“ಏರೆಗಾವುಯೇ ಕಿರಿಕಿರಿ…!”: ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದ ಸಾರ್ವಜನಿಕರಿಗೆ ಟ್ರಾಫಿಕ್ ಜಾಮ್ ಕಿರಿಕಿರಿ - Mahanayaka

“ಏರೆಗಾವುಯೇ ಕಿರಿಕಿರಿ…!”: ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದ ಸಾರ್ವಜನಿಕರಿಗೆ ಟ್ರಾಫಿಕ್ ಜಾಮ್ ಕಿರಿಕಿರಿ

traffic jam
07/10/2022

ಉಡುಪಿ: ವಾಹನ ಸವಾರರಿಗೆ ತೀವ್ರ ಸಮಸ್ಯೆಯಾಗಿ ಪರಿಣಮಿಸಿದ್ದ ಇಂದ್ರಾಳಿ ಸೇತುವೆ ರಸ್ತೆ (ರಾ. ಹೆ. 169 ಎ) ಕಾಮಗಾರಿ ಭರದಿಂದ ಸಾಗಿದೆ.


Provided by

ಒಂದು ಬದಿಯಲ್ಲಿ ಕಾಮಗಾರಿ ನಡೆಯುತ್ತಿರುವುದರಿಂದ ಇನ್ನೊಂದು ಬದಿಯಲ್ಲಿ ಮಾತ್ರ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಇದರಿಂದಾಗಿ ಇಂದ್ರಾಳಿ ಸೇತುವೆ ಸಮೀಪ ದೊಡ್ಡ ಪ್ರಮಾಣದಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ.

ಸಂಜೆ ಮತ್ತು ಬೆಳಗ್ಗಿನ ಪೀಕ್ ಅವರ್ ನಲ್ಲಿ ಇಂದ್ರಾಳಿಯಿಂದ ಎಂಜಿಎಂವರೆಗೂ ವಾಹನಗಳು ಬಹು ಹೊತ್ತು ನಿಂತು ನಿಂತು ಮುಂದಕ್ಕೆ ಹೋಗಬೇಕಾಗುತ್ತದೆ. ಇನ್ನೊಂದು ಕಡೆಯಲ್ಲಿ ಇಂದ್ರಾಳಿ ಬಸ್‌ನಿಲ್ದಾಣವರೆಗೂ ಸಂಚಾರ ದಟ್ಟಣೆಯಿಂದ ಕೂಡಿರುತ್ತದೆ.


Provided by

ಈ ರಸ್ತೆಯಲ್ಲಿ ಈಗಾಗಲೇ ಭಾರೀ ವಾಹನಗಳನ್ಬು ನಿಷೇಧಿಸಲಾಗಿದ್ದು, ಲಘು ವಾಹನ ಸವಾರರು ರಸ್ತೆ ಕಾಮಗಾರಿ ಪೂರ್ಣಗೊಳ್ಳುವತನಕ ಟ್ರಾಫಿಕ್ ಕಿರಿಕಿರಿ ಎದುರಿಸಬೇಕಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ