ಟ್ರಂಪ್ ನಾಲಾಯಕ್, ಕೂಡಲೇ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ | ಅಮೆರಿಕ ಮಾಧ್ಯಮಗಳು

07/01/2021

ನ್ಯೂಯಾರ್ಕ್:  ಡೊನಾಲ್ಡ್ ಟ್ರಂಪ್ ಸಂಸತ್ ಕಟ್ಟಡದಲ್ಲಿ ಇರಲು ನಾಲಾಯಕ್ ಅವರನ್ನು ತಕ್ಷಣವೇ ಪದಚ್ಯುತಿಗೊಳಿಸಬೇಕು ಎಂದು ಅಮೆರಿಕ ಮಾಧ್ಯಮಗಳು ಪ್ರತಿಪಾದಿಸಿದ್ದು, ಟ್ರಂಪ್ ಬೆಂಬಲಿಗರು ಬುಧವಾರ ಸಂಸತ್ ಕಟ್ಟಡದ ಮೇಲೆ ದಾಳಿ ನಡೆಸಿ ಪೊಲೀಸರೊಂದಿಗೆ ಸಂಘರ್ಷಕ್ಕಿಳಿದಿರುವುದು ಸಂವಿಧಾನಿಕ ಪ್ರಕ್ರಿಯೆಗೆ ಅಡ್ಡಿಯನ್ನುಂಟು ಮಾಡಿದೆ ಎಂದು ಹೇಳಿದೆ.

ಅಮೆರಿಕ ಸಂಸತ್ ಕಟ್ಟಡ ಮೇಲಿನ ದಾಳಿಗೆ ಡೊನಾಲ್ಡ್ ಟ್ರಂಪ್ ಅವರ ಪ್ರಚೋದನಾಕಾರಿ ಹೇಳಿಕೆಗಳು ಕಾರಣವಾಗಿವೆ ಹೀಗಾಗಿ ಟ್ರಂಪ್ ಆ ಸ್ಥಾನದಲ್ಲಿರಲು ನಾಲಾಯಕ್ ಎಂದು ಹೇಳಿರುವ ಮಾಧ್ಯಮಗಳು ಹೇಳಿವೆ.

ಕ್ಯಾಪಿಟಲ್ ದಾಳಿಗೆ ಟ್ರಂಪ್ ಕಾರಣ ಎಂದು ದಿ ನ್ಯೂಯಾರ್ಕ್ ಟೈಮ್ಸ್ ಸಂಪಾದಕೀಯದಲ್ಲಿ ಟೈಟಲ್ ನೀಡಲಾಗಿದೆ. ವಾಷಿಂಗ್ಟನ್ ಪೋಸ್ಟ್ ನ ಸಂಪಾದಕೀಯದಲ್ಲಿ ಕೂಡ ಟ್ರಂಪ್ ನ ಕೃತ್ಯವನ್ನು ವಿರೋಧಿಸಲಾಗಿದೆ.  ಈ ಘಟನೆಯ ಹೊಣೆ ಹೊರಿಸಿ ಟ್ರಂಪ್ ನ್ನು ಕೂಡಲೇ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಬೇಕು ಎಂದು ಮಾಧ್ಯಮಗಳು ಪ್ರತಿಪಾದಿಸಿವೆ.

ಇತ್ತೀಚಿನ ಸುದ್ದಿ

Exit mobile version