ಅಮೆರಿಕದಲ್ಲಿ ಟ್ರಂಪ್ ಗೆಲುವು: ಭಾರೀ ಸಂಖ್ಯೆಯಲ್ಲಿ X ಖಾತೆ ತೊರೆದ ಅಮೆರಿಕನ್ನರು
ಯುಎಸ್ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಅವರ ಅಧ್ಯಕ್ಷರಾಗಿ ಗೆಲುವು ಖಚಿತಗೊಂಡ ನಂತರ ಅಮೆರಿಕಾ ದೇಶದಲ್ಲಿ ಒಂದರಲ್ಲಿಯೇ 100,000 ಕ್ಕೂ ಹೆಚ್ಚು ಬಳಕೆದಾರರು ಸಾಮಾಜಿಕ ಮಾಧ್ಯಮ ವೇದಿಕೆ ‘X’ ಅನ್ನು ತೊರೆದಿದ್ದಾರೆ ಎಂದು ವರದಿಯಾಗ್ತಾ ಇದೆ.
ಚುನಾವಣೆಯ ಮರುದಿನವೇ 115,000 US ಬಳಕೆದಾರರು ತಮ್ಮ ‘X’ ಖಾತೆಗಳನ್ನು ನಿಷ್ಕ್ರಿಯಗೊಳಿಸಿದ್ದಾರೆ ಎಂದು ಆಂಗ್ಲ ಮಾಧ್ಯಮ CNN ವರದಿ ಮಾಡಿದೆ. ಬಿಲಿಯನೇರ್ ಮತ್ತು ಟೆಸ್ಲಾ ಮಾಲೀಕ ಎಲೋನ್ ಮಸ್ಕ್ 2022 ರಲ್ಲಿ ಅಧಿಕಾರ ವಹಿಸಿಕೊಂಡ ನಂತರ ಇದು ‘X’ ಪ್ಲಾಟ್ ಫಾರ್ಮ್ ನಿಮ್ದ ಅತಿದೊಡ್ಡ ಸಂಖ್ಯೆಯಲ್ಲಿ ಬಳಕೆದಾರರರು ನಿರ್ಗಮಿಸುತ್ತಿದ್ದರೆ ಎಂದು ಹೇಳಲಾಗುತ್ತಿದೆ.
X ಅನ್ನು ತೊರೆದವರು BlueSky ನಂತಹ ಪರ್ಯಾಯ ವೇದಿಕೆಗಳಿಗೆ ವಲಸೆ ಹೋಗುತ್ತಿದ್ದಾರೆ ಎಂದು CNN ವರದಿ ಮಾಡಿದೆ. ವರದಿಯ ಪ್ರಕಾರ, ಬ್ಲೂಸ್ಕೈ ಬಳಕೆದಾರರ ಸಂಖ್ಯೆ 90 ದಿನಗಳಲ್ಲಿ ದ್ವಿಗುಣಗೊಂಡಿದೆ ಮತ್ತು ಒಂದೇ ವಾರದಲ್ಲಿ ಒಂದು ಮಿಲಿಯನ್ ಹೊಸ ಸೈನ್-ಅಪ್‌ಗಳೊಂದಿಗೆ 15 ಮಿಲಿಯನ್ ತಲುಪಿದೆ.
ಯುಎಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಎಲನ್ ಮಸ್ಕ್ ಡೊನಾಲ್ಡ್ ಟ್ರಂಪ್ ಅವರನ್ನು ಬೆಂಬಲಿಸಿದ್ದು ಕಂಪನಿಯ ಪ್ರಮುಖ ವ್ಯಾಪಾರ ಕುಸಿತಕ್ಕೆ ಕಾರಣವಾಗಿದೆ ಎನ್ನಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj