ಮನೆಗೆ ನುಗ್ಗಿ 4 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು
ಉಡುಪಿ: ಮನೆಯಲ್ಲಿ ಯಾರೂ ಇಲ್ಲದೆ ವೇಳೆ ಮನೆ ಬೀಗ ಮುರಿದು ಸುಮಾರು 4 ಲಕ್ಷ ರೂ.ಮೌಲ್ಯದ ಚಿನ್ನಾಭರಣವನ್ನು ದೋಚಿರುವ ಘಟನೆ ಉಡುಪಿಯ ಕೊಡವೂರು ಗ್ರಾಮದ ಆದಿ ಉಡುಪಿಯಲ್ಲಿ ನಡೆದಿದೆ.
ಮನೆ ಯಜಮಾನರಾದ ನಜೀರ್ ಬೆಳ್ವಾಯಿ ಅವರ ಮನೆಯಲ್ಲಿ ಈ ಘಟನೆ ನಡೆದಿದೆ. ಮನೆಯವರು 17–01–2023ನಿಂದ 20–01–2023ರವರೆ ಅವರ ಊರಾದ ಬೆಳ್ವಾಯಿ ಮನೆಗೆ ತೆರಳಿದ್ದು, ಈ ವೇಳೆ ಮನೆಯ ಬೀಗ ಮುರಿದು ಮನೆಯಲ್ಲಿರುವ ಚಿನ್ನಾಭರಣ ವನ್ನು ದೋಚಿರುತ್ತಾರೆ.
ಮನೆಯಲ್ಲಿದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿಯಾಗಿಸಿರುವ ಕಳ್ಳರು ಹಣ, ಚಿನ್ನಾಭರಣಕ್ಕಾಗಿ ಮನೆಯನ್ನು ಜಾಲಾಡಿದ್ದಾರೆ. ಸುಮಾರು ನಾಲ್ಕು ಲಕ್ಷ ರೂ ಮೌಲ್ಯದ ಚಿನ್ನಾಭರಣಗಳು ಕಳ್ಳರ ಪಾಲಾಗಿವೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw