ಟಿವಿ ಮೈಮೇಲೆ ಬಿದ್ದು 2 ವರ್ಷದ ಮಗು ಸಾವು - Mahanayaka
12:00 PM Wednesday 9 - September 2026

ಟಿವಿ ಮೈಮೇಲೆ ಬಿದ್ದು 2 ವರ್ಷದ ಮಗು ಸಾವು

04/02/2021

ಕಾಸರಗೋಡು: ಟಿವಿ ಮೈಮೇಲೆ ಬಿದ್ದ ಪರಿಣಾಮ ಎರಡು ವರ್ಷದ ಮಗು ಸಾವನ್ನಪ್ಪಿರುವ ದಾರುಣ ಘಟನೆ ಬೋವಿಕ್ಕಾನದಲ್ಲಿ ಬುಧವಾರ ನಡೆದಿದೆ.

ತೆಕ್ಕಿಲ್ ಉಕ್ರಂಪಾಡಿಯ ನಿಸಾರ್-ಫಾಯಿಝ ದಂಪತಿಯ ಏಕೈಕ ಪುತ್ರ  ಶಾಕಿರ್(2) ಮೃತಪಟ್ಟ ಮಗುವಾಗಿದೆ. ಬುಧವಾರ ಮಧ್ಯಾಹ್ನ ಬೋವಿಕ್ಕಾನದ ಅಜ್ಜಿ ಮನೆಯಲ್ಲಿ ಈ ಘಟನೆ ನಡೆದಿದೆ.

ಆಟವಾಡುತ್ತಿದ್ದ ಮಗು ಟಿವಿಯ ಕೇಬಲ್ ವಯರ್ ಎಳೆದಿದ್ದು, ಈ ಸಂದರ್ಭದಲ್ಲಿ ಸ್ಟ್ಯಾಂಡ್ ಸಹಿತ ಟಿವಿ ಮಗುವಿನ ಮೇಲೆ ಬಿದ್ದಿದೆ.  ಪರಿಣಾಮವಾಗಿ ಮಗು ಗಂಭೀರವಾಗಿ ಗಾಯಗೊಂಡಿದೆ.

ತಕ್ಷಣವೇ ಮಗುವನ್ನು ಕಾಸರಗೋಡು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆದರೆ ಅಷ್ಟರಲ್ಲೇ ಮಗು ಸಾವನ್ನಪ್ಪಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

mobil chat sitesi Ucuz Uçak Bileti