ಬಜ್ಪೆ: ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಎರಡು ದಿನಗಳ ತರಬೇತಿ ಶಿಬಿರ
ಕರ್ನಾಟಕ ದಲಿತ ಸಂಘರ್ಷ ಸಮಿತಿ ( ರಿ.) ಸ್ವಾಭಿಮಾನಿ ಪ್ರೊ. ಬಿ. ಕೃಷ್ಣಪ್ಪ — ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ 2024 ರ ಜುಲೈ 21 ಹಾಗೂ 22 ತಾರೀಖಿನಂದು ಜಿಲ್ಲಾ ದಲಿತ ಕಲಾ ಮಂಡಳಿಯ ಎರಡು ದಿನಗಳ “ತರಬೇತಿ ಶಿಬಿರ ” ವು ಬಜ್ಪೆ ಸಿದ್ಧಾರ್ಥನಗರದ ಸಾಮ್ರಾಟ್ ಅಶೋಕ ಚಕ್ರವರ್ತಿ ಸಭಾ ಭವನದಲ್ಲಿ ನಡೆಯಿತು.
ಜಿಲ್ಲೆಯಲ್ಲಿ ಪರಿಪೂರ್ಣವಾದ ದಲಿತ ಕಲಾ ಮಂಡಳಿಯನ್ನು ಕಟ್ಟಿ ಸಾಮಾಜಿಕವಾಗಿ ಜನರನ್ನು ಜಾಗೃತಿಗೊಳಿಸುವ ನಿಟ್ಟಿನಲ್ಲಿ ಈ ಶಿಬಿರವನ್ನು ವ್ಯವಸ್ಥೆಗೊಳಿಸಲಾಗಿತ್ತು.
ಕಲಾಮಂಡಳಿಯ ಈ ಶಿಬಿರದಲ್ಲಿ ತರಬೇತಿಯನ್ನು ಮೈಮ್ ರಾಮ್ ದಾಸ್, ಪ್ರಕಾಶ್ ಕುಡುಪು ಮತ್ತು ಸಂಕಪ್ಪ ಕಾಂಚನ್ ರವರು ನೀಡಿದರು.
ಆರಂಭದಲ್ಲಿ ಶಿಬಿರದ ಉದ್ಘಾಟನೆಯನ್ನು ಮೈಮ್ ರಾಮ್ ದಾಸ್ ಮತ್ತು ಪ್ರಕಾಶ್ ಕುಡುಪು ಹಾಗೂ ರಾಜ್ಯ ಸಂಘಟನಾ ಸಂಚಾಲಕರಾದ ಎಂ. ದೇವದಾಸ್ ರವರು ಬುದ್ದನ ಪ್ರತಿಮೆಯ ಮುಂದೆ ದ್ವೀಪ ಬೆಳಗಿಸುವ ಮತ್ತು ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ನೆರವೇರಿಸಿದರು. ಒಟ್ಟು 26 ಶಿಭಿರಾರ್ಥಿಗಳು ಭಾಗವಹಿಸಿದ್ದರು.
ಶಿಬಿರದಲ್ಲಿ ಜಿಲ್ಲಾ ಸಂಚಾಲಕರಾದ ರಘು ಕೆ. ಎಕ್ಕಾರು , ಜಿಲ್ಲಾ ಮಹಿಳಾ ಸಂಚಾಲಕಿ ಸರೋಜಿನಿ ಬಂಟ್ವಾಳ, ಜಿಲ್ಲಾ ಸಂಘಟನಾ ಸಂಚಾಲಕರಾದ ಕೃಷ್ಣಾನಂದ ಡಿ. ,ಕಮಲಾಕ್ಷ ಬಜಾಲ್, ನಾಗೇಶ್ ಚಿಲಿಂಬಿ, ಸದಾಶಿವ ಪಡುಬಿದ್ರಿ, ರಾಮ್ ದಾಸ್ ಮೇರೆಮಜಲು, ರಾಜಯ್ಯ ಮಂಗಳೂರು, ಬಾಲು ಕುಂದರ್ , ಮಂಗಳೂರು ತಾಲೂಕು ಸಂಚಾಲಕರಾದ ರಾಘವೇಂದ್ರ ಎಸ್.ಪಡ್ಪು, ಸಂಘಟನಾ ಸಂಚಾಲಕರಾದ ರುಕ್ಕಯ್ಯ ಕರಂಬಾರು, ಕೃಷ್ಣ ಎಕ್ಕಾರು, ಗೀತ ಕರಂಬಾರು ಸೀತಾ ಪೇಜಾವರ ಮತ್ತಿತರರು ಉಪಸ್ಥಿತರಿದ್ದರು. ಕೃಷ್ಣಾನಂದ ಡಿ. ಯವರು ಲಪ್ರಾಸ್ತಾವಿಕವಾಗಿ ಮಾತನಾಡಿದರು.
ದಲಿತ ಕಲಾಮಂಡಳಿಯ ನೂತನ ಜಿಲ್ಲಾ ಸಂಚಾಲಕರಾಗಿ ಕಮಲಾಕ್ಷ ಬಜಾಲ್ ರವರನ್ನು ಮತ್ತು ತಾಲೂಕು ಸಂಚಾಲಕರಾಗಿ ಗಂಗಾಧರ ಪೇಜಾವರ ಅವರನ್ನು ಆಯ್ಕೆ ಮಾಡಲಾಯಿತು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/JItjEWZ9e5fBWDL6CkTr97