ಮುಂದಿನ ಮುಖ್ಯಮಂತ್ರಿ ಯು.ಟಿ.ಖಾದರ್: ವಿಪಕ್ಷ ಉಪನಾಯಕನಾಗುತ್ತಿದ್ದಂತೆಯೇ ಹೊಸ ಚರ್ಚೆ - Mahanayaka
3:29 PM Wednesday 5 - February 2025

ಮುಂದಿನ ಮುಖ್ಯಮಂತ್ರಿ ಯು.ಟಿ.ಖಾದರ್: ವಿಪಕ್ಷ ಉಪನಾಯಕನಾಗುತ್ತಿದ್ದಂತೆಯೇ ಹೊಸ ಚರ್ಚೆ

ut khadar
31/01/2022

ಬೆಂಗಳೂರು: ವಿಧಾನಸಭೆಯ ವಿಪಕ್ಷ ಉಪನಾಯಕರನ್ನಾಗಿ ಯು.ಟಿ.ಖಾದರ್ ನೇಮಕ ಮಾಡಲಾಗಿದೆ.

ಈ ಕುರಿತಂತೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಆದೇಶ ಹೊರಡಿಸಿದ್ದು, ಕಾಂಗ್ರೆಸ್ ಅಧ್ಯಕ್ಷೆಯವರ ಸೂಚನೆ ಮೇರೆಗೆ ವಿಧಾನಸಭೆಯ ವಿಪಕ್ಷ ಉಪನಾಯಕರಾಗಿ ಶಾಸಕ ಯು.ಟಿ.ಖಾದರ್ ನೇಮಕ ಮಾಡಿರೋದಾಗಿ ತಿಳಿಸಿದ್ದಾರೆ.

ಈ ಹಿಂದೆ ವಿಧಾನ ಪರಿಷತ್ ನಾಯಕರಾಗಿ ಬಿ.ಕೆ.ಹರಿಪ್ರಸಾದ್ ಹಾಗೂ ಮುಖ್ಯ ಸಚೇತಕರಾಗಿ ಪ್ರಕಾಶ್ ರಾಥೋಡ್ ಅವರನ್ನು ಎಐಸಿಸಿ ನೇಮಕ ಮಾಡಿ ಆದೇಶಿತ್ತು.

ಈ ಕುರಿತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಆದೇಶ ಹೊರಡಿಸಿದ್ದು, ಕಾಂಗ್ರೆಸ್ ವಿಧಾನ ಪರಿಷತ್ ನಾಯಕರಾಗಿ ಬಿ.ಕೆ.ಹರಿಪ್ರಸಾದ್. ಮುಖ್ಯ ಸಚೇತಕರಾಗಿ ಪ್ರಕಾಶ್ ರಾಥೋಡ್ ಮತ್ತು ಕರ್ನಾಟಕದ ವಿಧಾನ ಪರಿಷತ್ತಿನಲ್ಲಿ ಕಾಂಗ್ರೆಸ್ ಪಕ್ಷದ ವಿಧಾನ ಪರಿಷತ್ ಉಪ ನಾಯಕರಾಗಿ ಕೆ.ಗೋವಿಂದರಾಜ್ ಅವರನ್ನು ನೇಮಿಸಿ ಆದೇಶ ಹೊರಡಿಸಿದ್ದಾರೆ.

ಇನ್ನೂ ವಿಪಕ್ಷ ಉಪನಾಯಕರಾಗಿ ಖಾದರ್ ನೇಮಕವಾಗುತ್ತಿದ್ದಂತೆಯೇ ಯು.ಟಿ.ಖಾದರ್ ಮುಂದಿನ ಮುಖ್ಯಮಂತ್ರಿ ಎಂಬ ಚರ್ಚೆಗಳು ಯು.ಟಿ.ಖಾದರ್ ಅಭಿಮಾನಿ ಬಳಗದ ನಡುವೆ ಕೇಳಿ ಬಂದಿದೆ.

ಇನ್ನೂ ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಅವರು ಈ ಹಿಂದೆ ಕಾರ್ಯಕ್ರಮವೊಂದರಲ್ಲಿ ಯು.ಟಿ.ಖಾದರ್ ಅವರು ಮುಂದಿನ ದಿನಗಳಲ್ಲಿ ರಾಜ್ಯದ ಸಿಎಂ ಆಗಲಿದ್ದಾರೆ ಎಂದು ಭಾಷಣ ಮಾಡುತ್ತಾ ಭವಿಷ್ಯ ನುಡಿದಿದ್ದರು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಇತ್ತೀಚಿನ ಸುದ್ದಿ