ಸರ್ಕಾರಿ ಮತ್ತು ಅನುದಾನಿತ ಶಾಲಾ ಮಕ್ಕಳಿಗೆ ಉಚಿತ ಸಂಜೆ ಪಾಠಶಾಲೆ
ಪುತ್ತೂರು: ಮದರ್ ಡ್ರೀಮ್ಸ್ ರೂರಲ್ ಮತ್ತು ಅರ್ಬನ್ ಎಜ್ಯುಕೇಶನ್ ಡೆವಲಮೆಂಟ್ ಸೊಸೈಟಿ(ರಿ.) ಇದರ ವತಿಯಿಂದ ಸರ್ಕಾರಿ ಮತ್ತು ಅನುದಾನಿತ ಶಾಲಾ ಮಕ್ಕಳಿಗೆ ಉಚಿತ ಸಂಜೆ ಪಾಠಶಾಲೆ ಉದ್ಘಾಟಿಸಲಾಯಿತು.
ಪುತ್ತೂರು ತಾಲೂಕಿನ ಎಕ್ಕಡ್ಕ ದಕ್ಷಿಣ ಕನ್ನ ಜಿಲ್ಲಾ ಪಂಚಾಯತ್ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಎ.ಪಿ.ಜೆ.ಅಬ್ದುಲ್ ಕಲಾಂ ಅವರ “ಅತ್ಯುತ್ತಮ ಪುಸ್ತಕವು ನೂರು ಸ್ನೇಹಿತರಿಗೆ ಸಮಾನವಾದರೆ ಒಬ್ಬ ಉತ್ತಮ ಸ್ನೇಹಿತನು ಗ್ರಂಥಾಲಯಕ್ಕೆ ಸಮವಾಗುತ್ತಾನೆ” ಎನ್ನುವ ಸಂದೇಶವನ್ನು ಓದುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಸ್ ಡಿ ಎಂ ಸಿ ಅಧ್ಯಕ್ಷರಾದ ವಿನಯ್ ಕುಮಾರ್, ಮಕ್ಕಳ ಶಿಕ್ಷಣ ಅಭಿವೃದ್ಧಿಗೆ ಈ ಸಂಸ್ಥೆಯು ಆಯೋಜಿಸಿರುವ ಈ ಯೋಜನೆ ಅತ್ಯುತ್ತಮವಾಗಿದ್ದು, ಮಕ್ಕಳ ಏಳಿಗೆಗೆ ಸಹಕಾರಿಯಾಗುತ್ತದೆ ಎಂದು ಹೇಳಿದರು.
ಮುಖ್ಯ ಅಥಿತಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಾಲೆಯ ಮುಖ್ಯೋಪಾಧ್ಯಾಯರಾದ ರಾಕೇಶ್ ಅವರು ಮಾತನಾಡಿ ಈ ಸಂಸ್ಥೆಯು ಈ ಶಾಲೆಯನ್ನು ಆಯ್ಕೆ ಮಾಡಿರುವುದು ನಮ್ಮೆಲ್ಲರ ಭಾಗ್ಯ ಎಂದು ನುಡಿದರು,
ಸಂಸ್ಥೆಯ ಅಧ್ಯಕ್ಷರಾದ ಪ್ರದೀಪ್ ಎಚ್. ಚಿತ್ರದುರ್ಗ , ಇವರು ಪ್ರಾಸ್ತಾವಿಕ ಮಾತನಾಡಿದರು. ಕಾರ್ಯದರ್ಶಿಯಾದ ಮಹಾಂತೇಶ್ ಡಿ, ಪದಾಧಿಕಾರಿಗಳಾದ ಮಂಜುನಾಥ್ ಶಾಂತಿಮೂಲೆ, ಮಧುಸೂದನ್ ಕಾಟಿಪಳ್ಳ, ಶ್ರೀ ರಾಮ ಗೋ ಶಾಲೆಯ ಅಧ್ಯಕ್ಷರಾದ ಸೋಮಪ್ರಸಾದ್ ಗೂಡಂಬೆ ಮರ್ಕಂಜ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ, ಕೆ.ಪಲ್ಲತ್ತಡ್ಕ ಮತ್ತು ಸಹಶಿಕ್ಷಕರಾದ ಬಬಿತಾ ಮತ್ತು ಜಾನಕಿ ಉಪಸ್ಥಿತರಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka