ಭೀಕರ ಘಟನೆ: ಇಬ್ಬರು ಮಹಿಳೆಯರನ್ನು ಅಪಹರಿಸಿ ನರಬಲಿ: ಓರ್ವ ಮಹಿಳೆಯ ಮಾಂಸ ಸೇವನೆ
ಪತ್ತನಂತಿಟ್ಟ: ಇಬ್ಬರು ಮಹಿಳೆಯರನ್ನು ಅಪಹರಿಸಿ ನರಬಲಿ ನೀಡಿದ ಘಟನೆ ಕೇರಳ ಪತ್ತನಂತಿಟ್ಟ ಜಿಲ್ಲೆಯ ಎಳಂತೂರ್ ಗ್ರಾಮದಲ್ಲಿ ನಡೆದಿದ್ದು, ಮಹಿಳೆಯರ ಶಿರಚ್ಛೇದನ ನಡೆಸಿ ಬರ್ಬರವಾಗಿ ಹತ್ಯೆ ಮಾಡಿ ಬಳಿಕ ಮೃತದೇಹವನ್ನು ಹೂತು ಹಾಕಲಾಗಿದೆ ಎಂದು ತಿಳಿದು ಬಂದಿದೆ.
ಕೇರಳದ ಪಾರಂಪರಿಕ ವೈದ್ಯ ಭಗವಲ್ ಸಿಂಗ್ ಹಾಗೂ ಆತನ ಪತ್ನಿ ಲೈಲಾ ಎಂಬವರು ಈ ದುಷ್ಕೃತ್ಯ ಎಸಗಿದ್ದು, ಆರ್ಥಿಕ ಸಮೃದ್ಧಿ ಸಾಧಿಸಲು ವಾಮಾಚಾರದ ಮೊರೆ ಹೋಗಿದ್ದರು. ಈ ದಂಪತಿ ರೋಸ್ಲಿ(49) ಮತ್ತು ಪದ್ಮಮ್(52) ಎಂಬ ಇಬ್ಬರು ಮಹಿಳೆಯರನ್ನು ಪೆರುಂಬಾವೂರ್ ನ ಶಾಫಿ ಅಲಿಯಾಸ್ ರಶೀದ್ ಎಂಬಾತನ ಸಹಾಯಯೊಂದಿಗೆ ಅಪಹರಿಸಿ ನರ ಬಲಿ ನೀಡಿದ್ದು, ಕೊಲೆಗೀಡಾದ ಈ ಮಹಿಳೆಯರ ಪೈಕಿ ಓರ್ವ ಮಹಿಳೆಯ ಮಾಂಸವನ್ನು ಆರೋಪಿಗಳು ಸೇವನೆ ಮಾಡಿದ್ದಾರೆ ಎಂದು ಪೊಲೀಸರು ಸ್ಫೋಟಕ ಮಾಹಿತಿ ನೀಡಿದ್ದಾರೆ.
ಆರೋಪಿಗಳಾದ ಭಗವಲ್ ಸಿಂಗ್ ಹಾಗೂ ಆತನ ಪತ್ನಿ ಲೈಲಾ
ದಂಪತಿಯು ಆರ್ಥಿಕ ಏಳಿಗೆಗಾಗಿ ದೇವರನ್ನು ಒಲಿಸಿಕೊಳ್ಳುವ ಸಲುವಾಗಿ ಈ ದುಷ್ಕೃತ್ಯವನ್ನು ನಡೆಸಿದ್ದಾರೆ. ಕೃತ್ಯದ ಬಳಿಕ ಮೃತದೇಹಗಳನ್ನು ತಮ್ಮ ಜಮೀನಿನಲ್ಲಿ ಹೂಳಲಾಗಿದೆ ಎಂದು ಪೊಲೀಸ್ ಆಯುಕ್ತ ನಾಗರಾಜು ತಿಳಿಸಿದ್ದಾರೆ.
ಎಳಂತೂರ್ ನಲ್ಲಿರುವ ವಸತಿ ಪ್ಲಾಟ್‌ನಲ್ಲಿ ಮಹಿಳೆಯರ ಶಿರಚ್ಛೇದ
ಎರ್ನಾಕುಳಂನಲ್ಲಿ ಲಾಟರಿ ಟಿಕೆಟ್ ಮಾರಾಟ ಮಾಡುತ್ತಾ, ಜೀವನ ಸಾಗಿಸುತ್ತಿದ್ದ ಇಬ್ಬರು ಮಹಿಳೆಯರನ್ನು 3 ತಿಂಗಳುಗಳ ಅಂತರದಲ್ಲಿ ಅಪಹರಿಸಲಾಗಿತ್ತು. ಮಹಿಳೆಯರು ನಾಪತ್ತೆಯಾದ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ನಡೆಸಿದ್ದು, ಈ ವೇಳೆ ಮಹಿಳೆಯರು ರಶೀದ್ ಗೆ ಕರೆ ಮಾಡಿರೋದು ತಿಳಿದು ಬಂದಿತ್ತು. ರಶೀದ್ ನನ್ನು ವಶಕ್ಕೆ ಪಡೆದ ಕೇರಳ ಪೊಲೀಸರು ತಮ್ಮ ಶೈಲಿಯಲ್ಲಿ ವಿಚಾರಿಸಿದಾಗ ಮಹಿಳೆಯರನ್ನು ಅಪಹರಿಸಿ ಬಲಿ ನೀಡಿರುವುದಾಗಿ ಬಾಯ್ಬಿಟ್ಟಿದ್ದಾನೆ.
ಸ್ಥಳ ಪರಿಶೀಲನೆ ನಡೆಸುತ್ತಿರುವ ತನಿಖಾಧಿಕಾರಿಗಳು
ಅಪಹರಿಸಲ್ಪಟ್ಟ ಮಹಿಳೆಯರನ್ನು ಅತ್ಯಂತ ಭಯಂಕರವಾಗಿ ಹತ್ಯೆ ಮಾಡಲಾಗಿದೆ. ಬಂಧಿತ ಮೂವರು ಆರೋಪಿಗಳು ಸಂತ್ರಸ್ತ ಮಹಿಳೆಯರ ಪೈಕಿ ಒಬ್ಬಾಕೆಯ ಮಾಂಸವನ್ನು ಸೇವನೆ ಮಾಡಿದ್ದಾರೆ ಅನ್ನೋ ಸ್ಟೋಟಕ ಮಾಹಿತಿಯನ್ನೂ ಪೊಲೀಸರು ನೀಡಿದ್ದಾರೆ. ಆದರೆ, ಇದರ ಬಗ್ಗೆ ಪೊಲೀಸರು ಇನ್ನೂ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka