ಪ್ರವಾದಿ ಕುರಿತು ಅಪಮಾನಕಾರಿ ಹೇಳಿಕೆ: ಬಜರಂಗದಳದ ಇಬ್ಬರು ನಾಯಕರ ವಿರುದ್ಧ ಕೇಸ್ - Mahanayaka
4:03 AM Wednesday 11 - December 2024

ಪ್ರವಾದಿ ಕುರಿತು ಅಪಮಾನಕಾರಿ ಹೇಳಿಕೆ: ಬಜರಂಗದಳದ ಇಬ್ಬರು ನಾಯಕರ ವಿರುದ್ಧ ಕೇಸ್

17/10/2024

ಸಾರ್ವಜನಿಕ ಸಭೆಯಲ್ಲಿ ಪ್ರವಾದಿ ಮುಹಮ್ಮದರನ್ನು ಅವಮಾನಿಸುವ ರೀತಿಯಲ್ಲಿ ಹೇಳಿಕೆ ನೀಡಿದ ಬಜರಂಗದಳದ ಇಬ್ಬರು ನಾಯಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಉತ್ತರ ಪ್ರದೇಶದ ಪಿಲಿ ಬಿತ್ ನಲ್ಲಿ ಈ ಘಟನೆ ನಡೆದಿದ್ದು ಸಂಜಯ್ ಮಿಶ್ರ ಮತ್ತು ವಿವೇಕ್ ಮಿಶ್ರ ಎಂಬವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಅಕ್ಟೋಬರ್ 13ರಂದು ಮಧೋಟಂಗ್ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಅಪ್ಸಲ್ ಖಾನ್ ಎಂಬವರು ಈ ಕುರಿತಂತೆ ದೂರು ನೀಡಿದ್ದಾರೆ.

ಬಜರಂಗದಳದ ನಾಯಕರು ಆಡಿದ ಭಾಷಣದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲಾಗಿತ್ತು. ಈ ಪ್ರಚೋದನಕಾರಿ ಭಾಷಣದ ವಿರುದ್ಧ ಮುಸ್ಲಿಮರು ಪ್ರತಿಭಟನೆ ನಡೆಸಿದ್ದರು. ತಕ್ಷಣ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಪ್ರತಿಭಟನಾಕಾರರಿಗೆ ಭರವಸೆ ನೀಡಿದ್ದರು.

ಇದಕ್ಕಿಂತ ಮೊದಲು ಸೆಪ್ಟೆಂಬರ್ 29 ರಂದು ಯತಿ ನರಸಿಂಗಾನಂದ ಅವರು ಪ್ರವಾದಿ ಮುಹಮ್ಮದರನ್ನು ಅವಹೇಳನಕಾರಿಯಾಗಿ ಉಲ್ಲೇಖಿಸಿರುವ ಬಗ್ಗೆ ಪ್ರಕರಣ ದಾಖಲಾಗಿತ್ತು.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ