ದುಬೈನಲ್ಲಿ ಮತ್ತೆ ಮಳೆಯ ಭೀತಿ: ಸರ್ಕಾರದಿಂದ ಎಚ್ಚರಿಕೆ - Mahanayaka
3:16 PM Saturday 21 - September 2024

ದುಬೈನಲ್ಲಿ ಮತ್ತೆ ಮಳೆಯ ಭೀತಿ: ಸರ್ಕಾರದಿಂದ ಎಚ್ಚರಿಕೆ

01/05/2024

ದುಬೈಗೆ ಮತ್ತೆ ಮಳೆ ವಕ್ಕರಿಸಲಿದೆ. ವಾರಗಳ ಹಿಂದೆ ದುಬೈಯಲ್ಲಿ ಬಾರಿ ಅನಾಹುತವನ್ನು ಸೃಷ್ಟಿಸಿದ್ದ ಮಳೆ ಮತ್ತೆ ದುಬೈಗೆ ಅಪ್ಪಳಿಸಿರುವುದಾಗಿ ವರದಿಯಾಗಿದ್ದು ನಾಗರಿಕರಿಗೆ ಸರಕಾರ ಎಚ್ಚರಿಕೆಯನ್ನು ನೀಡಿದೆ. ವೇಳೆ ಸೌದಿ ಅರೇಬಿಯಾದಲ್ಲಿ ಭಾರಿ ಮಳೆ ಆಗುವ ಸಾಧ್ಯತೆಯಿದ್ದು ನಾಗರೀಕರನ್ನು ಎಚ್ಚರಿಸಲಾಗಿದೆ.

ಮೇ 2ರ ಬೆಳಗಿನಿಂದ ಯುಎಇಯ ಎಲ್ಲಾ ಭಾಗದಲ್ಲೂ ಮಳೆ ಬೀಳಲಿದೆ ಎಂದು ನಿರೀಕ್ಷಿಸಲಾಗಿದೆ. ಆದರೆ ಏಪ್ರಿಲ್ 16 ರಂದು ಸುರಿದಂತೆ ಭಾರಿ ಪ್ರಮಾಣದಲ್ಲಿ ಮಳೆ ಸುರಿಯಲಾರದು ಎಂದು ಕೂಡ ಹೇಳಲಾಗಿದೆ. ತಗ್ಗು ಪ್ರದೇಶದಲ್ಲಿ ವಾಸಿಸುತ್ತಿರುವವರು ಮೈಯೆಲ್ಲಾ ಕಣ್ಣಾಗಿರಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದೇ ವೇಳೆ ಸೌದಿ ಅಧಿಕಾರಿಗಳು ಕೂಡ ನಾಗರಿಕರನ್ನು ಎಚ್ಚರಿಸಿದ್ದಾರೆ. ಭಾರಿ ಮಳೆಯಾಗುವ ಸಾಧ್ಯತೆಯಿದ್ದು ನಾಗರಿಕರು ಜಾಗರೂಕತೆಯಿಂದ ಇಡೀ ಬೆಳವಣಿಗೆಯನ್ನು ನೋಡುತ್ತಿರಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 


Provided by

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ