ರೈಲಿನಿಂದ ಬಿದ್ದು ಇಬ್ಬರು ಬಾಲಕರ ದುರಂತ ಅಂತ್ಯ!
ತ್ರಿಶೂರ್: 17 ವರ್ಷದ ಇಬ್ಬರು ಬಾಲಕರು ರೈಲಿನಿಂದ ಇಳಿಯುವಾಗ ಬಿದ್ದು ಮೃತಪಟ್ಟ ಘಟನೆ ಕೊರಟ್ಟಿ ರೈಲು ನಿಲ್ದಾಣದಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ
ಎರ್ನಾಕುಲಂನಿಂದ ತ್ರಿಶೂರ್ ಗೆ ಬರುತ್ತಿದ್ದ ರೈಲೊಂದರಲ್ಲಿ ಬಾಲಕರು ಪ್ರಯಾಣಿಸುತ್ತಿದ್ದರು. ರೈಲಿನಿಂದ ಇಳಿಯುವ ವೇಳೆ ಬಿದ್ದಿರಬಹುದು ಎಂದು ಹೇಳಲಾಗಿದೆ.
ಬೇರೊಂದು ರೈಲಿನ ಚಾಲಕ ಹಳಿಗಳ ಮೇಲೆ ಮೃತದೇಹಗಳು ಬಿದ್ದಿರುವುದನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಾಲಕರು ಮಾದಕ ದ್ರವ್ಯ ಸೇವನೆಯ ಚಟಹೊಂದಿದ್ದರು ಎನ್ನಲಾಗಿದೆ.
ಇನ್ನೂ ಇವರಿಬ್ಬರು ಯಾವ ರೈಲಿನಿಂದ ಬಿದ್ದು ಮೃತಪಟ್ಟಿದ್ದಾರೆ ಅನ್ನೋ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ರೈಲು ಚಲಿಸುತ್ತಿದ್ದ ವೇಳೆ ಇಳಿಯುವ ಸಾಹಸ ಮಾಡಿದರೇ ಅನ್ನೋ ಅನುಮಾನಗಳು ಕೇಳಿ ಬಂದಿವೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka