ದಕ್ಷಿಣ ತೈವಾನ್ ಗೆ ಅಪ್ಪಳಿಸಿದ ಡೋಕ್ಸುರಿ ಚಂಡಮಾರುತ: ಮನೆ ಮಾಡಿದ ಆತಂಕ

ಡೋಕ್ಸುರಿ ಚಂಡಮಾರುತದ ಅಬ್ಬರ ಜೋರಾಗಿದೆ. ದಕ್ಷಿಣ ತೈವಾನ್‌ನಲ್ಲಿ ಲಕ್ಷಾಂತರ ಮನೆಗಳಿಗೆ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದೆ. ಎರಡನೇ ದಿನವೂ ವ್ಯಾಪಾರ ವ್ಯವಹಾರವನ್ನು ಸ್ಥಗಿತಗೊಳಿಸಲಾಯಿತು. ಚಂಡಮಾರುತವು ಶುಕ್ರವಾರ ಆಗ್ನೇಯ ಚೀನಾಕ್ಕೆ ಬರುತ್ತಿದ್ದಂತೆ ತೀವ್ರ ಗಾಳಿಯ ಬಗ್ಗೆ ಎಚ್ಚರಿಕೆ ನೀಡಲಾಗಿದೆ.
ತೈವಾನ್ ಹವಾಮಾನ ಬ್ಯೂರೋದ ಮಾಹಿತಿಯಂತೆ ಎರಡನೇ ಪ್ರಬಲ ಚಂಡಮಾರುತ ಮಟ್ಟದಲ್ಲಿ ವರ್ಗೀಕರಿಸಲ್ಪಟ್ಟ ಡೋಕ್ಸುರಿ ಚಂಡಮಾರುತವು ತೈವಾನ್ ಜಲಸಂಧಿಯನ್ನು ದಾಟಿದ ನಂತರ ಚೀನಾದ ಆಗ್ನೇಯ ಪ್ರಾಂತ್ಯವಾದ ಫ್ಯುಜಿಯಾನ್ ಕಡೆಗೆ 191 ಕಿ.ಮೀ (118 ಮೈಲಿ) ಗರಿಷ್ಠ ಗಾಳಿಯೊಂದಿಗೆ ಸಾಗಿತು.
ಭೂಕುಸಿತ ಮತ್ತು ಪ್ರವಾಹದ ಎಚ್ಚರಿಕೆಗಳ ನಡುವೆ ಪ್ರಮುಖ ಬಂದರು ನಗರ ಕಾವೊಹ್ಸಿಯುಂಗ್ ಸೇರಿದಂತೆ ತೈವಾನ್ ನ ದಕ್ಷಿಣ ಕೌಂಟಿಗಳಲ್ಲಿ ವ್ಯಾಪಾರ ವಹಿವಾಟುಗಳನ್ನು ಸ್ಥಗಿತಗೊಳಿಸಲಾಗಿದೆ. ಶಾಲೆಗಳನ್ನು ಎರಡನೇ ದಿನವೂ ಮುಚ್ಚಲಾಯಿತು.
ತೈವಾನ್ ದ್ವೀಪಗಳಾದ ಪೆಂಗು ಮತ್ತು ಕಿನ್ಮೆನ್ ನಲ್ಲಿ “ಚಂಡಮಾರುತ-ಬಲ-ಗಾಳಿ” ಎಚ್ಚರಿಕೆಯನ್ನು ನೀಡಲಾಗಿದೆ. ಅಲ್ಲಿ ನಿವಾಸಿಗಳಿಗೆ 155 ಕಿ.ಮೀ (96 ಮೈಲಿ) ಗಿಂತ ಹೆಚ್ಚಿನ ವೇಗದಲ್ಲಿ ಗಾಳಿ ಬೀಸುವ ಎಚ್ಚರಿಕೆ ನೀಡಲಾಗಿದೆ.
ಇನ್ನೂ 300 ಕ್ಕೂ ಹೆಚ್ಚು ದೇಶೀಯ ಮತ್ತು ಅಂತರರಾಷ್ಟ್ರೀಯ ವಿಮಾನಗಳನ್ನು ಸ್ಥಗಿತಗೊಳಿಸಲಾಗಿದೆ. ದಕ್ಷಿಣ ಮತ್ತು ಪೂರ್ವ ತೈವಾನ್ ನಡುವಿನ ರೈಲ್ವೆ ಸೇವೆಗಳನ್ನು ನಿಲ್ಲಿಸಲಾಗಿದೆ.
ಫಿಲಿಪೈನ್ಸ್ ರಾಜಧಾನಿ ಮನಿಲಾ ಬಳಿ ಬಲವಾದ ಗಾಳಿ ಬೀಸುತ್ತಿರುವುದರಿಂದ್ದ ಭಯಭೀತರಾದ ಪ್ರಯಾಣಿಕರು ನದಿಯ ಒಂದು ಬದಿಗೆ ಧಾವಿಸುತ್ತಿದ್ದಂತೆ ದೋಣಿ ಪಲ್ಟಿಯಾಗಿ ನೀರಲ್ಲಿ ಮುಳುಗಿದೆ. ಉತ್ತರ ಫಿಲಿಪೈನ್ಸ್ ನಲ್ಲಿ ಡೋಕ್ಸುರಿ ಚಂಡಮಾರುತದಿಂದ ಈ ವಾರ 36 ಜನರು ಸಾವನ್ನಪ್ಪಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BnbLYSQaXK1Hate4P0Bt3B
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw