ಜಿಂಕೆಯನ್ನು ಭೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಇಬ್ಬರು ಅರೆಸ್ಟ್!
ಹನೂರು: ಅರಣ್ಯದಲ್ಲಿ ಜಿಂಕೆಯನ್ನು ಭೇಟೆಯಾಡಿ ಮಾಂಸವನ್ನು ಸಾಗಾಣೆ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಬಂಧಿಸುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ತಾಲ್ಲೂಕಿನ ರಾಮಾಪುರ ಗ್ರಾಮದ ಕೃಷ್ಣಮೂರ್ತಿ ಅಲಿಯಾಸ್ ಮುತ್ತು ಹಾಗೂ ನ್ಯಾಯಾಲಯದ ಸಂಘರ್ಷಕ್ಕೆ ಒಳಗಾದದ ಬಾಲಕ ಅಜಿತ್ ಕುಮಾರ್ ಬಂಧಿತರು,
ಘಟನೆ ವಿವರ : ಕೌದಳ್ಳಿ ವಲಯ ಅರಣ್ಯಾಧಿಕಾರಿ ಸುಂದರ್, ರಾಮಾಪುರ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಮಧುಕುಮಾರ್, ಗಸ್ತು ಅರಣ್ಯ ಪಾಲಕರಾದ ಬಿಲ್ಲಪ್ಪ, ಗಣೇಶ್‌ಪ್ರಸಾದ್, ಬೀರಪ್ಪ ಹಳ್ಳಿ ಹಾಗೂ ಕಳ್ಳಬೇಟೆ ಶಿಬಿರದ ಸಿಬ್ಬಂದಿಗಳ ತಂಡ ರಾಮಾಪುರ ವನ್ಯಜೀವಿ ವಲಯ, ಕೌದಳ್ಳಿ ವಲಯದ ರಾಮಾಪುರ ಶಾಖೆಯ ಮುತ್ತಶೆಟ್ಟಿಯೂರು ಗಸ್ತಿನ ವ್ಯಾಪ್ತಿಗೆ ಬರುವ ರಾಮಾಪುರ ಗ್ರಾಮದ ಸರ್ವೆ ನಂಬರ್ ೧೦೫/೧ ಮತ್ತು ೧೦೫/೨ ರ ಜಮೀನಿನಲ್ಲಿ ಕಾಡುಪ್ರಾಣಿಯಾದ ಜಿಂಕೆಯನ್ನು ಭೇಟೆಯಾಡಿ ಮಾಂಸವನ್ನು ಸಾಗಾಣೆಕೆ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ವ್ಯಕ್ತಿಗಳಿಬ್ಬರನ್ನು ವಶಕ್ಕೆ ಪಡೆದು ಜಿಂಕೆಯ ಮಾಂಸ, ಉರುಳುಗಳು ಹಾಗೂ ಕೃತ್ಯಕ್ಕೆ ಬಳಸಿದ ಒಂದು ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದು ಮುಂದಿನ ಕ್ರಮಕೈಗೊಂಡಿದ್ದಾರೆ.
ಜಿಂಕೆ ಮಾಂಸವನ್ನು ಸಾಗಾಟ ಮಾಡುತ್ತಿದ್ದ ಮತ್ತೊರ್ವ ಪ್ರಮುಖ ಆರೋಪಿ ಗೆಜ್ಜಲನಾತ್ತ ಗ್ರಾಮದ ಆರ್ಮುಗಂ ಪರಾರಿಯಾಗಿದ್ದು ಬಂಧನಕ್ಕೆ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಬಲೆ ಬೀಸಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 7483551849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw