ಆಪರೇಷನ್ ಕಮಲ ಬಾಂಬ್: ಉದ್ಧವ್ ಠಾಕ್ರೆ ಸರ್ಕಾರ ಪತನಕ್ಕೆ ಡೆಡ್ ಲೈನ್
ಪುಣೆ: ಕರ್ನಾಟಕದಲ್ಲಿ ಮೈತ್ರಿ ಸರ್ಕಾರ ಉರುಳಿಸಿದ್ದ ಆಪರೇಷನ್ ಕಮಲ ಇದೀಗ ಮಹಾರಾಷ್ಟ್ರಕ್ಕೂ ವ್ಯಾಪಿಸಿದ್ದು, ಶಿವಸೇನಾ ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಬಂಡಾಯ ಎಬ್ಬಿಸುವ ಮೂಲಕ ಉದ್ಧವ್ ಠಾಕ್ರೆ ಸರ್ಕಾರದ ಪತನಕ್ಕೆ ಡೆಡ್ ಲೈನ್ ನೀಡಿದೆ.
ಇನ್ನೂ ಶಾಸಕರ ಅನಿರೀಕ್ಷಿತ ನಡವಳಿಕೆಗಳಿಂದ ಕಂಗಾಲಾಗಿರುವ ಉದ್ದವ್ ಠಾಕ್ರೆ, ಫೇಸ್ ಬುಕ್ ಲೈವ್ ನಲ್ಲಿ ಮಾತನಾಡಿದ್ದು, ನನ್ನ ಮುಂದೆ ಬನ್ನಿ, ಎಲ್ಲರೂ ಒಟ್ಟಾಗಿ ರಾಜೀನಾಮೆ ನೀಡೋಣ ಎಂದು ಶಾಸಕರನ್ನು ಆಹ್ವಾನಿಸಿದ್ದಾರೆ.
ಸಿಎಂ ಉದ್ಧವ್ ಠಾಕ್ರೆಯವರು ಸಿಎಂ ಅಧಿಕೃತ ನಿವಾಸ ತೊರೆದಿದ್ದು, ಖಾಸಗಿ ನಿವಾಸ ಮಾತೋಶ್ರೀಗೆ ಶಿಫ್ಟ್ ಆಗಿದ್ದಾರೆ ಎಂದು ಶಿವಸೇನೆ ನಾಯಕ ಸಂಜಯ್ ರಾವತ್ ಬುಧವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ರಾವತ್, ಠಾಕ್ರೆ ದಕ್ಷಿಣ ಮುಂಬೈನ ಸಿಎಂ ಅಧಿಕೃತ ನಿವಾಸ ‘ವರ್ಷಾ’ವನ್ನು ತೊರೆದು ಉಪನಗರ ಬಾಂದ್ರಾದಲ್ಲಿರುವ ತಮ್ಮ ಖಾಸಗಿ ನಿವಾಸ ‘ಮಾತೋಶ್ರೀ’ಗೆ ಹಿಂತಿರುಗುತ್ತಿದ್ದಾರೆ ಎಂದು ಹೇಳಿದರು. ಠಾಕ್ರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಇದಕ್ಕೂ ಮುನ್ನ ಫೇಸ್ ಬುಕ್ ಲೈವ್ ನಲ್ಲಿ ಮಾತನಾಡಿದ್ದಂತ ಮಹಾ ಸಿಎಂ ಉದ್ಧವ್ ಠಾಕ್ರೆಯವರು ನೀವು ಎಲ್ಲೋ ಕುಳಿತು ನಾನು ಸರಿಯಿಲ್ಲ ಎಂಬುದನ್ನು ಒಪ್ಪುವುದಿಲ್ಲ. ನನ್ನ ಮುಂದೆ ಬನ್ನಿ, ಎಲ್ಲರೂ ಒಟ್ಟಾಗಿ ಹೋಗಿ ರಾಜ್ಯಪಾಲರಿಗೆ ರಾಜೀನಾಮೆ ನೀಡೋಣ. ನಾನು ಅನಿರೀಕ್ಷಿತವಾಗಿ ಸಿಎಂ ಆದಂತವನಾಗಿದ್ದೇನೆ. ಯಾವುದೇ ಹುದ್ದೆ ಶಾಶ್ವತವಲ್ಲ. ನನಗೆ ಶಿವಸೇನೆ ಸಂಘಟನೆ ಮುಖ್ಯವಾಗಿದೆ. ನಿಮ್ಮ ಕಾರ್ಯವೈಖರಿ ಸರಿಯಿಲ್ಲವೆಂದ್ರೇ ರಾಜೀನಾಮೆ ನೀಡಲು ಸಿದ್ಧನಿದ್ದೇನೆ ಎಂದು ಹೇಳಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka