ದುಬೈ ಅಬುಧಾಬಿ ಇನ್ನೂ ಹತ್ತಿರ ಹತ್ತಿರ: ಶೀಘ್ರವೇ ಓಡಾಡಲಿದೆ ಮೊಟ್ಟ ಮೊದಲ ಅತಿ ವೇಗದ ಎಲೆಕ್ಟ್ರಾನಿಕ್ ಪ್ಯಾಸೆಂಜರ್ ಟ್ರೈನ್
ದುಬೈ ಮತ್ತು ಅಬುಧಾಬಿ ರಾಜ್ಯಗಳನ್ನು ಜೊತೆಗೂಡಿಸುವ ಯುಎಇಯ ಮೊಟ್ಟ ಮೊದಲ ಅತಿ ವೇಗದ ಎಲೆಕ್ಟ್ರಾನಿಕ್ ಪ್ಯಾಸೆಂಜರ್ ಟ್ರೈನ್ ಅನ್ನು ಪ್ರಾರಂಭಿಸುವುದಾಗಿ ಇತ್ತಿಹಾದ್ ರೈಲ್ ಘೋಷಿಸಿದೆ. ಅಲ್ ಫಯಾಹ್ ಸ್ಟೇಶನ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಬುಧಾಬಿ ರಾಜಕುಮಾರ ಮತ್ತು ಎಕ್ಸಿಕ್ಯೂಟಿವ್ ಕೌನ್ಸಿಲ್ ಚೇರ್ಮನ್ ಕೂಡ ಆಗಿರುವ ಶೈಕ್ ಖಾಲಿದ್ ಬಿನ್ ಮೊಹಮ್ಮದ್ ಅಲ್ ನಹಿಯಾನ್, ದುಬೈ ಆಡಳಿತಾಧಿಕಾರಿ ಮತ್ತು ಉಪ ಪ್ರಧಾನಿಯಾಗಿರುವ ಶೈಕ್ ಹಮ್ದಾನ್ ಬಿನ್ ಮೊಹಮ್ಮದ್ ಬಿನ್ ರಾಶಿದ್ ಅಲ್ ಮಕ್ತ್ತೂಮ್ ಅವರ ಉಪಸ್ಥಿತಿಯಲ್ಲಿ ಇತ್ತಿಹಾದ್ ರೈಲು ಈ ಘೋಷಣೆಯನ್ನು ಮಾಡಿದೆ ಈ ರೈಲು ಪ್ರಾರಂಭವಾದರೆ ಅಬುದಾಬಿಯಿಂದ ದುಬೈಗೆ ಕೇವಲ ಅರ್ಧ ಗಂಟೆಯಲ್ಲಿ ತಲುಪಬಹುದಾಗಿದೆ.
ಅಬುದಾಬಿ, ದುಬಾಯಿ, ಶಾರ್ಜಾ, ಫುಜೈರಾ ಸೇರಿದಂತೆ ಯುಎಇಯ ಆರು ರಾಜ್ಯಗಳಲ್ಲಿ ಈ ರೈಲ್ವೆ ಸ್ಟೇಷನ್ ಗಳು ಇರಲಿವೆ. ರೀಮ್ ಐಲ್ಯಾಂಡ್ , ಸಅದಿಯಾತ್,, ಯಾಸ್ ಐಲ್ಯಾಂಡ್, ಅಬೂಬದಿ ಝಾಯಿದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಜಬಲ್ ಅಲಿಯಲ್ಲಿರುವ ಅಲ್ ಮಕ್ತೂಮ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ದುಬೈಯ ಅಲ್ ಜದ್ದಾಫ್ ಮುಂತಾದ ಕಡೆ ಸ್ಟೇಷನ್ ಗಳು ಇರಲಿವೆ. ಮೆಟ್ರೋ ಮತ್ತು ಬಸ್ ಲೈನುಗಳ ಮೂಲಕ ಈ ಸ್ಟೇಷನ್ಗಳನ್ನು ಜೋಡಿಸಲಾಗುತ್ತದೆ. ಬಿಸ್ನೆಸ್ ಕ್ಲಾಸ್ ಲಾಂಚ್ ಗಳು, ಶಾಪ್ ಗಳುಮತ್ತು ಕುಟುಂಬ ಸಮೇತ ಆನಂದಿಸುವ ಮನರಂಜನೆಗಳು ಕೂಡ ಇವುಗಳ ಜೊತೆಗೆ ಸಜ್ಜುಗೊಳಿಸಲಾಗುವುದು.
ಪ್ರಮುಖ ಕೇಂದ್ರಗಳಲ್ಲಿ ಹಾದು ಹೋಗಲಿರುವ ಈ ಟ್ರೈನ್, ಒಮಾನ್ ಗಡಿಯವರಿಗೆ ಸಂಚರಿಸಲಿದೆ. ಮೆಸೀರ ಮತ್ತು ಲಿವ ಮರುಭೂಮಿಯ ಮೂಲಕ ಈ ಟ್ರೈನ್ ಹಾದು ಹೋಗುವುದರಿಂದ ಯಾತ್ರಿಕರಿಗೆ ಅದ್ಭುತ ದೃಶ್ಯಗಳ ಸುಖ ಲಭಿಸಲಿದೆ ಎಂದು ತಿಳಿಸಲಾಗಿದೆ.
ಈ ಟ್ರೈನ್ ಒಂದು ಗಂಟೆಯಲ್ಲಿ 350 ಕಿಲೋ ಮೀಟರ್ ದೂರವನ್ನು ಕ್ರಮಿಸಲಿದೆ ಎಂದು ಹೇಳಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj