ಟಿವಿ ನೋಡಬೇಡ ಎಂದಿದ್ದಕ್ಕೆ ಆತ್ಮಹತ್ಯೆಗೆ ಶರಣಾದ ಯುವಕ
ಬೆಂಗಳೂರು: ಟಿವಿ ನೋಡಬೇಡ ಎಂದು ಪೋಷಕರು ಹೇಳಿದ್ದಕ್ಕೆ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದ್ದು, ನಿನ್ನೆ ರಾತ್ರಿ 10 ಗಂಟೆಯ ವೇಳೆಗೆ ಈ ಘಟನೆ ನಡೆದಿದೆ ಎನ್ನಲಾಗಿದೆ.
23 ವರ್ಷ ವಯಸ್ಸಿನ ಸೈಯದ್ ಸಾಹಿಲ್ ಆತ್ಮಹತ್ಯೆಗೆ ಶರಣಾಗಿರುವ ಯುವಕನಾಗಿದ್ದು, ಬೆಂಗಳೂರಿನ ಜೆ.ಜೆ.ನಗರದಲ್ಲಿ ಈ ಘಟನೆ ನಡೆದಿದೆ. ತಂದೆ ಟಿವಿ ನೋಡಬೇಡ ಎಂದಿದ್ದಕ್ಕೆ 23 ವರ್ಷದ ಯುವಕ ಮನೆಯಲ್ಲಿ ಜಗಳವಾಡಿದ್ದ ಎನ್ನಲಾಗಿದೆ.
ಸಾದಿಲ್ ಯಾವಾಗಲೂ ಮನೆಯಲ್ಲೇ ಇರುತ್ತಿದ್ದ ಎನ್ನಲಾಗಿದ್ದು, ತಂದೆ ಕೆಲಸದಿಂದ ತಂದೆ ಮನೆಗೆ ಬಂದಾಗ ಆತ ಟಿವಿ ನೋಡುತ್ತಿದ್ದ ಎನ್ನಲಾಗಿದೆ. ಇದರಿಂದ ಕೋಪಗೊಂಡ ತಂದೆ, ಯಾವಾಗ ನೋಡಿದರೂ ಟಿವಿ ನೋಡುತ್ತಾ ಇರುತ್ತಿ, ಕೆಲಸಕ್ಕೆ ಹೋಗುವುದಿಲ್ವಾ ಎಂದು ಬೈದಿದ್ದಾರೆನ್ನಲಾಗಿದೆ.
ತಂದೆಯ ಮಾತು ಕೇಳಿ ಆಕ್ರೋಶಗೊಂಡ ಸಾಹಿಲ್ ಟಿವಿ ರಿಮೋಟ್ ಎಸೆದು ಅಡುಗೆ ಮನೆಗೆ ತೆರಳಿ ಚಾಕುವಿನಿಂದ ತನ್ನನ್ನು ತಾನೇ ಇರಿದುಕೊಂಡಿದ್ದಾನೆ ಎನ್ನಲಾಗಿದೆ. ತಕ್ಷಣವೇ ಆತನನ್ನು ಪೋಷಕರು ಆಸ್ಪತ್ರೆಗೆ ಕರೆದೊಯ್ದರೂ ಆತ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ನಾನು ಕುಡಿಯುತ್ತೇನೋ, ಬಿಡುತ್ತೇನೋ ಅದೆಲ್ಲಾ ಬೇಡ: ಡಿ.ಕೆ.ಶಿವಕುಮಾರ್
ಆಟೋ ಚಾಲಕನ ತಲೆಗೆ ಕಲ್ಲು ಎತ್ತಿ ಹಾಕಿ ಬರ್ಬರ ಹತ್ಯೆ
ಮೇಕೆದಾಟು ಪಾದಯಾತ್ರೆ ಅರ್ಧದಲ್ಲೇ ಬಿಟ್ಟು ತೆರಳಿದ ಸಿದ್ದರಾಮಯ್ಯ: ಕಾರಣ ಏನು ಗೊತ್ತಾ?