ಸಂಚು ಆರೋಪ: ತುನಿಶಿಯಾದ ವಿರೋಧ ಪಕ್ಷದ ನಾಯಕನಿಗೆ 22 ವರ್ಷಗಳ ಶಿಕ್ಷೆ - Mahanayaka
8:28 PM Saturday 8 - February 2025

ಸಂಚು ಆರೋಪ: ತುನಿಶಿಯಾದ ವಿರೋಧ ಪಕ್ಷದ ನಾಯಕನಿಗೆ 22 ವರ್ಷಗಳ ಶಿಕ್ಷೆ

08/02/2025

ತುನಿಶಿಯಾದ ವಿರೋಧ ಪಕ್ಷದ ನಾಯಕ ರಾಶಿದುಲ್ ಗನೂಷಿ ಅವರಿಗೆ ನ್ಯಾಯಾಲಯ 22 ವರ್ಷಗಳ ಶಿಕ್ಷೆ ವಿಧಿಸಿದೆ. 2023 ಎಪ್ರಿಲ್ ನಿಂದ ಅವರು ಜೈಲಲ್ಲಿದ್ದಾರೆ. ದೇಶದ ಸುರಕ್ಷತೆಯನ್ನು ಬುಡಮೇಲುಗೊಳಿಸುವ ಸಂಚು ನಡೆಸಿದ್ದಾರೆ ಎಂಬುದೂ ಸೇರಿದಂತೆ ಹಲವು ಆರೋಪಗಳನ್ನು ಅವರ ಮೇಲೆ ಹೋರಿಸಲಾಗಿದೆ.

ಭಯೋತ್ಪಾದನೆ, ಕಾನೂನುಬಾಹಿರವಾಗಿ ವಿದೇಶಿ ಫಂಡನ್ನು ಪಡೆದಿರುವುದು ಮುಂತಾದ ಪ್ರಕರಣಗಳ ಮೇಲೆ ಇದೀಗ ಅವರಿಗೆ ಶಿಕ್ಷೆ ವಿಧಿಸಲಾಗಿದೆ. ತುನಿಷ್ಯಾದಲ್ಲಿ ಇದೇ ಮೊದಲ ಬಾರಿ ವಿರೋಧ ಪಕ್ಷದ ನಾಯಕನಿಗೆ ಇಷ್ಟು ಕಠಿಣ ಶಿಕ್ಷೆಯನ್ನ ವಿಧಿಸಲಾಗಿದೆ. ಗನುಷಿಯರ ಜೊತೆಗೆ ಅವರ ಕುಟುಂಬಕರಿಗೂ ಮಾಜಿ ಪ್ರಧಾನಿಗೂ ಅನ್ನಹ್ದ ಪಕ್ಷದ ಮುಖಂಡರಿಗೂ ಮತ್ತು ಪತ್ರಕರ್ತರಿಗೂ ಶಿಕ್ಷೆ ವಿಧಿಸಲಾಗಿದೆ.

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ