200 ರೂಪಾಯಿ ಪೆಟ್ರೋಲ್ ಹಾಕಿಸಿ ಹಣ ನೀಡದೇ ಪರಾರಿಯಾದ ಬೈಕ್ ಸವಾರರು!
ಮೆಹದಿಪಟ್ಟಣಂ: ಪೆಟ್ರೋಲ್ ಬೆಲೆ ಗಗನಕ್ಕೆ ಏರಿರುವ ನಡುವೆಯೇ ಇದೀಗ ಪೆಟ್ರೋಲ್ ಖರೀದಿಯಲ್ಲಿಯೂ ಮೋಸ ನಡೆಸುತ್ತಿರುವ ಘಟನೆಗಳು ವರದಿಯಾಗುತ್ತಿವೆ. ಆಂಧ್ರಪ್ರದೇಶದ ಮೆಹದಿಪಟ್ಟಣಂ ನಗರದಲ್ಲಿ ಶನಿವಾರ ರಾತ್ರಿ ನಡೆದ ಘಟನೆಯೊಂದರಲ್ಲಿ ಇಬ್ಬರು ಯುವಕರು ಪೆಟ್ರೋಲ್ ಹಾಕಿಸಿಕೊಂಡು ಹಣಕೊಡದೇ ಪರಾರಿಯಾದ ಘಟನೆ ವರದಿಯಾಗಿದೆ.
ಮೆಹದಿಪಟ್ಟಣಂ ನಗರದ ರೆತಿಬೌಲಿ ರಸ್ತೆಯಲ್ಲಿರುವ ಪೆಟ್ರೋಲ್ ಬಂಕ್ ಗೆ ಫಲ್ಸರ್ ಬೈಕ್ ನಲ್ಲಿ ಇಬ್ಬರು ಯುವಕರು ಆಗಮಿಸಿದ್ದು, 200 ರೂಪಾಯಿಯ ಪೆಟ್ರೋಲ್ ಹಾಕುವಂತೆ ಹೇಳಿದ್ದಾರೆ. ಯುವಕರ ಮಾತು ನಂಬಿ ಪೆಟ್ರೋಲ್ ಬಂಕ್ ಸಿಬ್ಬಂದಿ 200 ರೂಪಾಯಿಯ ಪೆಟ್ರೋಲ್ ಹಾಕಿದ್ದಾರೆ.
ಈ ವೇಳೆ ಇ-ವ್ಯಾಲೆಟ್ ಮೂಲಕ ಹಣ ಪಾವತಿಸುವುದಾಗಿ ಯುವಕರು ಹೇಳಿದ್ದು, ಸಿಬ್ಬಂದಿ ಇ-ವ್ಯಾಲೆಟ್ ಮಷಿನ್ ತರಲು ಒಳಗೆ ಹೋದ ವೇಳೆ ಏಕಾಏಕಿ ಬೈಕ್ ಸ್ಟಾರ್ಟ್ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾರೆ. ಬೈಕ್ ಸ್ಟಾರ್ಟ್ ಆದ ತಕ್ಷಣವೇ ಸಿಬ್ಬಂದಿ ಎಚ್ಚೆತ್ತು. ಹಿಂದೆ ಕುಳಿತಿದ್ದ ವ್ಯಕ್ತಿಯನ್ನು ಹಿಡಿದುಕೊಳ್ಳಲು ಮುಂದಾಗಿದ್ದಾರೆ. ಆದರೆ ಆತ ತಪ್ಪಿಸಿಕೊಂಡು ಸ್ಥಳದಿಂದ ಓಡಿ ಹೋಗಿ ಮತ್ತೆ ಬೈಕ್ ಏರಿ ಕುಳಿತಿದ್ದಾನೆ.
ಇನ್ನೂ ಘಟನೆಯ ತಕ್ಷಣವೇ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಆರೋಪಿಗಳ ಪತ್ತೆಯಾಗಿ ಅವರ ಹಿಂದೆಯೇ ತೆರಳಿದ್ದು, ಆದರೆ ಆರೋಪಿಗಳು ಅದಾಗಲೇ ಪರಾರಿಯಾಗಿದ್ದಾರೆ. ಘಟನೆಯ ದೃಶ್ಯ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ.
ಇನ್ನಷ್ಟು ಸುದ್ದಿಗಳು…
ಎನ್.ಮಹೇಶ್ ಬಿಜೆಪಿ ಸೇರ್ಪಡೆಗೆ ಡೇಟ್ ಫಿಕ್ಸ್: ಬೆಂಗಳೂರಿನ ಕಚೇರಿಯಲ್ಲಿ ಪಕ್ಷ ಸೇರ್ಪಡೆಗೆ ಎನ್.ಮಹೇಶ್ ಸಿದ್ಧತೆ
ಸದಾನಂದ ಗೌಡ, ರೇಣುಕಾಚಾರ್ಯ ಸೆಕ್ಸ್ ಸ್ಕ್ಯಾಂಡಲ್ ನಲ್ಲಿ ಸಿಲುಕಿದ್ದಾರೆ | ಸಿದ್ದರಾಮಯ್ಯ ಹೇಳಿದ್ದೇನು?
ಲಾಡ್ಜ್ ನಲ್ಲಿ ಬಾಲಕನ ಅತ್ಯಾಚಾರ | ಮದ್ರಸ ಶಿಕ್ಷಕನಿಗೆ 11 ವರ್ಷ ಜೈಲು
ಲಾಡ್ಜ್ ನಲ್ಲಿ ಬಾಲಕನ ಅತ್ಯಾಚಾರ | ಮದ್ರಸ ಶಿಕ್ಷಕನಿಗೆ 11 ವರ್ಷ ಜೈಲು
ಗಡ್ಡಧಾರಿಗಳಿಗೆ ಸಿಹಿ ಸುದ್ದಿ: ಮುಂದಿನ ಅವಧಿಯಲ್ಲಿ ನೀವೂ ಸಿಎಂ ಆಗುವ ಸಾಧ್ಯತೆ ಇದೆ!