರು ಮಕ್ಕಳಿದ್ದಾರೆ. ತನ್ನ ಮಕ್ಕಳು ಮತ್ತು ತಾಯಂದಿರಿಗಾಗಿ ಟೆಕ್ಸಾಸ್ ನಲ್ಲಿ 295 ಕೋಟಿ ರೂಪಾಯಿಯ ಆಡಂಬರ ಬಂಗಲೆಯನ್ನು ಈ ಮಸ್ಕ್ ಖರೀದಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj