ತುಂಡುಡುಗೆಯಲ್ಲಿ ಫೋಟೋಗೆ ಪೋಸ್ ನೀಡಿದ ‘ಅನು’ ಮೇಘಾ ಶೆಟ್ಟಿ
05/03/2021
ಸಿನಿಡೆಸ್ಕ್: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ‘ಅನು’ ಪಾತ್ರದಲ್ಲಿ ಮಿಂಚುತ್ತಿರುವ ಮೇಘಾ ಶೆಟ್ಟಿ ಇದೀಗ ತಮ್ಮ ತುಂಡುಡುಗೆಯ ಫೋಟೋಗಳಿಗಾಗಿ ಸುದ್ದಿಯಾಗಿದ್ದಾರೆ.
ಕಿರುತೆರೆಗೆ ಬಂದ ಬಳಿಕ ಸಿನಿಮಾಗಳಲ್ಲಿಯೂ ಮೇಘಾ ಶೆಟ್ಟಿ ಅವಕಾಶ ಪಡೆದುಕೊಂಡಿದ್ದಾರೆ. ಕನ್ನಡದ ಮ್ಯೂಸಿಕ್ ವಿಡಿಯೋ ಹಾಡಿನಲ್ಲಿಯೂ ಅವರು ಹೆಜ್ಜೆ ಹಾಕಿದ್ದು, ಅವರು ತಮ್ಮ ಇನ್ಟಾಗ್ರಾಮ್ ನಲ್ಲಿ ತಮ್ಮ ಹಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಕಿರುತೆರೆಯ ಜನಪ್ರಿಯ ನಟಿಯಾಗಿರುವ ಮೇಘಾ ಶೆಟ್ಟಿ ಅವರಿಗೆ ಜೊತೆ ಜೊತೆಯಲಿ ಧಾರಾವಾಹಿ ಭಾರೀ ಪ್ರಚಾರವನ್ನು ನೀಡಿದೆ. ಈ ನಟಿಗೆ ಕರ್ನಾಟಕದಾದ್ಯಂತ ಬಹಳಷ್ಟು ಸಂಖ್ಯೆಯ ಅಭಿಮಾನಿಗಳೂ ಇದ್ದಾರೆ.