ತುಳುನಾಡ ಅಂಬೇಡ್ಕರ್ ಪಿ.ಡೀಕಯ್ಯರವರ ಸ್ಮರಣಾರ್ಥ ಬೃಹತ್ ರಕ್ತದಾನ ಶಿಬಿರ
-
40ನೇ ಬಾರಿ ರಕ್ತದಾನ ಮಾಡಿದ ಹಾಗೂ ಅಂಗಾಂಗ ದಾನಕ್ಕೆ ಸಹಿ ಮಾಡಿರುವ ಸಾಮಾಜಿಕ ಚಿಂತಕ ಶೇಖರ್ ವಿ.ಜಿ.ಗೆ ಸನ್ಮಾನ
ಎಡಪದವು: ಭೀಮ್ ಸೇನೆ ದ.ಕ. ಮುತ್ತೂರು ಹಾಗೂ ಜಿಲ್ಲಾ ಆಸ್ಪತ್ರೆ ವೆನ್ಲಾಕ್ ಹಾಗೂ ರಕ್ತ ಪೂರಣ ಕೇಂದ್ರ ಮಂಗಳೂರು ಇದರ ಸಹಯೋಗದೊಂದಿಗೆ ಬಹುಜನ ಚಿಂತಕ, ಬಹುಜನ ಸಮಾಜದ ಪರಿವರ್ತಕ, ತುಳುನಾಡ ಅಂಬೇಡ್ಕರ್ ಪಿ.ಡೀಕಯ್ಯರವರ ಸ್ಮರಣಾರ್ಥ ಬೃಹತ್ ರಕ್ತದಾನ ಶಿಬಿರ ಹಾಗೂ ಸಮ ಸಮಾಜದ ಹರಿಕಾರ ಪಿ.ಡೀಕಯ್ಯರ ಒಂದು ನೆನಪು ಸಭಾ ಕಾರ್ಯಕ್ರಮ ಇತ್ತೀಚಿಗೆ ಮುತ್ತೂರು ಅಂಬೇಡ್ಕರ್ ಭವನದಲ್ಲಿ ನಡೆಯಿತು.
ಈ ಕಾರ್ಯ ಕ್ರಮದಲ್ಲಿ 40ನೇ ಬಾರಿ ರಕ್ತದಾನ ಮಾಡಿದ ಹಾಗೂ ರಕ್ತದಾನ ಜೊತೆಗೆ ಅಂಗಾಂಗ ದಾನಕ್ಕೆ ಸಹಿ ಮಾಡಿರುವ ಸಾಮಾಜಿಕ ಚಿಂತಕ, ಯುವಬರಹಗಾರ, ಚುಟುಕು ಕವಿ, ಹೋರಾಟಗಾರರು, ಆನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿದ ಧೀಮಂತ, ಸಮಾಜಸೇವಕ, ಭವಿಷ್ಯದ ಯುವ ನಾಯಕರಾದ ಶೇಖರ್ ವಿ. ಜಿ. ವೇಣೂರು ಅವರನ್ನು ಸನ್ಮಾನಿಸಲಾಯಿತು.
ಸಭಾ ಕಾರ್ಯಕ್ರಮವನ್ನು ಮುತ್ತೂರು ಗ್ರಾ.ಪಂ. ಅಧ್ಯಕ್ಷ ಸತೀಶ್ ಬಳ್ಳಾಜೆ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಭೀಮ್ ಸೇನೆ ದ.ಕ. ಇದರ ಸಂಚಾಲಕರಾದ ಜಗದೀಶ್ ಮುತ್ತೂರು ವಹಿಸಿದ್ದರು.
ಈ ಸಂದರ್ಭದಲ್ಲಿ ಕರಿಯಂಗಳ ಗ್ರಾ.ಪಂ. ಅಧ್ಯಕ್ಷ ಚಂದ್ರಹಾಸ ಪಲ್ಲಿಪಾಡಿ, PWD ಗುತ್ತಿಗೆದಾರ ಮೊಹಮ್ಮದ್ ಶಾಫಿ, ವಿದ್ಯಾರ್ಥಿ ಸೋಷಿಯಲ್ ಎಜುಕೇಶನ್ ಸೊಸೈಟಿ ದ.ಕ. ಸ್ಥಾಪಕ ನಿರ್ದೇಶಕ ಶ್ರೀನಿವಾಸ್ ಮಿಜಾರು, ಸಾಮಾಜಿಕ ಕಾರ್ಯಕರ್ತ ಮುನೀರ್ ನಡುಪಲ್ಲ, ಮೊಹಮ್ಮದ್ ಶಾಲಿ ಅಧ್ಯಕ್ಷರು GHM ಫೌಂಡೇಶನ್ ಮೂಲರಪಟ್ನ, ವನಿತಾ ಗೋಪಾಲ್ ಗ್ರಾ.ಪಂ. ಸದಸ್ಯೆ ಮುತ್ತೂರು, ಥೋಮಸ್ ಹೆರಾಲ್ಡ್ ರೊಜಾರಿಯೋ ಗ್ರಾ.ಪಂ. ಸದಸ್ಯ ಮುತ್ತೂರು, ಗೋಪಾಲ್ ಮುತ್ತೂರು ಗೌರವಾಧ್ಯಕ್ಷರು ಸತ್ಯಸಾರಮಾನಿ ಸೇವಾ ಸಮಿತಿ ಮುತ್ತೂರು, ಮತ್ತು ಕುಮಾರಿ ಶಾರದಾ ಅಧ್ಯಕ್ಷೆ ಮಾತೆ ಸಾವಿತ್ರಿ ಭಾಯಿಪುಲೆ ಮಹಿಳಾ ಮಂಡಳಿ ಮುತ್ತೂರು ಉಪಸ್ಥಿತರಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka