ಕಾನದ-ಕಟದರ ಜನನ: ತುಳುನಾಡಿನ ಅವಳಿ ವೀರರು-ಕಾನದ ಕಟದರು | ಸಂಚಿಕೆ: 10
- ಸತೀಶ್ ಕಕ್ಕೆಪದವು
ಬಯಕೆ/ಸೀಮಂತ ಮುಗಿಸಿ ಈಂದೊಟ್ಟುವಿನಿಂದ ಕಿಜನೊಟ್ಟು ಬರ್ಕೆ ಸೇರಿದ ಗರ್ಭಿಣಿ ಬೊಲ್ಲೆಯು ತವರೂರ ಸೊಬಗನ್ನು ಸವಿಯುತ್ತ, ಕರಿಯಲ ತಾರ ಜುಳು ಜುಳು ನೀರ ನಿನಾದವನ್ನು ಆಲಿಸುತ್ತ, ಜಾತಿ ಪರಜಾತಿಯವರನ್ನು ಕೂಗಿ ಮಾತನಾಡಿಸುತ್ತ ಬರ್ಕೆಯ ಬಾಮಕ್ಕೆ ಕೆಲವೊಂದು ಬಾರಿ ಹೋಗಿ ಬಂದು, ಉಲ್ಲಾಯ, ಉಲ್ಲಾಲ್ದಿಯೊಂದಿಗೆ ಸಲುಗೆಯಿಂದ ಕ್ಷೇಮ ಸಮಾಚಾರ ಹಂಚಿಕೊಂಡು ಮಾನಸಿಕವಾಗಿಯೂ ದೈಹಿಕವಾಗಿಯೂ ಆರೋಗ್ಯಯುತಳಾಗಿ ಓಡಾಡಿಕೊಂಡು ಕೆಲವು ದಿನಗಳನ್ನು ದೂಡುತ್ತಾಳೆ. ಈ ನಡುವೆ ಪಾಂಬಲಜ್ಜಿಗ ಪೂಂಬಲಕರಿಯರ ನೇತೃತ್ವದಲ್ಲಿ “ತವರೂರ ತಮ್ಮನ” ಮುಗಿಸಿಕೊಂಡು ಮತ್ತೆ ಗಂಡನ ಊರು ಬಂಗಾಡಿಯನ್ನು ಸೇರುತ್ತಾಳೆ. ಹೆರಿಗೆಯ ಸಮಯವು ಹತ್ತಿರವಾಗುತ್ತಿದ್ದಂತೆ ನೆರೆಹೊರೆಯ ಸರ್ವ ಸಮಾಜದವರೂ ಬಹಳಷ್ಟು ಅಕ್ಕರೆಯಿಂದ ಅತಿಯಾದ ಜಾಗರೂಕತೆಯಿಂದ ಬೊಲ್ಲೆಯನ್ನು ಕಾಣುತ್ತಿದ್ದರೆಂಬುದು ಆಕೆಯ ಸಜ್ಜನಿಕೆ, ಸೌಜನ್ಯತೆಗೆ ಹಿಡಿದ ಕೈಗನ್ನಡಿಯಾಗಿದೆ.
ಅಂದು ಹುಣ್ಣಿಮೆಯ ದಿನ. ತುಂಬು ಗರ್ಭಿಣಿ ಬೊಲ್ಲೆಗೆ ಪ್ರಸವವೇದನೆಯ ಹೊತ್ತು. ಹಿರಿಯ ಮಹಿಳೆಯರು ಕತ್ತಿ ಮುಟ್ಟಲೆ ಮೂಲೆಗೆ ಬಿಸಾಕಿ ಆಕೆಯತ್ತ ಓಡಿ ಬರುತ್ತಾರೆ. ಈ ಸುದ್ದಿಯನ್ನು ತಿಳಿದ ಬಂಗಾಡಿಯ ಬಲ್ಲಾಳರು ಹೆರಿಗೆ ಪ್ರವೀಣೆ ( ಪೆದುಪವುನಾಲ್)
ಓರ್ವಳನ್ನು ಬರಮಾಡಿಸಿ ಬಾಕಿಮಾರಿನ ಬದಿಯಲ್ಲಿನ ಭತ್ತ ಒಣಗಿಸುವ “ಕಾನ”ದ ಗುಡಿಸಲನ್ನು ಬಿಟ್ಟು ಕೊಟ್ಟು ಸಕಲ ಅವಶ್ಯಕಗಳನ್ನು ಪೂರೈಸಲು ಸೂಚಿಸುತ್ತಾರೆ.
ಅನುಭವಿ ಹಿರಿಯವ್ವನ ಮಾರ್ಗದರ್ಶನದಲ್ಲಿ ಹೆರಿಗೆಗೆ
ಅನುಕೂಲಕರ ಪರಿಸರದ ನಿರ್ಮಾಣವು ತ್ವರಿತವಾಗಿ ನಡೆಯುತ್ತದೆ.
ಈ ಸುದ್ದಿಯು ಹಿರಿಯರಾದ ಪಾಂಬಲಜ್ಜಿಗ ಪೂಂಬಲಕರಿಯರಿಗೂ ತಲುಪುತ್ತದೆ. ಹಾರೆ ಪಿಕ್ಕಾಸು ಹಿಡಿದು ಗದ್ದೆಯ ಕೆಳಭಾಗದಲ್ಲಿ ಸುರಂಗ ಮಾರ್ಗದ ಮೂಲಕ ಹರಿದು ಬರುವ ಕರಿಯಲ ತಾರ ನೀರು ಪನೆಗುಂಡಿಯಲ್ಲಿ ತುಂಬಲು ಯೋಜನಾಬದ್ಧ ಕೆಲಸದಲ್ಲಿ ತೊಡಗಿದ್ದ ಅವರು ಒಮ್ಮೆಗೆ ಎಲ್ಲವನ್ನೂ ಅಲ್ಲಿಯೆ ಬಿಟ್ಟು ಓಡೋಡಿ ಬಿಡಾರದಾಚೆ ಬರುತ್ತಾರೆ. ಕೈಕಾಲು ಮುಖ ತೊಳೆದು ದೋತ್ರವೊಂದನ್ನು ತಲೆಗೆ ಮುಂಡಾಸು ಸುತ್ತಿಕೊಂಡು ಬಿಂದಿಗೆ ನೀರು ಇಟ್ಟು ಚಿಲ್ಲರೆ ಈಡು ಕಟ್ಟಿಡಲು ಬಯಸುತ್ತಾರೆ.”ಸ್ವಾಮಿ ಕೆಂಪ್ಲಜೆದ ಬೆಮ್ಮೆರೆ, ಎಂಕ್ಲೆ ಸಂತಾನೊದ ಕೊಡಿ, ಬಾಲೆ ಬೊಲ್ಲೆನ್ ಎಲ್ಯೆರ್ದ್ ಮಲ್ಲೆ ಮುಟ್ಟ ಸರ್ವೆಸನ ಮಲ್ತ, ಒರ್ಯನ ಸೆರಂಗ್ ಪಾಡ್ದ್ ಕೊರ್ಯ, ಇನಿ ಬಂಜಿನಾಲ್ ಪೆದುಕಾಲ ಸುಡುಬೇನೆದ ಪೊರ್ತು, ಎಂಕ್ಲೆನ ಬಾಲೆ ಕುಂದುದಾಂತೆ ಕುಂದಡಿಯಲ್ಂದಾಂಡ (ಹೆರಿಗೆಯಾದಲ್ಲಿ) ಬಂಗಾರ್ ಬಾಲೆ ಬೊಲ್ಲಿ ತೊಟ್ಟಿಲ್ ಬೆಮ್ಮೆರೆಗ್ ಒಪ್ಪಿಪುಬ, ಅಂಚನೆ ಎಂಕ್ಲೆ ಪೆರಿಯಕುಲು ನಂಬೊಂದು ಬತ್ತಿನ ಕುಟುಮೊದ ಸತ್ಯೊಲು ಕಲ್ಲುಟಿ-ಪಂಜುರ್ಲಿಗ್ ತೊಡಮೀನ್ ನೀರ ತೆಲ್ಲವು ಅಡದ್ ಬಲಸುವ, ಸ್ವಾಮಿ ಸತ್ಯೊಲೆ” ಎಂಬುದಾಗಿ ಎಲ್ಲಾ ಆರಬಾರ ಸತ್ಯ ದೈವಗಳ ಮೇಲಿಟ್ಟು ಭಯತುಂಬಿದ ಗಲಿಬಿಲಿಯಲ್ಲಿ ಬಂಗಾಡಿಯತ್ತ ನಡೆಯುತ್ತಾರೆ. ಪಾಂಬಲಜ್ಜಿಗ ಪೂಂಬಲಕರಿಯರು ತರಾತುರಿಯಲ್ಲಿ ಬಂಗಾಡಿಯತ್ತ ಪ್ರಯಾಣ ಬೆಳೆಸಿದ ಸುದ್ದಿಯನ್ನು ಆಲಿಸಿದ ಬೈದೆದಿ ದೇಯಿಯು ತನ್ನ ಮೂಲದ ಮಗಳು ಬೊಲ್ಲೆಗೆ ಪ್ರಸವ ವೇದನೆಯ ಸಂದರ್ಭದಲ್ಲಿ ಯಾವುದೇ ಕಷ್ಟ ಕಾರ್ಪಣ್ಯಗಳು ಎದುರಾಗದಿರಲಿ ಎಂಬುದಾಗಿ ಬಯಸಿ ಓಡೋಡಿ ಜಲಕ (ತರೆಕ್ ಮೈಕ್ ಮೀದ್) ಪೂರೈಸಿ ” ಸ್ವಾಮಿ ಮೂಲೊದ ಪಂಜುರ್ಲಿ ರಡ್ಡ್ ಕಾರ್ಡ್ ಪೋಯಿನ ಬೊಲ್ಲೆ, ಇನಿ ನಾಲ್ ಕಾರ್ಡ್ ಬದಿಕ್ಯಲ್, ಇನಿ ಪೊರ್ತ್ಯೊಲುದ ಪೆದುಬೇನೆದ ಆಪೊತ್ತುಡುಲ್ಲೊಲು, ಧರ್ಮೊನು ಕಾಪುನ ಧರ್ಮ ದೈವ ಇಯ್ ಅಂದ್ಂದಾಂಡ, ಪಂಡಿ ನಾಲಯಿ ದೊಂಡೆಡಾಯಿ ಸಾತ್ ಗ್ ಪೊರ್ಲುಡು ಪೆದ್ದ್ ಲಕ್ಕ್ಯಲ್ಂಡ ದುಂಬುದ ದಿನಮಾನೊಡು ಗುರ್ಜಿಗೂಟುಡು ನೇಮ ಕೊರ್ಪಬೆ” ದುಃಖ ಭರಿತಳಾಗಿ ಹರಕೆ ಹೇಳುತ್ತಾಳೆ.
ಇತ್ತ ಬಂಗಾಡಿಯಲ್ಲಿ “ಪೆದ್ಮೆದಿ ಬೇನೆ ಪದುನಾಲೆಗತ್ತಂದೆ, ಪೆದುಪವುನಾಲೆಗತ್ತ್” ಎಂಬುದನ್ನು ಸರಿಯಾಗಿ ಮನವರಿಕೆ ಮಾಡಿಕೊಂಡ ಹಿರಿಯವ್ವ ಹಿರಿಯ ಮಹಿಳೆಯರ ಸಹಕಾರದೊಂದಿಗೆ ಬೊಲ್ಲೆಯ ಪ್ರಸವ ವೇದನೆಗೆ ಧೈರ್ಯ ಸ್ಥೈರ್ಯಗಳನ್ನು ತುಂಬುತ್ತ ಜವಾಬ್ದಾರಿಯುತ ವಾಗಿ ಹೆರಿಗೆಯನ್ನು ಮಾಡಿಸುತ್ತಾಳೆ. ಅವಳಿ ಕಂದಮ್ಮಗಳ ಅಳುವಿನ ದನಿಯು ನೆರೆದಿರುವವರ ಮೊಗವನ್ನು ಅರಳಿಸಿತು. ಮರ ಗಿಡಗಳು ತಂಗಾಳಿ ಬೀಸಿದುವು. ಪ್ರಾಣಿ ಪಕ್ಷಿಗಳು ಅತ್ತಿಂದಿತ್ತ ಇತ್ತಿಂದತ್ತ ಓಡಾಡಿ ನಲಿದಾಡಿದುವು. ಜನಮಾನಸದಲ್ಲಿ ಹರ್ಷದ ಚಿಲುಮೆ ಅರಳಿತು, ಸ್ಪರ್ಶದ ಸೆಲೆ ಚಿಗುರಿತು. ( ಮುಂದಿನ ಸಂಚಿಕೆಯಲ್ಲಿ: ಕಾನದ ಕಟದರ ಬಾಲ್ಯ)
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ತುಳುನಾಡಿನ ಅಪ್ರತಿಮ ಅವಳಿ ವೀರರು ಕಾನದ-ಕಟದರು | ಸಂಚಿಕೆ-01
ಸಮಾಜ ಪರಿವರ್ತನಾ ಚಳುವಳಿಯಲ್ಲಿ ಕಾನದ– ಕಟದರ ಹೆಜ್ಜೆ ಗುರುತು:
ಬೊಲ್ಲೆಯ ಜನ್ಮ ವೃತ್ತಾಂತ: ತುಳುನಾಡಿನ ಅವಳಿ ವೀರರು ಕಾನದ-ಕಟದರು | ಸಂಚಿಕೆ: 03
ಬೊಲ್ಲೆಯ ನಾಮಕರಣ: ತುಳುನಾಡಿನ ಅವಳಿ ವೀರರು ಕಾನದ-ಕಟದರು | ಸಂಚಿಕೆ: 04
ಸ್ವಾಭಾವಿಕ ಸ್ವಭಾವ ಬೆಳೆಸಿಕೊಂಡ ಸತ್ಯದಪ್ಪೆ ಬೊಲ್ಲೆ: ತುಳುನಾಡಿನ ಅವಳಿ ವೀರರು ಕಾನದ-ಕಟದರು | ಸಂಚಿಕೆ: 05
ಸತ್ಯದಪ್ಪೆ ಬೊಲ್ಲೆಯ ನೀರ ಮದುವೆ: ತುಳುನಾಡಿನ ಅವಳಿ ವೀರರು ಕಾನದ-ಕಟದರು | ಸಂಚಿಕೆ: 06
ಕಪ್ಪದ ಮಾನಿ ಹಂದ್ರನ ಬೇಟಿ/ ಪೊದು ಸಂಬಂಧ/ಮದುವೆ: ತುಳುನಾಡಿನ ಅವಳಿ ವೀರರು ಕಾನದ-ಕಟದರು: ಸಂಚಿಕೆ: 07
ನವದಂಪತಿಗಳಿಂದ ಬಂಗಾಡಿ ಬೀಡಿಗೆ ವೀಳ್ಯದೆಲೆ ಸಮರ್ಪಣೆ: ತುಳುನಾಡಿನ ಅವಳಿ ವೀರರು ಕಾನದ—ಕಟದರು | ಸಂಚಿಕೆ: 08
ಸತ್ಯದಪ್ಪೆ ಬೊಲ್ಲೆಯ ಬಯಕೆ/ ಸೀಮಂತ ಕಾರ್ಯಕ್ರಮ: ತುಳುನಾಡಿನ ಅವಳಿ ವೀರರು ಕಾನದ-ಕಟದರು | ಸಂಚಿಕೆ: 09