ಅನಧಿಕೃತ ವಲಸಿಗರ ಕೈ ಮತ್ತು ಕಾಲುಗಳಿಗೆ ಸಂಕೋಲೆ: ಟ್ರಂಪ್ ಆಪ್ತ ಇಲಾನ್ ಮಸ್ಕ್ ನಿಂದ ವ್ಯಂಗ್ಯದ ಕಮೆಂಟ್ - Mahanayaka

ಅನಧಿಕೃತ ವಲಸಿಗರ ಕೈ ಮತ್ತು ಕಾಲುಗಳಿಗೆ ಸಂಕೋಲೆ: ಟ್ರಂಪ್ ಆಪ್ತ ಇಲಾನ್ ಮಸ್ಕ್ ನಿಂದ ವ್ಯಂಗ್ಯದ ಕಮೆಂಟ್

19/02/2025

ಅನಧಿಕೃತ ವಲಸಿಗರ ಕೈ ಮತ್ತು ಕಾಲುಗಳಿಗೆ ಸಂಕೋಲೆಯಿಂದ ಬಿಗಿದಿರುವ ದೃಶ್ಯವನ್ನು ಅಮೆರಿಕಾದ ವೈಟ್ ಹೌಸ್ ಬಿಡುಗಡೆಗೊಳಿಸಿದೆ. ಎಕ್ಸ್ ಕಥೆಯ ಮೂಲಕ ಈ ದೃಶ್ಯಗಳನ್ನ ಬಿಡುಗಡೆಗೊಳಿಸಲಾಗಿದೆ ಈ ದೃಶ್ಯಗಳಿಗೆ ಹಾ ಹಾ ವಾವ್ ಎಂದು ಟ್ರಂಪ್ ಅವರ ಆಪ್ತ ಇಲಾನ್ ಮಸ್ಕ್ ಕಾಮೆಂಟ್ ಮಾಡಿದ್ದಾರೆ.

ಆದರೆ ಮಸ್ಕ್ ಅವರ ಈ ಕಾಮೆಂಟಿಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಅಮೆರಿಕ ಬಿಡುಗಡೆಗೊಳಿಸಿದ ದೃಶ್ಯಗಳು 40 ಸೆಕೆಂಡ್ ನಷ್ಟು ದೀರ್ಘವಿದೆ.
ಅತ್ಯಂತ ಅಮಾನವೀಯವಾಗಿ ವಲಸಿಗರನ್ನು ಕಳುಹಿಸಿ ಕೊಡುತ್ತಿರುವುದರ ಬಗ್ಗೆ ಜಾಗತಿಕವಾಗಿಯೇ ವಿರೋಧ ವ್ಯಕ್ತವಾಗುತ್ತಿರುವುದರ ನಡುವೆಯೇ ವೈಟ್ ಹೌಸ್ ಈ ದೃಶ್ಯಗಳನ್ನ ಬಿಡುಗಡೆಗೊಳಿಸಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ