ಉಚಿತ ಕೊವಿಡ್ ಲಸಿಕೆ ಯಾವಾಗ ಸಿಗಲಿದೆ ಗೊತ್ತಾ? | ಪ್ರಧಾನಿ ಹೇಳಿದ್ದೇನು? - Mahanayaka
2:19 PM Wednesday 5 - February 2025

ಉಚಿತ ಕೊವಿಡ್ ಲಸಿಕೆ ಯಾವಾಗ ಸಿಗಲಿದೆ ಗೊತ್ತಾ? | ಪ್ರಧಾನಿ ಹೇಳಿದ್ದೇನು?

narendra modi
07/06/2021

ನವದೆಹಲಿ: ಎಲ್ಲಾ ರಾಜ್ಯಗಳಿಗೆ ಕೇಂದ್ರ ಸರ್ಕಾರವು ಜೂನ್ 21ರಿಂದ ಉಚಿತ ಲಸಿಕೆ ಪೂರೈಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದು,  ಮುಂದಿನ ಎರಡು ವಾರಗಳ ಬಳಿಕ ಕೇಂದ್ರವೇ ಲಸಿಕೆ ನೀಡಲಿದೆ ಎಂದು ತಿಳಿಸಿದರು.

ಶೇ.25ರಷ್ಟು ಲಸಿಕೆಗಳನ್ನು ಖಾಸಗಿ ಆಸ್ಪತ್ರೆ ಖರೀಸಬಹುದು, ಹಣವಿದ್ದವರು ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಪಡೆಯಬಹುದು. ರಾಜ್ಯ ಸರ್ಕಾರಗಳ ಲಸಿಕೆ ಬೇಡಿಕೆಯನ್ನು ಕೇಂದ್ರ ಸರ್ಕಾರ ಈಡೇರಿಸಲಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು.

ದೇಶದಲ್ಲಿ ಹಲವು ಮಂದಿ ತಮ್ಮ ಕುಟುಂಬದವರನ್ನು ಕಳೆದುಕೊಂಡಿದ್ದಾರೆ, ಸ್ನೇಹಿತರನ್ನು ಕಳೆದುಕೊಂಡಿದ್ದಾರೆ,  ಕಳೆದ 100 ವರ್ಷಗಳಲ್ಲಿ ಕಾಣದ ದೊಡ್ಡ ಮಹಾಮಾರಿ ಕೊರೊನಾವಾಗಿದೆ, ಈ ರೀತಿಯ ಮಹಾಮಾರಿಯನ್ನು ಆಧುನಿಕ ವಿಶ್ವ ನೋಡಿಲ್ಲ ಅದರ ಅನುಭವ ಯಾರಿಗೂ ಇರಲಿಲ್ಲ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.

ಮಹಾಮಾರಿ ವಿರುದ್ಧ ಹೋರಾಡಲು ಸರ್ಕಾರವು ಹಲವು ಆಸ್ಪತ್ರೆಗಳನ್ನು ನಿರ್ಮಿಸಿದೆ. ಭಾರತದ ಇತಿಹಾಸದಲ್ಲಿ ಬಳಕೆ ಮಾಡದಷ್ಟು ಮೆಡಿಕಲ್ ಆಕ್ಸಿಜನ್ ಬಳಕೆಯಾಗಿದೆ. ಆಮ್ಲಜನಕ ಆಮದಿಗೆ ಭಾರತೀಯ ವಾಯು ಸೇನೆ, ನೌಕಾಪಡೆಯನ್ನು ಬಳಸಲಾಯಿತು. ದೇಶದಲ್ಲಿ ವೈದ್ಯಕೀಯ ಆಮ್ಲಜನಕ ಉತ್ಪಾದನೆ ಶೇ.10ರಷ್ಟು ಹೆಚ್ಚಳ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಇತ್ತೀಚಿನ ಸುದ್ದಿ