ತಗಡಿನ ಶೆಡ್ ಗೆ ತಗಲಿದ ವಿದ್ಯುತ್: ಸಹೋದರರಿಬ್ಬರ ದಾರುಣ ಸಾವು - Mahanayaka

ತಗಡಿನ ಶೆಡ್ ಗೆ ತಗಲಿದ ವಿದ್ಯುತ್: ಸಹೋದರರಿಬ್ಬರ ದಾರುಣ ಸಾವು

belagavi shed
11/10/2021

ಬೆಳಗಾವಿ  ಸತತವಾಗಿ ಮಳೆ ಸುರಿಯುತ್ತಿರುವ ಪರಿಣಾಮ ಶೆಡ್ ನ ತಗಡಿನ ಛಾವಣಿ ಕುಸಿದು ಬಿದ್ದಿದ್ದು, ಈ ವೇಳೆ ತಗಡಿನ ಶೀಟ್ ಗೆ  ವಿದ್ಯುತ್ ತಂತಿ ತಗುಲಿ ಸಹೋದರರಿಬ್ಬರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಬೆಳಗಾವಿ ಜಿಲ್ಲೆ ದೇಸೂರ್​ ಗ್ರಾಮದ ನಿವಾಸಿಗಳಾದ ಬಸವರಾಜ್ ವಡ್ಡರ್ ಹಾಗೂ ವೆಂಕಟೇಶ್ ವಡ್ಡರ್ ಮೃತಪಟ್ಟ ಸಹೋದರರು ಎಂದು ಗುರುತಿಸಲಾಗಿದೆ. ಶೆಡ್ ನ ಛಾವಣಿ ಕುಸಿದ ವೇಳೆ ವಿದ್ಯುತ್ ಶಾಕ್ ತಗಲಿ ಸಹೋದರರು ಬಲಿಯಾಗಿದ್ದಾರೆ ಎಂದು ವರದಿಯಾಗಿದೆ.

ಮಾಹಿತಿಗಳ ಪ್ರಕಾರ, ಈ ಶೆಡ್​​ಗೆ ವಿದ್ಯುತ್ ಸಂಪರ್ಕ ಇದ್ದುದರಿಂದ, ಕುಸಿದ ತಗಡಿಗೆ ವಿದ್ಯುತ್ ತಗುಲಿ, ಸಹೋದರರಿಬ್ಬರಿಗೂ ಶಾಕ್​ ಹೊಡೆದಿದ್ದರಿಂದ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಘಟನಾ ಸ್ಥಳಕ್ಕೆ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಘಟನೆ ಸಂಬಂಧ ಮಾಹಿತಿ ಸಂಗ್ರಹಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಇನ್ನಷ್ಟು ಸುದ್ದಿಗಳು…

ವಿಚಿತ್ರ ಫೋಟೋ ಹಂಚಿಕೊಂಡು ಅಭಿಮಾನಿಗಳ ತಲೆಗೆ ಹುಳ ಬಿಟ್ಟ ಮೋಹಕ ತಾರೆ ರಮ್ಯಾ!

ಜೋರು ಮಳೆಯ ವೇಳೆ ಮರದಡಿಯಲ್ಲಿ ನಿಂತಿದ್ದ ತಂದೆ ಮಗನಿಗೆ ಬಡಿದ ಸಿಡಿಲು | ತಂದೆಯ ದಾರುಣ ಸಾವು

KSRTC ಬಸ್  ಮತ್ತು ಆಟೋ ಡಿಕ್ಕಿ: ಮದುಮಗ ಸೇರಿದಂತೆ ಮೂವರ ದಾರುಣ ಸಾವು

ಮೋದಿ ಸರ್ಕಾರ ಕಾರ್ಮಿಕ, ರೈತ ಕಾನೂನುಗಳನ್ನು ದುರ್ಬಲಗೊಳಿಸುತ್ತಿದೆ | CPIM ಮುಖಂಡ ವಸಂತ ಆಚಾರಿ

ಮನೆಯ ಗೋಡೆ ಕುಸಿದು ಒಂದೇ ಕುಟುಂಬದ ಐವರು ಸಾವು | ಇಬ್ಬರು ಮಕ್ಕಳ ಸ್ಥಿತಿ ಗಂಭೀರ

ಮನೆಯ ಗೋಡೆ ಕುಸಿದು ಒಂದೇ ಕುಟುಂಬದ ಐವರು ಸಾವು | ಇಬ್ಬರು ಮಕ್ಕಳ ಸ್ಥಿತಿ ಗಂಭೀರ

ಇತ್ತೀಚಿನ ಸುದ್ದಿ